ಮಾದಕದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನದ ಪೋಸ್ಟರ್ ಮತ್ತು ಕರಪತ್ರ ಬಿಡುಗಡೆ
“ಲಹರಿಯ ಆವೇಶ ಸಮಾಜದ ವಿನಾಶ” ಎಂಬ ಘೋಷಣೆಯೊಂದಿಗೆ, ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿಯು, ರಾಜ್ಯದಾದ್ಯಂತ ರೇಂಜ್ ಕೇಂದ್ರಗಳಲ್ಲಿ, ಮಾದಕದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನ ಪ್ರಯುಕ್ತ ನಡೆಯುವ SBS ಬಾಲ ಮಸೀರ (ಮದ್ರಸಾ ವಿದ್ಯಾರ್ಥಿಗಳ ರ್ಯಾಲಿ) ಹಾಗೂ ಸಂದೇಶ ಭಾಷಣ ಕಾರ್ಯಕ್ರಮದ ಪೋಸ್ಟರ್ ಮತ್ತು ಕರಪತ್ರವನ್ನು, SJM ರಾಜ್ಯ ಕಛೇರಿ ಮಂಗಳೂರು ನಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ, ರಾಜ್ಯ ಪ್ರಧಾನ ಕಾರ್ಯದರ್ಶಿ KKM ಕಾಮಿಲ್ ಸಖಾಫಿ ಯವರು, ಜಾತಿ ಧರ್ಮ ಭೇದವಿಲ್ಲದೆ ಸರ್ವರಿಗೂ ಇಂದು ತಲೆನೋವಾಗಿ ಪರಿಣಮಿಸಿರುವ ಮಾದಕದ್ರವ್ಯ ಸೇವನೆಯು, ಸ್ವಸ್ಥ ಸಮಾಜವನ್ನು ವಿನಾಶಕ್ಕೆ ತಳ್ಳುತ್ತಿದೆ. ಪ್ರಾಥಮಿಕ ಶಾಲೆಯಿಂದ ಆರಂಭಗೊಂಡು ಡಿಗ್ರಿ ಸ್ನಾತಕೋತ್ತರ ಪದವಿ ಪಡೆದವರು ಅಲ್ಲದವರೂ ಇದಕ್ಕೆ ಬಲಿಯಾಗಿರುವುದು ಖೇದಕರ. ಈ ನಿಟ್ಟಿನಲ್ಲಿ ಸುನ್ನೀ ಜಂ-ಇಯ್ಯತುಲ್ ಮುಅಲ್ಲಿಮೀನ್ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯದಾದ್ಯಂತ ರೇಂಜ್ ಕೇಂದ್ರಗಳಲ್ಲಿ ಮಾದಕದ್ರವ್ಯ ವಿರೋಧಿ ಜನಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಮದ್ರಸಾ SBS ವಿದ್ಯಾರ್ಥಿಗಳಿಂದ ಬಾಲ ಮಸೀರ (ರ್ಯಾಲಿ) ಹಾಗೂ ಸಂದೇಶ ಭಾಷಣ ಕಾರ್ಯಕ್ರಮಗಳು ನಡೆಯಲಿವೆ. ಇದರ ಪೋಸ್ಟರ್ ಮತ್ತು ಕರಪತ್ರ ಈಗಾಗಲೇ ಬಿಡುಗಡೆಯಾಗಿದೆ. ಸರ್ವ ಶಾಂತಿ ಪ್ರಿಯರು ಕೈ ಜೋಡಿಸಬೇಕೆಂದು ಕರೆ ನೀಡಿದರು.
ರಾಜ್ಯ ಮಿಶನರಿ ವಿಭಾಗದ ಕಾರ್ಯದರ್ಶಿ NM ಶರೀಫ್ ಸಖಾಫಿ ನೆಕ್ಕಿಲ್ ರವರು ಸ್ವಾಗತಿಸಿದರು. ರಾಜ್ಯ ಉಪಾಧ್ಯಕ್ಷರಾದ ಮುಫತ್ತಿಶ್ ಹನೀಫ್ ಮಿಸ್ಬಾಹಿ ಪ್ರಾರ್ಥಿಸಿದರು. ವೇದಿಕೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ಅಝೀಝ್ ನೂರಾನಿ, ಇಬ್ರಾಹಿಂ ಸಖಾಫಿ ಕಬಕ, ದಾವಣಗೆರೆ ಜಿಲ್ಲಾ ಮಿಶನರಿ ಕಾರ್ಯದರ್ಶಿ ಶಿಹಾರುದ್ದೀನ್ ಹಿಮಮಿ, ದಕ್ಷಿಣ ಕನ್ನಡ ಜಿಲ್ಲಾ ವೆಸ್ಟ್ ಮಿಶನರಿ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮುಸ್ಲಿಯಾರ್, ಉಡುಪಿ ಜಿಲ್ಲಾ ಮಿಶನರಿ ಕಾರ್ಯದರ್ಶಿ ಉಮರ್ ಸಅದಿ ಅಲ್ ಅಫ್ಳಲಿ ಮೊದಲಾದವರು ಉಪಸ್ಥಿತರಿದ್ದರು.