• November 22, 2024

ಮಂಗಳೂರು : ವೈದ್ಯರ ನಿರ್ಲಕ್ಷ್ಯ: ಕುಕ್ಕೇಡಿಯ ಗರ್ಭಿಣಿ ಬಲಿ

 ಮಂಗಳೂರು : ವೈದ್ಯರ ನಿರ್ಲಕ್ಷ್ಯ: ಕುಕ್ಕೇಡಿಯ ಗರ್ಭಿಣಿ ಬಲಿ

 

ಬೆಳ್ತಂಗಡಿ: ಹೆರಿಗೆಗೆಂದು ಆಸ್ಪತ್ರೆಗೆ ದಾಖಲಾಗಿದ್ದ ಗರ್ಭಿಣಿ ಮಹಿಳೆಯೊಬ್ಬರು ಆಸ್ಪತ್ರೆಯಲ್ಲೇ ಮೃತಪಟ್ಟ ಘಟನೆ ವರದಿಯಾಗಿದೆ.

ಸಾವಿಗೆ ವೈದ್ಯರ ನಿರ್ಲಕ್ಷ್ಯ ಎನ್ನುವ ಗಂಭೀರ ಆರೋಪ ವ್ಯಕ್ತವಾದ ಬೆನ್ನಲ್ಲೇ ಮಹಿಳೆಯ ಸಂಬಂಧಕರು ಪ್ರತಿಭಟಿಸಿದಾಗ ಪೊಲೀಸ್ ಬಲ ಪ್ರಯೋಗ ನಡೆದಿದ್ದು, ಸಾವಿಗೆ ಕಾರಣವಾದ ವೈದ್ಯರ ವಿರುದ್ಧ ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಳ್ತಂಗಡಿ ತಾಲೂಕಿನ ಕುಕ್ಕೇಡಿ ನಿವಾಸಿ ಪ್ರದೀಪ್ ಆಚಾರ್ಯ ಎಂಬವರ ಪತ್ನಿ ಶಿಲ್ಪಾ ಆಚಾರ್ಯ ಮೃತ ದುರ್ದೈವಿ.

ತುಂಬು ಗರ್ಭಿಣಿ ಮಹಿಳೆ ಶಿಲ್ಪಾ ಆಚಾರ್ಯ ಚೊಚ್ಚಲ ಹೆರಿಗೆಗಾಗಿ ಮಂಗಳೂರಿನ ಹೆಸರಾಂತ ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದರು.ಆದರೆ ಕರ್ತವ್ಯದಲ್ಲಿದ್ದ ವೈದ್ಯರು ಸಿಝರಿನ್ ಮೂಲಕ ಹೆರಿಗೆ ಮಾಡಿಸಬೇಕು ಎಂದು ಹೇಳಿದ್ದರು ಎನ್ನಲಾಗಿದೆ.

ಈ ವೇಳೆ ಅಲ್ಲಿನ ಮಹಿಳಾ ವೈದ್ಯೆ ಎಂಬವರಿಗೆ ಕರೆ ಮಾಡಿದಾಗ ಭಾನುವಾರದ ಕಾರಣ ಹೇಳಿದ್ದರು. ಈ
ವೇಳೆ ಬೇರೊಬ್ಬ ವೈದ್ಯರು ಹೆರಿಗೆ ಮಾಡಿಸಿದ್ದು, ಹೆಣ್ಣು ಮಗುವಿನ ಜನನದ ಬಳಿಕ ಗರ್ಭಕೋಶವನ್ನೇ ತೆಗೆಯಬೇಕು ಎನ್ನುವ ಸೂಚನೆ ಕುಟುಂಬಕ್ಕೆ ಶಾಕ್ ನೀಡಿದೆ. ಎರಡು ದಿನಗಳ ಬಳಿಕ ಬಾಣಂತಿಗೆ ಜ್ವರ ಬಂದಿದ್ದು, ಕೂಡಲೇ ಐಸಿಯು ಗೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗಿದ್ದು ಮೇಜರ್ ಬ್ರೈನ್ ಡ್ಯಾಮೇಜ್ ಆಗಿದೆ ಎಂದು ವೈದ್ಯ ಮೂಲಗಳು ತಿಳಿಸಿವೆ.

ಆದರೆ ಜುಲೈ 25 ರಂದು ಬಾಣಂತಿ ಶಿಲ್ಪಾ ಆಚಾರ್ಯ ಮೃತಪಟ್ಟಿದ್ದು ವೈದ್ಯರ ನಿರ್ಲಕ್ಷಕ್ಕೆ ಆಕೆಯ ಸಂಬಂಧಿಕರು ಆಕ್ರೋಶ ಹೊರಹಾಕಿದ್ದಾರೆ.ಈ ಬಗ್ಗೆ ಆಕೆಯ ಪತಿ ಠಾಣೆಗೆ ದೂರು ನೀಡಿದ ಬಳಿಕ ಮಳೆಯ ನಡುವೆಯೂ ಆಸ್ಪತ್ರೆಯ ಮುಂಭಾಗದಲ್ಲಿ ಆಡಳಿತ ಮಂಡಳಿಯ ಮಧ್ಯಪ್ರವೇಶಕ್ಕಾಗಿ ಪ್ರತಿಭಟಿಸಲಾಯಿತು.

ಈ ವೇಳೆ ಪೊಲೀಸ್ ಬಲ ಪ್ರಯೋಗ ನಡೆದಿದೆ ಎನ್ನುವ ಆರೋಪವೂ ಕೇಳಿ ಬಂದಿದ್ದು,ಚೊಚ್ಚಲ ಹೆರಿಗೆಗೆ ದಾಖಲಾದ ಗರ್ಭಿಣಿಯ ಸಾವಿಗೆ ನ್ಯಾಯ ಕೇಳಿದಾಗ ಪೊಲೀಸರು ಬಲ ಪ್ರಾಯೋಗಿಸಿ ಶವ ಸಾಗಿಸಿದ್ದಾರೆ ಎನ್ನುವ ಗಂಭೀರ ಆರೋಪ ವ್ಯಕ್ತವಾಗುವ ಮಧ್ಯೆ ಎ.ಜೆ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ನಾಗರೀಕ ಸಮಾಜ ಆಕ್ರೋಶ ಹೊರಹಾಕಿದೆ.





Related post

Leave a Reply

Your email address will not be published. Required fields are marked *

error: Content is protected !!