• December 27, 2024

ಬಂದಾರು ಗ್ರಾ.ಪಂ. ಸ್ವಾತಂತ್ರ್ಯ ಅಮೃತ ಮಹೋತ್ಸವ :ವಿವಿಧ ಕ್ಷೇತ್ರದ 75 ಮಂದಿ ಸಾಧಕರಿಗೆ ಸನ್ಮಾನ

 ಬಂದಾರು ಗ್ರಾ.ಪಂ. ಸ್ವಾತಂತ್ರ್ಯ ಅಮೃತ ಮಹೋತ್ಸವ :ವಿವಿಧ ಕ್ಷೇತ್ರದ 75 ಮಂದಿ ಸಾಧಕರಿಗೆ ಸನ್ಮಾನ

 

ಬಂದಾರು: ಬಂದಾರು ಗ್ರಾಮಪಂಚಾಯತ್ ಆಡಳಿತ, ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಣಾ ಸಮಿತಿ ಮತ್ತು ಬಂದಾರು-ಮೊಗ್ರು ಗ್ರಾಮಗಳ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸ್ವಾತಂತ್ರ್ಯ ಅಮೃತ ಮಹೋತ್ಸವವು ವಿಜೃಂಭಣೆಯಿಂದ ನೆರವೇರಿತು.

ಭಾರತಮಾತೆಯ ಸುಂದರ ಸ್ತಬ್ದ ಚಿತ್ರವುಳ್ಳ ತ್ರಿವರ್ಣಾಲಂಕೃತ ವಾಹನದೊಂದಿಗೆ ಕೊಪ್ಪದಡ್ಕದಿಂದ ಹೊರಟ ಜಾಥಾದಲ್ಲಿ ಗ್ರಾಮಸ್ಥರು, ಸ್ವಾತಂತ್ರ್ಯ ಹೋರಾಟಗಾರರ ವೇಷಭೂಷಣದೊಂದಿಗೆ ಶಾಲಾ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದು ಬಾವುಟ ಪುಟಾಣಿ ಕೈಗಳಲ್ಲಿ ಎತ್ತಿ ಹಿಡಿದ ಬಾವುಟಗಳು, ನಾಸಿಕ್ ಬ್ಯಾಂಡ್ , ದೇಶಾಭಿಮಾನದ ಘೋಷಣೆಗಳು ಮೆರವಣಿಗೆಗೆ ಮೆರುಗು ನೀಡಿತು.

ನಿವೃತ್ತ ಎ.ಎಸೈ ಬಾಬು ಗೌಡ ಹಾಗೂ ಗ್ರಾ.ಪಂ.ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ ಧ್ವಜಾರೋಹಣಗೈದರು.

ಸಭಾ ಕಾರ್ಯಕ್ರಮವನ್ನು ಪಾಣೆಕಲ್ಲು ಶಿರಾಡಿ ದೈವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಸೂರ್ಯನಾರಾಯಣ ಕುಡುಮತ್ತಾಯ ಉದ್ಘಾಟಿಸಿ
ಶುಭ ಹಾರೈಸಿದರು.
ಗ್ರಾ.ಪಂ.ಅಧ್ಯಕ್ಷೆ ಪರಮೇಶ್ವರಿ ಕೆ ಗೌಡ ಅಧ್ಯಕ್ಷತೆವಹಿಸಿದ್ದರು.

ಪದ್ಮುಂಜ ಸಿ.ಎ.ಬ್ಯಾಂಕ್ ಅಧ್ಯಕ್ಷ ರಕ್ಷಿತ್ ಶೆಟ್ಟಿ ಪಣೆಕ್ಕರ, ತಾ.ಪಂ.ಮಾಜಿ ಅಧ್ಯಕ್ಷ ಎಂ.ಚಂದಪ್ಪ ಪೂಜಾರಿ,ತಾ.ಪಂ. ಮಾಜಿ ಸದಸ್ಯರಾದ ಮಹಾಬಲ ಗೌಡ, ಕೃಷ್ಣಯ್ಯ ಆಚಾರ್ಯ, ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಉದಯ ಬಿ.ಕೆ., ಎಸ್ಎಂಎ ಕರ್ನಾಟಕ ರಾಜ್ಯ ಸಮಿತಿ ಸದಸ್ಯ ಅಬ್ಬಾಸ್ ಬಟ್ಲಡ್ಕ , ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷ
ಅಚುಶ್ರೀ ಬಾಂಗೇರು ಕಾರ್ಯಕ್ರಮವನ್ನು ಉದ್ದೇಶಿಸಿ ಸಂದರ್ಭೋಚಿತವಾಗಿ ಮಾತನಾಡಿ ಶುಭಹಾರೈಸಿದರು.

ಗ್ರಾಮವಾರು ಹಾಗೂ ವಾರ್ಡುವಾರು ವಿವಿಧ ಕ್ಷೇತ್ರಗಳ 75 ಮಂದಿ ಸಾಧಕರನ್ನು ,ಪಂಚಾಯತ್ ವ್ಯಾಪ್ತಿಯ ಮಾಜಿ ತಾ.ಪಂ ಅಧ್ಯಕ್ಷರು, ಮಾಜಿ ಗ್ರಾ.ಪಂ ಅಧ್ಯಕ್ಷರುಗಳು ,ನಿವೃತ್ತ ಸೈನಿಕರು ಮತ್ತು ಶಿಕ್ಷಕರನ್ನು ನಿಕಟಪೂರ್ವ ಗ್ರಾ.ಪಂ‌ ಆಡಳಿತ‌ ಮಂಡಳಿ ಹಾಗೂ ಪ್ರಸ್ತುತ ಆಡಳಿತ ಮಂಡಳಿ , ಸಿಬ್ಬಂದಿ ವರ್ಗ ಹಾಗೂ ಅಂತರಾಷ್ಟ್ರೀಯ ಮಟ್ಟ ,ರಾಜ್ಯಮಟ್ಟ,ಜಿಲ್ಲಾ ಮಟ್ಟದಲ್ಲಿ ವಿಶೇಷ ಸಾಧನೆಗೈದು ಪ್ರಶಸ್ತಿ ‌ಪಡೆದ ಸಾಧಕರಿಗೆ ವಿಶೇಷ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಪಂ.ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಕಾರಿಂಜ,
ಪ್ರಗತಿಪರ ಕೃಷಿಕ ಹರೀಶ್ ಹೊಳ್ಳ, ಗ್ರಾ.ಪಂ. ಉಪಾಧ್ಯಕ್ಷ ಗಂಗಾಧರ ಪೂಜಾರಿ ಉಪಸ್ಥಿತರಿದ್ದರು.
ಯೋಗ ಶಿಕ್ಷಕ ಕುಶಾಲಪ್ಪ ಗೌಡ ಹಾಗೂ ಚಂದ್ರಹಾಸ ಕುಂಬಾರ ಶ್ರೀರಾಮ ನಗರ ಕಾರ್ಯಕ್ರಮ ನಿರೂಪಿಸಿದರು.

ಪಂ.ಅಭಿವೃದ್ಧಿ ಅಧಿಕಾರಿ ಮೋಹನ ಬಂಗೇರ ಕಾರಿಂಜ ಸ್ವಾಗತಿಸಿದರು.
ಗ್ರಾ.ಪಂ. ಸದಸ್ಯೆ ಮಂಜುಶ್ರೀ ಪ್ರಾರಂಭದಲ್ಲಿ ಪ್ರಾರ್ಥಿಸಿ ಕೊನೆಯಲ್ಲಿ ವಂದಿಸಿದರು. ಗ್ರಾ.ಪಂ. ಸಿಬ್ಬಂದಿಗಳು,
ಗ್ರಾಮಸ್ಥರು ಪಾಲ್ಗೊಂಡರು.

Related post

Leave a Reply

Your email address will not be published. Required fields are marked *

error: Content is protected !!