ಬೆಳಾಲು: ಬೆಳಾಲು ಗ್ರಾಮದ ನಿಂತಿಕಲ್ಲು ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಸೆ.18 ನಡೆಯಿತು. ಈ ಕಾರ್ಯಕ್ರಮದಲ್ಲಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆಯಾದ ಶ್ರೀಮತಿ ಉಷಾ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಧರ್ಮಸ್ಥಳದ ಆರೋಗ್ಯ ಇಲಾಖೆಯ ಎಲ್ ಎಚ್ ವಿ ಆದ ಶ್ರೀಮತಿ ವಿಜಯಲಕ್ಷ್ಮಿ ಇವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಹಿರಿಯ ಆರೋಗ್ಯ ಕಾರ್ಯಕರ್ತೆ ಶ್ರೀಮತಿ ಹರಿಣಾಕ್ಷಿ ,ಗ್ರಾಮ ಪಂಚಾಯತಿ ಸದಸ್ಯೆಯಾದ ಶ್ರೀಮತಿ ವಿದ್ಯಾ ಶ್ರೀನಿವಾಸ್ ಗೌಡ, ಸಂಜೀವಿನಿ ಒಕ್ಕೂಟದ ಎಂ.ಬಿ.ಕೆಯಾದ ಶ್ರೀಮತಿ ಹರಿಣಾಕ್ಷಿ ,ಶ್ರೀಮತಿ […]
ಮೈರೋಳ್ತಡ್ಕ: ಬಂದಾರು ಗ್ರಾಮದ ಸದಾಶಿವ ಯುವಕ ಮಂಡಲ (ರಿ.) ದಿವ್ಯಶ್ರೀ ಮಹಿಳಾ ಮಂಡಲ (ರಿ.)ಮೈರೋಳ್ತಡ್ಕ ಇವುಗಳ ಸಂಯುಕ್ತ ಆಶ್ರಯದಲ್ಲಿ 33ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ನಡೆದ ಮೊಸರು ಕುಡಿಕೆ ಕಾರ್ಯಕ್ರಮ ಸೆ.18 ರಂದು ಜರುಗಿತು. ಈ ಸಂದರ್ಭದಲ್ಲಿ ಶಾಸಕ ಹರೀಶ್ ಪೂಂಜರವರು ಆಗಮಿಸಿ ಶುಭಹಾರೈಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಕುರಾಯ ಸದಾಶಿವ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಮಹೇಶ್ ಭಟ್ ಹಾಗೂ ಮಲ್ಲಕಂಭದ ಉದ್ಘಾಟನೆಯನ್ನು ಪ್ರಗತಿಪರ ಕೃಷಿಕರಾದ ಶ್ರೀ ಧರ್ಣಪ್ಪ ಗೌಡ ಬಾನಡ್ಕ […]Read More
ಡಿ.ಕೆ. ಆರ್.ಡಿ.ಎಸ್ (ರಿ)ಬೆಳ್ತಂಗಡಿ ಪೌಷ್ಟಿಕ ಆಹಾರ ಮಾಹಿತಿ, ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮ
ಬೆಳ್ತಂಗಡಿ: ಡಿ.ಕೆ.ಆರ್.ಡಿ.ಎಸ್ (ರಿ) ಬೆಳ್ತಂಗಡಿ ನೇತೃತ್ವದಲ್ಲಿ ಕಾರಿತಾಸ್ ಇಂಡಿಯಾ-ಸ್ಪರ್ಶ ಕಾರ್ಯಕ್ರಮ ಹಾಗೂ ಕಾನ್ಫರೆನ್ಸಾ ಎಪಿಸ್ಕೋಪಾಲೆ ಇಟಾಲಿಯಾನ ಇವರ ಆಶ್ರಯದಲ್ಲಿ ಸೆ.16 ರಂದು ಪೌಷ್ಟಿಕ ಆಹಾರ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಹಾಗೂ ಗುರುವಂದನಾ ಕಾರ್ಯಕ್ರಮವು ಬೈಂದೂರು ತಾಲೂಕಿನ ಜಡ್ಕಲ್ ಅಂಗನವಾಡಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಜಡ್ಕಲ್, ಮುದೂರು ಅಂಗನವಾಡಿ ಹಾಗೂ ಮುದೂರು ಭಾರತ್ ಮಾತಾ ಅನುದಾನಿತ ಪ್ರೌಢಶಾಲೆಯಲ್ಲಿ ಆಯೋಜಿಸಲಾಯಿತು ಈ ಕಾರ್ಯಕ್ರಮದಲ್ಲಿ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ಪ್ರಾತ್ಯಕ್ಷಿಕೆ ಹಾಗೂ ಉತ್ತಮ ಪೌಷ್ಟಿಕ ಆಹಾರ ತಯಾರಿಸಿದವರಿಗೆ […]Read More
ಹಿಂದೂ ಜನಜಾಗೃತಿ ಸಮಿತಿಯ ದ್ವಿದಶಕ ವರ್ಧಂತ್ಯೋತ್ಸವದ ಪ್ರಯುಕ್ತ ಹಿಂದೂ ರಾಷ್ಟ್ರ ಸಂಕಲ್ಪಾಭಿಯಾನ: ಹಿಂದೂಗಳ
ಬೆಳ್ತಂಗಡಿ: ಹಿಂದೂ ರಾಷ್ಟ್ರ ಸಂಕಲ್ಪ ಅಭಿಯಾನದ ನಿಮಿತ್ತ ಶ್ರೀ ಜನಾರ್ದನ ದೇವಸ್ಥಾನದ ಶ್ರೀ ರಾಮಕೃಷ್ಣ ಸಭಾ ಮಂಟಪ, ಉಜಿರೆ ಹಾಗೂ ಸುವರ್ಣ ಆರ್ಕೆಡ್ ಸಂತೆಕಟ್ಟೆ ಬಳಿ ಬೆಳ್ತಂಗಡಿಯಲ್ಲಿ ಪ್ರವಚನ ನಡೆಯಿತು. ಸನಾತನ ಸಂಸ್ಥೆಯ ರಾಷ್ಟ್ರೀಯ ವಕ್ತಾರರಾದ ಚೇತನ್ ರಾಜಹಂಸ ಇವರು ಧರ್ಮಾಭಿಮಾನಿಗಳನ್ನು ಉದ್ದೇಶಿಸಿ ಮಾತನಾಡುತ್ತಾ – ಸಮಾಜದಲ್ಲಿ ಇಂದು ಭ್ರಷ್ಟಾಚಾರ, ಮತಾಂತರ, ಲವ್ ಜಿಹಾದ್,ಗೋಹತ್ಯೆ ಮುಂತಾದವುಗಳು ತಾಂಡವವಾಡುತ್ತಿದೆ. ಇದಕ್ಕೆ ಕಾನೂನಿನಲ್ಲಿ ತಡೆಹಿಡಿಯುವ ಅವಕಾಶವಿದ್ದರೂ ವ್ಯವಸ್ಥೆ ಸರಿಯಿಲ್ಲದ ಕಾರಣ ಇದರ ತೊಂದರೆಯನ್ನು ಪ್ರತಿಯೊಬ್ಬರು ಅನುಭವಿಸುತಿದ್ದಾರೆ. ಕಾನೂನಿನ ಮುಖಾಂತರ […]Read More
ಧರ್ಮಸ್ಥಳ: ಶ್ರೀ ಧ ಮ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಸೆ.14 ರಂದು ಸ್ಕೌಟ್ ಗೈಡ್ ಘಟಕದ ಉದ್ಘಾಟನಾ ಸಮಾರಂಭ ನೆರವೇರಿತು . ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಭಾರತ ಸ್ಕೌಟ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿ ಇದರ ಕಾರ್ಯದರ್ಶಿಯಾದ ಪ್ರಮೀಳ ದೀಪ ಪ್ರಜ್ವಲಿಸಿ ಸ್ಕೌಟ್ಸ್ ಗೈಡ್ಸ್ ಘಟಕಕ್ಕೆ ಚಾಲನೆ ನೀಡಿದರು. ತದನಂತರ ವಿದ್ಯಾರ್ಥಿಗಳಿಗೆ ಸ್ಕೌಟ್ ಗೈಡಿನ ಮಹತ್ವವನ್ನ ತಿಳಿಹೇಳಿದರು. ವಿಶೇಷ ಆಹ್ವಾನಿತರಾಗಿ ಶಾಲಾ ಸಂಚಾಲಕರಾದ ಅನಂತಪದ್ಮನಾಭ ಭಟ್ ಆಗಮಿಸಿದ್ದು ಸ್ಕೌಟ್ ಗೈಡ್ನ ಮುಂದಿನ […]Read More
ದೇವಸ್ಥಾನಗಳ ಸುವ್ಯವಸ್ಥಿತ ಕಾರ್ಯನಿರ್ವಹಣೆಗೆ ದೇವಸ್ಥಾನ ಪರಿಷತ್ ಸ್ಥಾಪಿಸಲು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ
ಧರ್ಮಸ್ಥಳ: ಈ ದೇಶದಲ್ಲಿ ಅನೇಕ ದೇವಸ್ಥಾನಗಳು ಹಿಂದೂ ಭಕ್ತರ ಕೈಯಲ್ಲಿದೆ. ದೇವಸ್ಥಾನಗಳ ನಿಧಿಯ ಉಪಯೋಗ, ದೇವಸ್ಥಾನದ ಕಾರ್ಯನಿರ್ವಹಣೆ, ದೇವಸ್ಥಾನದ ಪೂಜಾ ಕೈಂಕರ್ಯ ಹಾಗೂ ದೇವಸ್ಥಾನಗಳಿಂದ ಮಾಡಬೇಕಾದ ಧರ್ಮಕಾರ್ಯಗಳ ಬಗ್ಗೆ ರಾಷ್ಟ್ರಾದ್ಯಂತ ದೇವಾಲಯಗಳ ಪರಿಷತ್ ಮಾಡುವ ಉದ್ದೇಶದಿಂದ ದೇವಸ್ಥಾನಗಳ ಮುಖ್ಯಸ್ಥರಿಗಾಗಿ ಶಿಬಿರಗಳ ಆಯೋಜನೆ ಗಳನ್ನು ಮಾಡಲಾಗುತ್ತದೆ. ಈ ನಿಮಿತ್ತ ಇದರ ಚಾಲನೆಯನ್ನು ನೀಡಲು ಮತ್ತು ಮಾರ್ಗದರ್ಶನವನ್ನು ಪಡೆಯಲು ರಾಜ್ಯ ಸಭಾ ಸದಸ್ಯರು ಹಾಗೂ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾಕ್ಟರ್ . ಡಿ ವೀರೇಂದ್ರ ಹೆಗ್ಗಡೆಯವರನ್ನು ಸನಾತನ ಸಂಸ್ಥೆಯ ವಕ್ತಾರರಾದ […]Read More
ಬೆಳಾಲು: ಬೆಳಾಲು ಗ್ರಾಮದ ಪಾನಡ್ಕ ಅಂಗನವಾಡಿ ಕೇಂದ್ರದಲ್ಲಿ ಪೌಷ್ಟಿಕ ಆಹಾರ ಸಪ್ತಾಹ ಸೆ.13 ರಂದು ನಡೆಯಿತು. ಈ ಕಾರ್ಯಕ್ರಮವನ್ನು ಬೆಳಾಲು ಗ್ರಾಮ ಪಂಚಾಯತ್ ಸದಸ್ಯೆ ವಿದ್ಯಾ ಶ್ರೀನಿವಾಸ್ ಗೌಡ ಉದ್ಘಾಟಿಸಿದರು . ಬೆಳಾಲು ಗ್ರಾಮದ ಸಿಹೆಚ್ಓ ತೇಜಾವತಿ ಇವರು ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪಾನಡ್ಕ ಅಂಗನವಾಡಿ ಕೇಂದ್ರದ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಶ್ರೀಮತಿ ನಿಶಾ ನಿತಿನ್ ಬನಂದೂರ್ ,ಆಶಾ ಕಾರ್ಯಕರ್ತೆ ಡೀಕಮ್ಮ ಉಪಸ್ಥಿತರಿದ್ದರು. ಅಂಗನವಾಡಿ ಶಿಕ್ಷಕಿ ಶ್ರೀಮತಿ ಶೈಲಜಾ ಕಾರ್ಯಕ್ರಮವನ್ನು […]Read More
ಕುಪ್ಪೆಟ್ಟಿ ವಲಯದ ಪ್ರತಿಭಾ ಕಾರಂಜಿ, ಮೈರೋಳ್ತಡ್ಕ,ಉರುವಾಲು ಮತ್ತು ಪದ್ಮುಂಜ ಶಾಲೆಗಳಿಗೆ ಸಮಗ್ರ ಪ್ರಶಸ್ತಿ
ಬಂದಾರು:ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಸಮೂಹ ಸಂಪನ್ಮೂಲ ಕೇಂದ್ರ ಕುಪ್ಪೆಟ್ಟಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆ ಇವರ ಸಹಯೋಗದೊಂದಿಗೆ ಕುಂಟಾಲಪಲ್ಕೆ ಶಾಲೆಯಲ್ಲಿ ನಡೆದ ಕುಪ್ಪೆಟ್ಟಿ ವಲಯ ಮಟ್ಟದ ಸುಮಾರು 16 ಶಾಲೆಗಳ ವಿದ್ಯಾರ್ಥಿಗಳ ವಲಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆಯಲ್ಲಿ ಹಿರಿಯ ಪ್ರಾಥಮಿಕ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಮತ್ತು ಕಿರಿಯ ಪ್ರಾಥಮಿಕ ವಿಭಾಗದಲ್ಲಿ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮೈರೋಳ್ತಡ್ಕ ಪಡೆದುಕೊಂಡಿತು. […]Read More
ಬಂದಾರು: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಬೆಳ್ತಂಗಡಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬೆಳ್ತಂಗಡಿ, ಸಮೂಹ ಸಂಪನ್ಮೂಲ ಕೇಂದ್ರ ಕುಪ್ಪೆಟ್ಟಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂಟಾಲಪಲ್ಕೆ ಇವರ ಸಹಯೋಗದೊಂದಿಗೆ ಕುಪ್ಪೆಟ್ಟಿ ವಲಯ ಮಟ್ಟದ ಸುಮಾರು 16 ಶಾಲೆಗಳ ವಿದ್ಯಾರ್ಥಿಗಳ ‘ವಲಯ ಮಟ್ಟದ ಪ್ರತಿಭಾಕಾರಂಜಿ ಸ್ಪರ್ಧೆ ಕುಂಟಾಲಪಲ್ಕೆ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪರಮೇಶ್ವರಿ ಕೆ,’ ಇಂತಹ ವೇದಿಕೆಗಳು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಸಹಕಾರಿ,ಎಲ್ಲಾ […]Read More
ಅರಸಿನಮಕ್ಕಿ: ಸೆ.11 ರಂದು ನಡೆದ ಹತ್ಯಡ್ಕ ಕೃಷಿ ಪತ್ತಿನ ಸಹಕಾರಿ ಸಂಘ ಇದರ ವಾರ್ಷಿಕ ಸಭೆ ಯ ಅಂಗವಾಗಿ ಅರಸಿನಮಕ್ಕಿ ಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು. ಸಹಕಾರ ನೀಡಬೇಕೆಂಬ ಕೋರಿಕೆಯ ಮೇರೆಗೆ ಕಪಿಲ ಕೇಸರಿಯ ಸ್ವಯಂ ಸೇವಕರಾದ ಕ್ರತಿಕ್ ಭಟ್, ಜಿತೇಂದ್ರ ಗೋಖಲೆ ಶ್ರೀವತ್ಸ ಗೋಖಲೆ ಸುದರ್ಶನ್ ಆಚಾರ್ಯ,ಹರಿಪ್ರಸಾದ್ ,ರೋಹಿತ್ ಗೋಗಟೆ, ಮತ್ತು ಅಧ್ಯಕ್ಷರಾದ ರಾಜೇಶ್ ಬೋಳ್ಳೋಡಿ ಇವರುಗಳು ರಕ್ತದಾನ ಮಾಡಿದರು. ಉಳಿದ ಸ್ವಯಂ ಸೇವಕರಾದ ಸುಮಂತ್ ಗೌಡ ಅಳಕ್ಕೆ ಪ್ರಸನ್ನ ನಾಯಕ್, ಅನ್ವಿತ್ ರೈ […]Read More