ಬೆಳ್ತಂಗಡಿ: ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನ: ದೇವಸ್ಥಾನದ ಪಕ್ಕದ ಮನೆಯಲ್ಲೂ ಕಳ್ಳತನ
ಬೆಳ್ತಂಗಡಿ: ತಾಲೂಕಿನ ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿರುವ ಘಟನೆ ನೆನ್ನೆ ರಾತ್ರಿ ವೇಳೆ ನಡೆದಿದೆ.
ಈ ವೇಳೆ ದೇವಸ್ಥಾನದ ಸಿಬ್ಬಂದಿಗಳಿಗೆ ತಿಳಿದು ಎಚ್ಚರಗೊಂಡು ಬೊಬ್ಬೆಹೊಡೆದಿದ್ದು ಕಳ್ಳರು ಪರಾರಿಯಾಗಿದ್ದಾರೆ ಎಂದು ವರದಿಯಾಗಿದೆ.
ದೇವಸ್ಥಾನದ ಹಿಂಬದಿಯಿಂದ ಏಣಿ ಇಟ್ಟು ಕಳ್ಳತನಕ್ಕೆ ಪ್ರಯತ್ನಿಸಿದ್ದಾರೆ. ಅದೇ ದಿನ ದೇವಸ್ಥಾನದ ಸಮೀಪದ ಮನೆಯಲ್ಲಿ ಕಳ್ಳತನ ನಡೆದಿದ್ದು, ಬೆಳ್ತಂಗಡಿ ಪೊಲೀಸರು ತನಿಖೆ ನಡೆಸಿದ್ದಾರೆ. ಹೆಚ್ಚಿನ ಮಾಹಿತಿ ಲಭ್ಯವಾಗಬೇಕಾಗಿದೆ.