• June 16, 2024

ಬೆಳಾಲು: ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳಿಂದ ಕೃತ್ಯ: ಅಂದಾಜು 20,000 ರೂ ವರೆಗೆ ನಷ್ಟ

 ಬೆಳಾಲು: ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಿಡಿಗೇಡಿಗಳಿಂದ ಕೃತ್ಯ: ಅಂದಾಜು 20,000 ರೂ ವರೆಗೆ ನಷ್ಟ

ಬೆಳಾಲು: ಬೆಳಾಲು ಗ್ರಾಮದ ಶ್ರೀ ಸರಸ್ವತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಬೆಳಾಲು ಇಲ್ಲಿ ಯಾರೋ ಕಿಡಿಗೇಡಿಗಳು ಕಳ್ಳತನಕ್ಕೆ ಮುಂದಾಗಿದ್ದು ಶಾಲೆಯೊಳಗಿದ್ದ ಕರೆಂಟ್ ವಯರ್ ಗಳನ್ನು ಕಿತ್ತು ಗೋಡೆಯನ್ನು ಒಡೆದು ಹೇಯ ಕೃತ್ಯವನ್ನು ಎಸಗಿರುವ ಘಟನೆ ನಡೆದಿದೆ.

ಈ ಮೊದಲು ಇಂತಹ ಘಟನೆ ನಡೆದಿದ್ದು ಶಾಲೆಗೆ ಅಳವಡಿಸಲಾಗಿದ್ದ ಸಿಸಿ ಕ್ಯಾಮೆರವನ್ನು ಪುಡಿಮಾಡಲಾಗಿತ್ತು. ಇದೀಗ ಅಲ್ಲಿ ಸಿಸಿ ಕ್ಯಾಮೆರ ಇಲ್ಲದುದನ್ನು ಅರಿತ ಕಿಡಿಗೇಡಿಗಳು ಈ ಅವಾಂತರವನ್ನು ಸೃಷ್ಠಿಮಾಡಿದ್ದಾರೆ.

ಶಾಲೆಯ ಮುಖ್ಯ ಶಿಕ್ಷಕರಾದ ಚಿದಾನಂದ ಅವರು ಆದಿತ್ಯವಾರ ಶಾಲೆಯಲ್ಲಿ ಕರ್ತವ್ಯ ಮುಗಿಸಿ, ಗುರುವಾರ ವಾಪಾಸ್ಸು ಶಾಲೆಗೆ ಹೋಗಿ ನೊಡಿದಾಗ ಈ ಹೇಯ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ.

ಒಟ್ಟು 20,000 ರೂಪಾಯಿಯವರೆಗೆ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಇಲ್ಲಿ 1 ರಿಂದ 7 ರವರೆಗೆ ತರಗತಿಗಳಿದ್ದು
ಒಟ್ಟು 76 ವಿದ್ಯಾರ್ಥಿಗಳು ವಿದ್ಯಾಭ್ಯಾಸವನ್ನು ನಡೆಸುತ್ತಿದ್ದಾರೆ

Related post

Leave a Reply

Your email address will not be published. Required fields are marked *

error: Content is protected !!