ನೆರಿಯದ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ: ತನಿಖೆ ನಡೆಸುತ್ತಿರುವ ಪೊಲೀಸರು
ನೆರಿಯ: ಮಂಗಳೂರಿನ ಕುಲಶೇಖರದ ಬಾಡಿಗೆ ಮನೆಯಲ್ಲಿದ್ದ ನೆರಿಯದ ಯುವತಿಯೋರ್ವಳು ಮಂಗಳೂರಿನ ಬಾಡಿಗೆ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜೂ.19 ರಂದು ನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಯುವತಿ ನೆರಿಯ ನಿವಾಸಿ ಅದಿರಾ ಎಂದು ತಿಳಿದುಬಂದಿದೆ.
ಈಕೆ ನೀರುಮಾರ್ಗದ ಮಂಗಳಾ ಕಾಲೇಜಿನಲ್ಲಿ ಮೊದಲನೇ ವರ್ಷದ ಪ್ಯಾರಮೆಡಿಕಲ್ ಕಲಿಯುತ್ತಿದ್ದರು. ಜೂ.18 ರಂದು ರಾತ್ರಿ ಅದಿರಾ ಹಾಗೂ ಇನ್ನೊಂದು ಕೋಣೆಯಲ್ಲಿ ಅಣ್ಣ ಹಾಗೂ ರೋಹಿತ್ ಎಂಬವರು ಮಲಗಿದ್ದರು ಎನ್ನಲಾಗಿದೆ. ಬೆಳಗ್ಗೆ ಅದಿರಾ ಕೋಣೆಯನ್ನು ನರೇಂದ್ರ ನೋಡಿದಾಗ ಅದಿರಾ ಚೂಡಿದಾರ್ ಶಾಲ್ ಅಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದೆ. ತಂದೆ ದಾಸ್ ಅವರಿಗೆ ವಿಷಯ ತಿಳಿದು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗಲೆ ಆಕೆಯ ಉಸಿರು ಚೆಲ್ಲಿದೆ.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬರಬೇಕಾಗಿದೆ. ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.