ಹಿಂದೂ ಜನಜಾಗೃತಿ ಸಮಿತಿಯಿಂದ ಮಂಗಳೂರು ತಾಲೂಕಿನ ಸುರತ್ಕಲ್ ಮದ್ಯದಲಿ ಹಿಂದೂ ರಾಷ್ಟ್ರಜಾಗೃತಿ ಸಭೆ ಸಂಪನ್ನ
ಮಂಗಳೂರು : ಹಿಂದೂ ಧರ್ಮವೂ ಅನಾದಿ ಮತ್ತು ಅನಂತವಾಗಿದೆ. ಹಿಮಾಲಯದಿಂದ ಕನ್ಯಾಕುಮಾರಿವರೆಗೆ ಇರುವಂತಹ ದೇವ ನಿರ್ಮಿತ ದೇಶವಿದು. ಭಾರತ ದೇಶವು ಪ್ರಪಂಚದ ದೇವರ ಕೋಣೆಯಾಗಿದೆ. ಕೇವಲ ಹಿಂದೂ ಧರ್ಮದಲ್ಲಿ ಮಾತ್ರ ಮೋಕ್ಷ ಪಡೆಯುವ ವಿಚಾರ ಮಾಡಲಾಗುತ್ತದೆ. ಹಿಂದೂ ಧರ್ಮವು ಒಂದು ದೊಡ್ಡ ಮುಷ್ಟಿ ಇದ್ದಂತೆ. ಆದರೆ ಅದನ್ನು ಸಡಿಲ ಮಾಡುವ ಷಡ್ಯಂತ್ರ ಈಗ ನಡೆಯುತ್ತಿದೆ. ಆದರೆ ನಾವೆಲ್ಲರೂ ಒಗ್ಗಟ್ಟಾಗಿ ಇದನ್ನು ತಡೆಯಬೇಕಾಗಿದೆ ಎಂದು ನಟರಾಜ ಪರ್ಕಳ ಇವರು ಹಿಂದೂ ಜನಜಾಗೃತಿ ಸಮಿತಿ ನ.15 ರಂದು ಆಯೋಜಿಸಿದ ಹಿಂದೂ ರಾಷ್ಟ್ರ ಜಾಗೃತಿ ಸಭೆಯಲ್ಲಿ ಹೇಳಿದರು.
ಹಲಾಲ್ ವಸ್ತುಗಳನ್ನು ಬಹಿಷ್ಕರಿಸಿರಿ!
ಹಲಾಲ್ ಅರ್ಥವ್ಯವಸ್ಥೆಯಿಂದ ಇವತ್ತು ದೇಶವನ್ನು ದುರ್ಬಲಗೊಳಿಸುವ ಪ್ರಯತ್ನ ಆಗುತ್ತಿದೆ. ಆದರೆ ಹಿಂದೂಗಳು ಜಾಗೃತರಾಗಿ ಹಲಾಲ್ ವಸ್ತುಗಳನ್ನು ಬಹಿಷ್ಕರಿಸಬೇಕಾಗಿದೆ. ಇಂದು ನಾವು ದೇಶ ಕಟ್ಟುವ ಕಾರ್ಯ ಮಾಡಬೇಕಾಗಿದೆ. ಅದಕ್ಕಾಗಿ ಹಿಂದೂ ಧರ್ಮದ ಆಚರಣೆಗಳನ್ನು ಅರ್ಥಮಾಡಿಕೊಂಡು ಕೃತಿ ಮಾಡಬೇಕಾಗಿದೆ ಎಂದು ಅವರು ಹೇಳಿದರು.
ಇಂದು ಬಹುಸಂಖ್ಯಾತ ಹಿಂದೂಗಳಿರುವ ಭಾರತದಲ್ಲಿ ಜಾತ್ಯತೀತತೆ ಹೆಸರಿನಲ್ಲಿ ಹಿಂದೂ ಧರ್ಮದ ಮತ್ತು ಸಮಾಜದ ಮೇಲೆ ನಿರಂತರ ದೌರ್ಜನ್ಯ, ಆಘಾತಗಳು ಘಟಿಸುತ್ತಿರುವುದು ತುಂಬಾ ವಿಷಾದನೀಯವಾಗಿದೆ. ಇದರಿಂದ ಪ್ರತಿಯೊಬ್ಬ ಹಿಂದೂವೂ ಇದರ ಬಗ್ಗೆ ಅರಿತುಕೊಂಡು ಈ ದಬ್ಬಾಳಿಕೆಯ ವಿರುದ್ಧ ಹೋರಾಟ ಮಾಡಬೇಕಿದೆ. ಇಂದು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾನೂನು ಇದ್ದರೂ ನಿರಂತರ ಗೋಹತ್ಯೆ ಪ್ರಕರಣಗಳು ಆಗುತ್ತಿದೆ. ಇದರ ಜೊತೆಗೆ ಇಂದು ಲವ್ ಜಿಹಾದ್, ಲ್ಯಾಂಡ್ ಜಿಹಾದ್ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿದೆ. ಇದರ ಬಗ್ಗೆ ಜಾಗರೂಕರಾಗಿರಬೇಕಾಗಿದೆ. ಇಂತಹ ದಬ್ಬಾಳಿಕೆಯನ್ನು ತಡೆಯಲು ಹಿಂದೂ ರಾಷ್ಟ್ರ ಸ್ಥಾಪಿಸುವುದೊಂದೇ ಪರಿಹಾರವಾಗಿದೆ ಎಂದು ಸನಾತನ ಸಂಸ್ಥೆಯ ಲಕ್ಷ್ಮೀ ಪೈ ತಿಳಿಸಿದರು.