ಬೆಳ್ತಂಗಡಿ: ತಾಲೂಕು ಧ್ವನಿ ವರ್ಧಕ ಮತ್ತು ದೀಪಾಲಂಕಾರ ಸಂಘ ರಿ. ಬೆಳ್ತಂಗಡಿ ಇದರ ಕಾನೂನು ಮಾಹಿತಿ ಮತ್ತು ಸಾಮಾನ್ಯ ಸಭೆ
ಬೆಳ್ತಂಗಡಿ: ತಾಲೂಕು ಧ್ವನಿ ವರ್ಧಕ ಮತ್ತು ದೀಪಾಲಂಕಾರ ಸಂಘ ರಿ. ಬೆಳ್ತಂಗಡಿ ಇದರ ಕಾನೂನು ಮಾಹಿತಿ ಮತ್ತು ಸಾಮಾನ್ಯ ಸಭೆ ಆ.17 ರಂದು ಅಂಬೇಡ್ಕರ್ ಭವನದಲ್ಲಿ ನಡೆಯಿತು.
ಬೆಳ್ತಂಗಡಿ ವೃತ್ತ ನಿರೀಕ್ಷಕ ರಾದ ಶಿವ ಕುಮಾರ್ ಬಿ. ಇವರು ಕಾನೂನು ಮಾಹಿತಿಯನ್ನು ನೀಡಿದರು.
ವೇದಿಕೆಯಲ್ಲಿ ಸಂಘದ ಅಧ್ಯಕ್ಷರಾದ ಚಂದ್ರಶೇಖರ್, ಗೌರವ ಅಧ್ಯಕ್ಷ ಸುನಿಲ್ ಲೋಬೊ, ಕಾರ್ಯದರ್ಶಿ ವಸಂತ ನಾವೂರು, ಕೋಶಾಧಿಕಾರಿ ರೋಹಿತ್ ಕುಮಾರ ಹಾಜರಿದ್ದರು.
ಉಪ ಕಾರ್ಯದರ್ಶಿಯಾದ ಹರೀಶ್ ಕುಮಾರ್ ಸ್ವಾಗತಿಸಿದರು. ಕೋಶಾಧಿಕಾರಿ ರೋಹಿತ್ ಕುಮಾರ್ ಧನ್ಯವಾದವಿತ್ತರು. ಸಭೆಯಲ್ಲಿ ಸಂಘದ ಸದಸ್ಯರು ಹಾಜರಿದ್ದರು.