ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಉಬರಡ್ಕ ಮನೆ ನಿವಾಸಿ ಹೊನ್ನಪ್ಪ ಗೌಡ ಜ.5 ರಂದು ರಾತ್ರಿ ವೇಳೆ ಹೃದಯಾಘಾತದಿಂದ ನಿಧನರಾದರು. ಮೃತರು ಪ್ರಗತಿ ಪರ ಕೃಷಿಕರಾಗಿದ್ದು, ಪತ್ನಿ, ಇಬ್ಬರು ಗಂಡು ಮಕ್ಕಳು, ಸೊಸೆಯಂದಿರು ಹಾಗೂ ಅಪಾರ ಬಂಧು ಬಳಗದವರನ್ನು ಅಗಲಿದ್ದಾರೆ
ಶಿಬಾಜೆ ಗ್ರಾಮದಲ್ಲಿ ನಡೆದ ದಲಿತ ವ್ಯಕ್ತಿಯ ಕೊಲೆ ಪ್ರಕರಣ: ಹತ್ಯೆಗೆ ಆಕೆ ಕಾರಣವಾಗಿರಬಹುದು
ಶಿಬಾಜೆ: ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ ಕುರಿಯನ್ ಅವರಿಗೆ ಸೇರಿದ ತೋಟವೊಂದರಲ್ಲಿ ನಡೆದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ, ದಲಿತ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆ ಪ್ರಾರಂಭಗೊಂಡು ದಿನಗಳೇ ಕಳೆದರೂ ಆರೋಪಿಗಳ ಪತ್ತೆಯಾಗಿಲ್ಲ ಎನ್ನುವ ಬಗ್ಗೆ ಆಕ್ರೋಶವೊಂದು ಹೊರಬಿದ್ದಿದ್ದು ದಲಿತ ಸಂಘಟನೆಗಳು ಬೀದಿಗಿಳಿಯುವ ಬಗ್ಗೆ ಎಚ್ಚರಿಕೆ ನೀಡಿದೆ. ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ ಕುರಿಯನ್ ಅವರಿಗೆ ಸೇರಿದ ತೋಟವೊಂದರಲ್ಲಿ ಕೆಲಸ ಮಾಡುತ್ತಿದ್ದ ಶ್ರೀಧರ ಎಂಬವರಿಗೆ ನಾಲ್ವರ ತಂಡವೊಂದು ಹಲ್ಲೆಗೈದಿದ್ದರು. ಹಲ್ಲೆಯ […]Read More
ಬಂದಾರು: ಬಂದಾರು ಗ್ರಾಮ ಪಂಚಾಯತ್ ಜನಸ್ನೇಹಿ ಉದ್ಯೋಗ ಖಾತ್ರಿ ಡಾಟಾ ಎಂಟ್ರಿ ಸಿಬ್ಬಂದಿ ಮೊಗ್ರು ಗ್ರಾಮದ ನಾಯಿಮಾರು ಲಲಿತ (38 ವ) ಇವರು ಅನಾರೋಗ್ಯದಿಂದ ಡಿ.15 ರಂದು ಬೆಳಗ್ಗೆ ಸ್ವಗೃಹದಲ್ಲಿ ವಿಧಿವಿಶರಾದರು. ಮೃತರು ಪತಿ ಲವ ,ಗಂಡು ಮಕ್ಕಳಾದ ಸ್ವಸ್ಥಿಕ್ ,ಸಾಕ್ಷಿತ್ ಇವರನ್ನು ಅಗಲಿದ್ದಾರೆ. ಬಂದಾರು ಗ್ರಾಮ ಪಂಚಾಯತ್ ನಲ್ಲಿ 14 ವರ್ಷ ಸೇವೆ ಸಲ್ಲಿಸಿದ್ದು, ಜನರ ಜೊತೆ ನಗುಮೊಗದ ಜನಸ್ನೇಹಿ ಕೆಲಸ ಕಾರ್ಯದಲ್ಲಿ ನಿರತರಾಗಿ,ಅಪಾರ ಜನರ ಪ್ರೀತಿ ಪಾತ್ರರಾಗಿದ್ದರು. ಗ್ರಾ.ಪಂ ಅಧ್ಯಕ್ಷರಾದ ಪರಮೇಶ್ವರಿ ಗೌಡ,ಉಪಾಧ್ಯಕ್ಷರಾದ […]Read More
ಕಣಿಯೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರು, ಎ ಪಿ ಎಂ ಸಿ ಹಾಲಿ ಸದಸ್ಯರು ಹಾಗೂ ವಿವಿಧ ಸಂಘ ಸಂಸ್ಥೆಗಳಲ್ಲಿ ಗುರುತಿಸಿಕೊಂಢಿದ್ದ ಉರುವಾಲು ಗಣೇಶ್ ಕೆರ್ಮುಣ್ಣಾಯ ರವರು ಡಿ 7 ರಂದು ಬೆಳ್ತಂಗಡಿ ಆಸ್ಪತ್ರೆಯಲ್ಲಿ ನಿಧನರಾದರು. ಕೆಲವು ಸಮಯಗಳಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಬೆಳ್ತಂಗಡಿ ಆಸ್ಪತ್ರೆಗೆ ಡಯಾಲಿಸೀಸ್ ಗಾಗಿ ಬರುತ್ತಿದ್ದರು ಆದರೆ ಇಂದು ಬೆಳಿಗ್ಗೆ 4 ಗಂಟೆ ವೇಳೆ ಡಯಾಲಿಸೀಸ್ ಗಾಗಿ ಬಂದಿದ್ದ ವೇಳೆ ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಚಿಕಿತ್ಸೆ ನೀಡಿದರೂ ಸಹ ಚಿಕಿತ್ಸೆ ಫಲಕಾರಿಯಾಗದೆ […]Read More
ಗುರುವಾಯನಕೆರೆ: ಶಿವಾಜಿನಗರ ನಿವಾಸಿ, ರಿಕ್ಷಾ ಚಾಲಕ ಪ್ರವೀಣ್ ಪಿಂಟೋ ಮೃತದೇಹ ಕೆರೆಯಲ್ಲಿ ಪತ್ತೆಯಾದ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು ಪ್ರವೀಣ್ ಪಿಂಟೋ ಅವರ ಪತ್ನಿ ತನಿಖೆ ನಡೆಸುವಂತೆ ಬೆಳ್ತಂಗಡಿ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರವೀಣ್ ಪಿಂಟೋ ಅವರು ನ.29 ರಂದು ರಾತ್ರಿ ಮನೆಯಿಂದ ಮೆಹಂದಿ ಕಾರ್ಯಕ್ರಮಕ್ಕೆಂದು ಹೋಗಿದ್ದರು. ಮೆಹಂದಿ ಕಾರ್ಯಕ್ರಮದ ಮನೆಯಲ್ಲಿ ಪ್ರವೀಣ್ ಹಾಗೂ ಇನ್ನೋರ್ವ ವ್ಯಕ್ತಿಯ ಮಧ್ಯೆ ಮಾತಿನ ಚಕಮಕಿ ಹಾಗೂ ಹೊಡೆದಾಟ ನಡೆದಿರುವ ವಿಚಾರ ಬಳಿಕ ತಿಳಿದುಬಂದಿದೆ. ಮಾತ್ರವಲ್ಲದೆ ರಾತ್ರಿ ತಮ್ಮ. ಮನೆಯ […]Read More
ಇಂದಬೆಟ್ಟು: ತೋಟದಲ್ಲಿ ಕೆಲಸಮಾಡುತ್ತಿದ್ದ ವೇಳೆ ವೃದ್ದರೋರ್ವರ ತಲೆಗೆ ಆಕಸ್ಮಿಕವಾಗಿ ಬಿದ್ದ ಅಡಿಕೆ ಮರ:
ಇಂದಬೆಟ್ಟು: ಬೆಳ್ತಂಗಡಿ ತಾಲೂಕಿನ ಇಂದಬೆಟ್ಟು ಗ್ರಾಮದ ಅಂಕೊತ್ಯಾರು ನಿವಾಸಿ ನವೀನ್ ಎಂಬವರ ಮನೆಯ ತೋಟದಲ್ಲಿ ಅಡಿಕೆ ಮರ ಕಡೆಯುತ್ತಿರುವಾಗ ಆಕಸ್ಮಿಕವಾಗಿ ವೃದ್ದರೋರ್ವರ ತಲೆ ಮೇಲೆ ಬಿದ್ದು ಸಾವನ್ಬಪ್ಪಿದ ಘಟನೆ ನ.30 ರಂದು ನಡೆದಿದೆ. ಸಾವನ್ನಪ್ಪಿದ ವೃದ್ದ ಮುಂಡಾಜೆ ಗ್ರಾಮದ ಮಂಜುಶ್ರೀ ನಗರದ ಕುಂಟಾಲಪಲ್ಕೆ ನಿವಾಸಿ ಅಣ್ಣು (66) ಮೃತಪಟ್ಟ ದುರ್ದೈವಿ. ತಲೆ ಮೇಲೆ ಅಡಿಕೆ ಮರ ಬಿದ್ದ ಪರಿಣಾಮ ಗಂಭೀರ ಗಾಯಗೊಂಡ ಅಣ್ಣು ಅವರನ್ನು ತಕ್ಷಣ ಕೆಲಸಗಾರರು ಸೇರಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ […]Read More
ಗುರುವಾಯನಕೆರೆ: ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಕೊಂಟುಪಳಿಕೆ ಶಿವಾಜಿನಗರ ನಿವಾಸಿ , ರಿಕ್ಷಾ ಚಾಲಕ ಪ್ರವೀಣ್ ಪಿಂಟೋ ಶವ ಗುರುವಾಯನಕೆರೆ ಕೆರೆಯಲ್ಲಿ ಪತ್ತೆಯಾಗಿದೆ. ಇಂದು ಬೆಳಗ್ಗೆ ತನ್ನ ಮಾಲಕರೊಂದಿಗೆ ಫೋನ್ ಕರೆಯ ಮೂಲಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ತಿಳಿಸಿದ್ದರು. ಆ ಹಿನ್ನೆಲೆ ಧರ್ಮಸ್ಥಳ ಶೌರ್ಯ ವಿಪತ್ತು ತಂಡ ಹಾಗೂ ಅಗ್ನಿ ಶಾಮಕ ದಳ ನಿರಂತರ ಹುಡುಕಾಟ ನಡೆಸಿದ್ದಾರೆ. ಶವ ಪತ್ತೆಯಾಗದೇ ಇದ್ದಾಗ ಕೆರೆಗೆ ಹಾರಿದ್ದಾರೆ ಎಂಬುದನ್ನು ಶಂಕಿಸಲಾಗಿತ್ತು. ಆದರೂ ನಿರಂತರ ಹುಡುಕಾಟದಿಂದ ಇದೀಗ ಶವ ಕೆರೆಯಲ್ಲಿ ಪತ್ತೆಯಾಗಿದೆ. […]Read More