ಪುತ್ತೂರಿನಲ್ಲಿ ಬಿಜೆಪಿ ನಾಯಕರ ಬ್ಯಾನರ್ ಪ್ರಕರಣ: ಪೊಲೀಸರಿಂದ ಮಾರಣಾಂತಿಕ ಹಲ್ಲೆ: ಗಾಯಗೊಂಡ ಕಾರ್ಯಕರ್ತರ ಆರೋಗ್ಯ ವಿಚಾರಿಸಿ ಧೈರ್ಯ ತುಂಬಿದ ಹರೀಶ್ ಪೂಂಜ
ಪುತ್ತೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಮತ್ತು ಶ್ರದ್ಧಾಂಜಲಿ ಕೋರಿ ಹಾಕಿದ್ದ ಬ್ಯಾನರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾದ ಒಂಬತ್ತು ಮಂದಿಗೆ ಪೋಲಿಸರು ಥರ್ಡ್ ಗ್ರೇಡ್ ಟ್ರೀಟ್ಮೆಂಟ್ ನೀಡಿರುವ ಆಘಾತಕಾರಿ ವಿಚಾರ ಬಯಲಾಗಿದೆ.
ಪೋಲಿಸರ ಹಲ್ಲೆಗೆ ಸಂಬಂಧಿಸಿದ ಫೋಟೋ ಹಾಗೂ ವಿಡಿಯೋಗಳು ಭಾರೀ ವೈರಲ್ ಆಗಿದ್ದು, ಬಿಜೆಪಿಯ ಉನ್ನತ ನಾಯಕರುಗಳ ಒತ್ತಡ ಹಾಗೂ ಪುತ್ತೂರಿನ ಕೆಲ ಬಿಜೆಪಿಗರ ಒಳಸಂಚಿನ ಕರಾಳತೆಯನ್ನು ಈ ಘಟನೆ ತೆರೆದಿಟ್ಟಿದೆ.
ಗಂಭೀರವಾಗಿ ಗಾಯಗೊಂಡಿರುವ ಕಾರ್ಯಕರ್ತರು ಆಸ್ಪತ್ರೆ ಸೇರಿದ್ದು, ಈ ಹಿನ್ನೆಲೆ ವಿಷಯ ತಿಳಿದು ತಡ ರಾತ್ರಿ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜ ತಕ್ಷಣ ತಡರಾತ್ರಿ ಆಸ್ಪತ್ರೆಗೆ ಭೇಟಿ ನೀಡಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದ್ದಾರೆ.ಘಟನೆಯನ್ನು ಖಂಡಿಸಿದ್ದಾರೆ.