ಮೇಲಂತಬೆಟ್ಟು: ಶ್ರೀ ಭಗವತಿ ಅಮ್ಮನವರ ದೇವಸ್ಥಾನಕ್ಕೆ ಹೋಗುವ ರಸ್ತೆಗೆ ಬೇಲಿ ಹಾಕಿ ವಿಕೃತಿ ಮೆರೆದ ಕಿಡಿಗೇಡಿಗಳು
ಮೇಲಂತಬೆಟ್ಟು: ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಶ್ರೀ ದೇವಿ ಭಗವತಿ ಅಮ್ಮನವರ ದೇವಸ್ಥಾನದಲ್ಲಿ ಎ.3 ರಿಂದ ಎ 7 ರವರೆಗೆ ಬ್ರಹ್ಮಕಲಶೋತ್ಸವ ವೈಭವದಿಂದ ಜರುಗಲು ಸಜ್ಜಾಗುತ್ತಿದ್ದ ಬೆನ್ನಲ್ಲೇ ದೇವಸ್ಥಾನಕ್ಕೆ ಸಾಗುವ ರಸ್ತೆಗೆ ಎ. 2 ರಂದು ಖಾಸಗಿ ವ್ಯಕ್ತಿಯೋರ್ವರು ಬೇಲಿ ಹಾಕಿರುವ ಘಟನೆ ನಡೆದಿದೆ.
ಜೇಸಿಬಿ ಮೂಲಕ ಮೇಲಂತಬೆಟ್ಟು ಗ್ರಾ.ಪಂ ನಿಂದ ರಸ್ತೆ ಸರಿಪಡಿಸುವ ಕಾರ್ಯವನ್ನು ಆರಂಭಿಸಿರುವ ವೇಳೆ ಏಕಾಏಕಿ ಖಾಸಗಿ ವ್ಯಕ್ತಿಯೋರ್ವ ನುಗ್ಗಿ ಜೆಸಿಬಿ ಕೆಲಸವನ್ನು ತಡೆಗಟ್ಟಿ ಜೆಸಿಬಿಯನ್ನು ವಾಪಾಸ್ ಕಳಹಿಸಿ, ಬೇಲಿ ಹಾಕಿ ಹೋಗಿದ್ದಾರೆ.
ರಸ್ತೆ ಬಂದ್ ಮಾಡಿರುವ ಕಾರಣ ದೇವಸ್ಥಾನದ ಆಡಳಿತ ಮಂಡಳಿ ಕಂಗಾಲಾಗಿದ್ದು, ಮೇಲಂತಬೆಟ್ಟು ಗ್ರಾ.ಪಂ ಕೂಡ ಮೌನಮುರಿದಿದ್ದಾರೆ.