ಗ್ಯಾಸ್ ಸಿಲಿಂಡರ್ ಡೆಲಿವರಿ ಶುಲ್ಕ ನೀಡುವಂತಿಲ್ಲ: ಜಾಸ್ತಿ ಹಣ ಕೇಳಿದರೆ ಇಲ್ಲಿ ದೂರು ಸಲ್ಲಿಸಿ
ಇತ್ತೀಚೆಗೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆ ನಿಜಕ್ಕೂ ಜನರನ್ನ ಹೈರಾಣಾಗಿಸಿದೆ. ಅದರಲ್ಲೂ ಜನಸಾಮಾನ್ಯರಿಗೆ ಅಗತ್ಯವಾಗಿ ಒಂದು ಕಡೆ ಬೆಲೆ ಏರಿಕೆಯ ಬಿಸಿ ತಾಗಿದರೆ ಇನ್ನೊಂದು ಕಡೆ ಸಿಲಿಂಡರ್ ಬೆಲೆ ಜೊತೆಗೆ ಎಕ್ಸ್ಟ್ರಾ ಹಣ ನೀಡುವುದು ಮತ್ತೊಂದು ತಲೆನೋವು ಆಗಿ ಪರಿಣಮಿಸಿದೆ.
ಸಿಲಿಂಡರ್ ವಿತರಣಾ ಶುಲ್ಕ ನಿಜಕ್ಕೂ ಬಡಜನರ ಹೊಟ್ಟೆಗೆ ಹೊಡೆಯುವ ಕೆಲಸ ಎಂದೇ ಹೇಳಬಹುದು.
ಎಲ್ಲಾ ಕಡೆ ಹೇಳುವ ಹಾಗೆ ಸಿಲಿಂಡರ್ ಮೇಲಿನ ಬಿಲ್ ಮಾತ್ರ ಪಾವತಿಸಿದರೆ ಸಾಕು ಎಂಬುದು ನಿಯಮ ಆದರೆ ವಿತರಣಾ ಸಿಬ್ಬಂದಿಗೆ 20 ರಿಂದ 40 ರೂಪಾಯಿವರೆಗೆ ಹಣವನ್ನ ಪಡೆದುಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ ಕೆಲವೆಡೆ ಡೆಲಿವರಿ ಸಿಬ್ಬಂದಿ 60 ಅಥವಾ 80 ರೂಪಾಯಿವರೆಗೆ ಹೆಚ್ಚುವರಿ ಹಣ ಕೇಳುತ್ತಿದ್ದಾರೆ ಎಂಬ ದೂರುಗಳಿವೆ.
ಈ ನಡುವೆ ಬಿಲ್ ನಲ್ಲಿ ನಮೂದಿಸಲಾದ ಮೊತ್ತವನ್ನು ಹೊರತುಪಡಿಸಿ ಯಾವುದೇ ಹೆಚ್ಚುವರಿ ಶುಲ್ಕವನ್ನು ಸಂಗ್ರಹಿಸದೆ ಕಟ್ಟಡ ಫ್ಲಾಟ್ ಗಳಲ್ಲಿ ನೆಲದ ಸ್ಥಳವನ್ನು ಲೆಕ್ಕಿಸದೆ ಗ್ಯಾಸ್ ಸಿಲಿಂಡರನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವುದು ಗ್ಯಾಸ್ ವಿತರಕರ ಜವಾಬ್ದಾರಿಯಾಗಿದೆ.
ಎಲ್‌ಪಿಜಿ ಸಿಲಿಂಡರ್ ನ ನಗದು ಜ್ಞಾಪಕ ಪತ್ರದಲ್ಲಿ ಸೂಚಿಸಲಾದ ಚಿಲ್ಲರೆ ಮಾರಾಟದ ಬೆಲೆಗಿಂತ ಹೆಚ್ಚುವರಿ ಮೊತ್ತವನ್ನ ಸಂಗ್ರಹಿಸಲು ದೇಶಿಯ ಅನಿಲ ವಿತರಕರಿಗೆ ಯಾವುದೇ ನಿಯಮಗಳು ಅಥವಾ ಸೂಚನೆಗಳಿಲ್ಲ.
ಎಲ್ಪಿಜಿ ಸಿಲಿಂಡರ್ ನ ವಿತರಣೆಯ ಮೇಲೆ ಯಾವುದೇ ವಿತರಣಾ ಶುಲ್ಕಗಳನ್ನು ಪಾವತಿಸುವ ಅಗತ್ಯವಿಲ್ಲ ಇನ್ವಾಯ್ಸ್ ನಲ್ಲಿ ನಮೂದಿಸಲಾದ ಮೊತ್ತವನ್ನ ಮಾತ್ರ ಪಾವತಿಸಬೇಕಾಗುತ್ತದೆ ಒಂದು ವೇಳೆ ಹೆಚ್ಚಿನ ಹಣವನ್ನ ಕೇಳಿದ್ರೆ ಸಂಬಂಧ ಪಟ್ಟ ವಿತರಣ ಏಜೆನ್ಸಿಗೆ ದೂರು ನೀಡಬಹುದಾಗಿದೆ ಸಿಲಿಂಡರನ್ನು ಮನೆಗಳಲ್ಲಿ ಅಥವಾ ಎಷ್ಟೇ ಮಹಡಿದ್ದರೂ ತಲುಪಿಸುವ ಸಂದರ್ಭದಲ್ಲಿ ಯಾವುದೇ ಡೆಲಿವರಿ ಹುಡುಗ ಸಾರ್ವಜನಿಕರಲ್ಲಿ ಬಿಲ್ಲಿನಲ್ಲಿ ನಮೂದಿಸಿದ ಮೊತ್ತಕ್ಕಿಂತ ಹೆಚ್ಚಿನ ಹಣ ಕೇಳಿದ್ದಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಕಚೇರಿಗೆ ಅಥವಾ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆಗೆ ದೂರು ಸಲ್ಲಿಸಬಹುದು.