ಬೆಳ್ತಂಗಡಿ: ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದ ಪ್ರಣಾಳಿಕೆಯನ್ನು ನಾನು ಸ್ವಾಗತಿಸುತ್ತೇನೆ: ಸಮಾಜದಲ್ಲಿ ಕಾಂಗ್ರೆಸ್ ಗೆ ಹೆಚ್ಚಿನ ಬೆಂಬಲ ಸಿಗುತ್ತಿದೆ
ಬೆಳ್ತಂಗಡಿ: ದ.ಕ ಜಿಲ್ಲೆ ಕರಾವಳಿ ಭಾಗದಲ್ಲಿ ಕಾಂಗ್ರೆಸ್ ಪಕ್ಷ ಇವತ್ತು ಬಿಜೆಪಿಗಿಂತ ಹೆಚ್ಚು ಸ್ಥಾನಗಳನ್ನು ಪಡೆಯುತ್ತಿದೆ. ಕರಾವಳಿ ಕರ್ನಾಟಕದಲ್ಲಿ ಇವತ್ತು ಹೆಚ್ಚಾಗಿ ಕಾಂಗ್ರೆಸ್ ಗೆ ಬೆಂಬಲ ಸಿಗುತ್ತಿದೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಜನರಲ್ಲಿ ಬಿಜೆಪಿಯ ವಿರುದ್ಧ ಇದ್ದ ನಿರಾಶಕ್ತಿ ಇಂದು ಎದ್ದು ಕಾಣುತ್ತಿದೆ. ಬಿಜೆಪಿಯವರು ಯಾವುದೇ ಮಾತನ್ನು ನೆರವೇರಿಸುವುದಿಲ್ಲ ಅವರು ಯಾವುದೇ ಆಶ್ವಾಸನೆ ಕೊಟ್ಟರೂ ಆ ಮಾತನ್ನು ಈಡೆರಿಸುವುದಿಲ್ಲ ಕಾಂಗ್ರೆಸ್ ಮತ್ತೊಮ್ಮೆ ಅಧಿಕಾರಕ್ಕೆ ಬರಬೇಕು ಸಮಾಜದ ಮತದಾರರ ಅಭಿಪ್ರಾಯ ಎಂದು
ವಿಧಾನ ಪರಿಷತ್ ಮಾಜಿ ಸದಸ್ಯರಾದ ಕೆಪಿಸಿಸಿ ವಕ್ತಾರರಾದ ಐವನ್ ಡಿಸೋಜಾ ಡಿಸೋಜ ಮಾತನಾಡಿದ್ರು.
ಅವರು ಮೇ. 2 ರಂದು ಗುರುನಾರಾಯಣ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಾಂಗ್ರೆಸ್ ಪಕ್ಷ 6 ಗ್ಯಾರಂಟಿಗಳನ್ನು ನೀಡಿದೆ . ಈ ಕಾರ್ಡನ್ನು ಜನರು ಮುಗ್ದ ಮನಸ್ಸಿನಲ್ಲಿ ಸ್ವಾಗತಿಸಿದ್ದಾರೆ. ಮೇ. 10 ರಂದು ಕಾಂಗ್ರೆಸ್ ಪಕ್ಷದ ಪರ ಮತಚಲಾಯಿಸಲು ಮತದಾರರು ಸಿದ್ದರಾಗಿದ್ದಾರೆ. ಈಗಿನ ಸರಕಾರ ಅಲ್ಪಸಂಖ್ಯಾತ ರಿಗೆ ಒಂದೇ ಒಂದು ಸ್ಪರ್ಧೆ ಮಾಡಲು ಅವಕಾಶ ನೀಡಿಲ್ಲ. ಎಂಬುವುದು ಪ್ರಜಾಪ್ರಭುತ್ವದಲ್ಲಿ ಕಪ್ಪು ಚುಕ್ಕೆ. ಹರೀಶ್ ಪೂಂಜರು ಚರ್ಚ್ ಮುಂದೆ ಮತಪ್ರಚಾರ ಮಾಡಿದ್ದಾರೆ ಮತ ಕೊಡಿ ಎಂದು ಕೇಳುತ್ತಾರೆ ಇದು ಬೇಸರದ ಸಂಗತಿ. ಮುಸ್ಲಿಂ ಮರ ಮತದಾನ ಬೇಡ ಎಂದು ಹೇಳಿ ಮತಯಾಚನೆ ಗೈಯುತ್ತಿದ್ದಾರೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಎಐಸಿಸಿ ಸಂಜೀವ್ ಜೋಸೆಫ್,ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಮೋಹನ್ ಗೌಡ, ಜಿಲ್ಲಾ ಯುತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಭಿನಂದನ್ ಹರೀಶ್ ಕುಮಾರ್, ಮಾಜಿ ತಾಲೂಕು ಸಮಿತಿ ಸದಸ್ಯರಾದ ವಿಲ್ಸನ್ ಡಿಸೋಜಾ, ಮಡಂತ್ಯಾರ್ ಪಂಚಾಯತ್ ಮಾಜಿ ಸದಸ್ಯರಾದ ರಾಜ್ ಶೇಖರ್ ಶೆಟ್ಟಿ , ಉಜಿರೆ ಗ್ರಾ.ಪಂ ಸದಸ್ಯರಾದ ಅನಿಲ್ ಡಿಸೋಜಾ ಉಪಸ್ಥಿತರಿದ್ದರು.