ಡಿ.16 ರಂದು ಬೆಳ್ತಂಗಡಿಯಲ್ಲಿ ಕರ್ನಾಟಕ ದಲಿತ ಚಳುವಳಿ 50 ರ ಸಂಭ್ರಮಾಚರಣೆ: ಕರ್ನಾಟಕ ದಲಿತ ಚಳುವಳಿ ಸಂಭ್ರಮಾಚರಣಾ ಸಮಿತಿ ಬೆಳ್ತಂಗಡಿ ವತಿಯಿಂದ ಸುದ್ದಿಗೋಷ್ಠಿ
ಬೆಳ್ತಂಗಡಿಯಲ್ಲಿ ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮಾಚರಣೆ ಡಿಸೆಂಬರ್ 16ಕ್ಕೆ ಜರುಗಲಿದ್ದು, ವಿಚಾರ ಸಂಕೀರಣ, ಬೃಹತ್ ಮೆರವಣಿಗೆ, ಸಮಾವೇಶ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಬಿ.ಕೆ ವಸಂತ್ ಬೆಳ್ತಂಗಡಿ, ಎಸ್ ಬೇಬಿ ಸುವರ್ಣ ಸೋಣಂದೂರು ತಿಳಿಸಿದರು.
•ಕರ್ನಾಟಕ ದಲಿತ ಚಳುವಳಿಗೆ ಐವತ್ತು ವರ್ಷ ತುಂಬಿದೆ. 70ರ ದಶಕದ ಆರಂಭದಲ್ಲಿ ಪ್ರೊ.ಬಿ.ಕೃಷ್ಣಪ್ಪ ಅವರ ನಾಯಕತ್ವ ಮತ್ತು ನೇತೃತ್ವದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) ಎಂಬ ಹೆಸರಿನಲ್ಲಿ ರಾಜ್ಯದಲ್ಲಿ ಜನ್ಮ ತಾಳಿದ ದಲಿತ ಚಳುವಳಿಗೆ ಇದೀಗ ಭರ್ತಿ ಅರ್ಧ ಶತಮಾನ ತುಂಬುತ್ತಿದೆ.ಈ ನಿಟ್ಟಿನಲ್ಲಿ ಡಿಸೆಂಬರ್ ತಿಂಗಳಲ್ಲಿ ‘ಕರ್ನಾಟಕ ದಲಿತ ಚಳುವಳಿ 50ರ ಸಂಭ್ರಮ’ ಎಂಬ ಕಾರ್ಯಕ್ರಮವನ್ನು ಬೆಳ್ತಂಗಡಿಯಲ್ಲಿ ಆಯೋಜಿಸುವ ಬಗ್ಗೆ, ಚಿಂತನೆ ನಡೆದಿದ್ದು ಸಮುದಾಯ ಪಕ್ಷ. ಸಂಘಟನೆಗಳ ಬೇಧವಿವಲ್ಲದೆಗ್ರಾಮವಾರು, ಸಮುದಾಯವಾರು, ಪಕ್ಷವಾರು ಮುಖಂಡರು, ಯುವ ಕಾರ್ಯಕರ್ತರನ್ನೊಳಗೊಂಡ ಪೂರ್ಣ ಪ್ರಮಾಣದ ಣದ ಸಮಿತಿಯನ್ನು ರಚಿಸಲಾಗಿದೆ.ಈ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ತಾಲೂಕಿನ ದಲಿತ ಚಳುವಳಿ ನಡೆದು ಬಂದ ಹಾದಿಯ ಅವಲೋಕನ ನಡೆಯಲಿದೆ. ಬೃಹತ್ ಮೆರವಣಿಗೆ, ಸಮಾವೇಶದ ಮೂಲಕ ಸಂಭ್ರಮಾಚರಣೆ ಜೊತೆಗೆ ತಾಲೂಕಿನಾದ್ಯಂತ ದಲಿತ ಚಳುವಳಿಯನ್ನು ಕಟ್ಟಲು ಶ್ರಮಿಸಿ ಅಗಲಿ ಹೋದ ಅನೇಕ ಹಿರಿಯ ಚೇತನಗಳ, ಸ್ಮರಣೆ, ಹಿರಿಯ ನಾಯಕರಿಗೆ, ಕಾರ್ಯಕರ್ತರಿಗೆ ಗೌರವಾರ್ಪಣೆ ನಡೆಯಲಿದೆ. ಮೊದಲ ಹಂತದಲ್ಲಿ ಅಕ್ಟೋಬರ್ 20ಕ್ಕೆ ವಿಚಾರ ಸಂಕಿರಣ ಆಯೋಜಿಸಲಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು
.ಐದು ದಶಕಗಳ ದಲಿತ ಚಳುವಳಿಯು ಮೂಡಿಸಿದ ಜಾಗೃತಿ, ಸ್ವಾಭಿಮಾನ, ಧೈರ್ಯ ಮತ್ತು ಕಲಿಸಿಕೊಟ್ಟ ಒಗ್ಗಟ್ಟಿನ ಪಾಠ. ಹಚ್ಚಿದ ಹೋರಾಟದ ಕಿಚ್ಚು ಹಾಗೂ ಸೈದ್ಧಾಂತಿಕ ಪ್ರಜ್ಞೆಯನ್ನು ಮುಂದಿನ ಯುವ ಪೀಳಿಗೆಗೂ ರೋಮಾಂಚಕ ಸ್ಫೂರ್ತಿಯೊಂದಿಗೆ ಹಸ್ತಾಂತರಿಸಬೇಕಾಗಿದೆ.ಈ ಹಿನ್ನೆಲೆಯಲ್ಲಿ ನಮ್ಮ ತಾಲೂಕಿನಲ್ಲಿ ಒಂದು ಚಾರಿತ್ರಿಕ ಕಾರ್ಯಕ್ರಮವೊಂದನ್ನು ಆಯೋಜಿಸುತ್ತಿದ್ದೇವೆ.
ಈ ನಿಟ್ಟಿನಲ್ಲಿ ನಡೆಯಲಿರುವ ದಲಿತ ಚಳುವಳಿಯ 50ರ ಸಂಭ್ರಮದ ವಿಚಾರ ಸಂಕಿರಣ ಹಾಗೂ ಬೃಹತ್ ಮೆರವಣಿಗೆ, ಸಮಾವೇಶ, ಸಾಂಸ್ಕೃತಿಕ ವೈವಿಧ್ಯ ವಾಗಿ ನಡೆಯುವುದಾಗಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಚರಣಾ ಸಮಿತಿ ಬೆಳ್ತಂಗಡಿ ತಾಲೂಕು. ದ.ಕ.ಪದಾಧಿಕಾರಿಗಳಾದ ಶ್ರೀ ಬಿ ಕೆ ವಸಂತ್ ಬೆಳ್ತಂಗಡಿ ಅಧ್ಯಕ್ಷರು, ಚೆನ್ನಕೇಶವ ಗೌರವಾಧ್ಯಕ್ಷರು, ಶೇಖರ್ ಕುಕ್ಕೇಡಿ ಕಾರ್ಯಾಧ್ಯಕ್ಷರು, ಎಸ್ ಬೇಬಿ ಸುವರ್ಣ ಸೋಣಂದೂರು ಕಾರ್ಯಾಧ್ಯಕ್ಷರು, ಅಣ್ಣು ಸಾಧನಾ ಪದ್ಮುಂಜಕಾರ್ಯಾಧ್ಯಕ್ಷರು, ನೇಮಿರಾಜ್ ಕಿಲ್ಲೂರು ಕಾರ್ಯಾಧ್ಯಕ್ಷರು, ಸಂಜೀವ ಆರ್ ಬೆಳ್ತಂಗಡಿ, ರಮೇಶ್ ಆರ್ ಬೆಳ್ತಂಗಡಿ, ಅಚುಶ್ರೀ ಬಾಂಗೇರು ಪ್ರಧಾನ ಕಾರ್ಯಾದರ್ಶಿ, ಪ್ರಭಾಕರ್ ಶಾಂತಿಕೋಡಿ ಉಪಾಧ್ಯಕ್ಷರು, ಸಿ ಕೆ ಚಂದ್ರಕಲಾ ಉಜಿರೆ, ಎನ್ ಕೆ ಸುಂದರ್ ಲ್ಯಾಲ, ರಾಜಾರಾಮ್ ಹತ್ಯಡ್ಕ, ಜಯಾನಂದ ಪಿಲಿಕಳ- ಸವಣಾಲು ರಾಘವ ಕಲ್ಮಂಜ, ಪ್ರಭಾಕರ ನಾಯ್ಕ ನಡ, ವೆಂಕಣ್ಣ ಕೊಯ್ಯರು, ದಿನೇಶ್ ಕೊಕ್ಕಡ, ನಾರಾಯಣ ಪುದುವೆಟ್ಟು, ಪಿ ಕೆ ರಾಜು ಪಡಂಗಡಿ, ರವಿಕುಮಾರ್ ಮುಂಡಾಜೆ, ಚಂದ್ರಾವತಿ ಉಜಿರೆ, ಗಣೇಶ್ ಕಕ್ಕಿಂಜೆ, ಈಶ್ವರ ಬೈರ ಲ್ಯಾಲ ಗೌರವ ಸಲಹೆಗಾರರು, ಪಿ ಕೆ ಚೀಂಕ್ರ ಕೊಕ್ಕಡ, ಕಿರಣ್ ಕುಮಾರ್ ಪುದುವೆಟ್ಟು, ಬಾಬು ಎರ್ಮೆತ್ತೋಡಿ ಕರಂಬಾರ ಉಪಸ್ಥಿತರಿದ್ದರು.