ಕಾಂಕ್ರೀಟ್ ರಸ್ತೆಯಾಗಿ ನಿರ್ಮಾಣಗೊಂಡ ಮೈರೋಳ್ತಡ್ಕ ಬೂತ್ ನ ನಿರುಂಬುಡ – ಸುಣ್ಣಾನ – ನಾವುಳೆ – ಖಂಡಿಗ ನಡುವಿನ ರಸ್ತೆ: ಶಾಸಕರಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ ಗ್ರಾಮಸ್ಥರು
ಬಂದಾರು: ಹಲವಾರು ವರ್ಷಗಳ ಬಹು ಬೇಡಿಕೆಯ ಬಂದಾರು ಗ್ರಾಮದ ಮೈರೋಳ್ತಡ್ಕ ಬೂತ್ ನ ನಿರುಂಬುಡ – ಸುಣ್ಣಾನ – ನಾವುಳೆ – ಖಂಡಿಗ ನಡುವಿನ 2.55 ಕಿ.ಮೀ ಉದ್ದದ ರಸ್ತೆಯು 3 ಕೋಟಿ 30 ಲಕ್ಷ ಅನುದಾನದಲ್ಲಿ ಕಾಂಕ್ರೀಟ್
ರಸ್ತೆಯಾಗಿ ನಿರ್ಮಾಣಗೊಂಡಿದೆ.
ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜ ಅವರ ಅವಿರತ ಪ್ರಯತ್ನದ ಫಲವಾಗಿ ನಾಗರಿಕರ ಹಲವಾರು ದಶಕಗಳ ಕನಸು ನನಸಾಗುತ್ತಿದೆ ಎಂದು ನಾಗರಿಕರು ಸಂತಸ ವ್ಯಕ್ತಪಡಿಸಿದ್ದಾರೆ.