ಸೆ.1:ವಿ.ಹಿ.ಪ ಬೆಳ್ತಂಗಡಿ ಪ್ರಖಂಡ, ವಿ.ಹಿ.ಪ ಸ್ಥಾಪನಾ ದಿನಾಚರಣೆ ಹಾಗೂ ಷಷ್ಠಿ ಪೂರ್ತಿ ಸಮಾರೋಪ ಸಂಭ್ರಮ: ಬೃಹತ್ ಹಿಂದೂ ಸಮಾವೇಶ: ಆಮಂತ್ರಣ ಪತ್ರಿಕೆ ಬಿಡುಗಡೆ
ಉಜಿರೆ: ವಿಶ್ವ ಹಿಂದೂ ಪರಿಷದ್ ಬೆಳ್ತಂಗಡಿ ಪ್ರಖಂಡ, ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನಾಚರಣೆ ಹಾಗೂ ಷಷ್ಠಿ ಪೂರ್ತಿ ಸಮಾರೋಪ ಸಂಭ್ರಮ ಪ್ರಯುಕ್ತ ಸೆಪ್ಟೆಂಬರ್ 1 ರಂದು ಬೃಹತ್ ಹಿಂದೂ ಸಮಾವೇಶವು ಶ್ರೀ ಶಾರದಾ ಮಂಟಪ ಉಜಿರೆಯಲ್ಲಿ ಜರುಗಲಿದ್ದು ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಇಂದು ವಿಶ್ವ ಹಿಂದೂ ಪರಿಷದ್ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಬಿಡುಗಡೆಗೊಳಿಸಿದರು.
ಬೆಳಾಲು ಕ್ರಾಸ್ ನಿಂದ ಹೊರಟು ಉಜಿರೆಯ ಶಾರದಾ ಮಂಟಪದವರೆಗೆ ವಿಶೇಷ ಆಕರ್ಷಣೀಯ ವೈಭವ ಪೂರ್ಣ ಭವ್ಯ ಮೆರವಣಿಗೆಯಿಂದ ಆರಂಭಗೊಳ್ಳಲಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವಹಿಂದೂ ಪರಿಷದ್ ಷಷ್ಠಿಪೂರ್ತಿ ಉತ್ಸವ ಸಮಿತಿಯ ಅಧ್ಯಕ್ಷರು ಡಾ. ಎಂ.ಎಂ. ದಯಾಕರ್ ವಹಿಸಲಿದ್ದು,
ಶರತ್‌ಕೃಷ್ಣ ಪಡ್ಡೆಟ್ನಾಯ, ಅನುವಂಶಿಕ ಆಡಳಿತ ಮೊಕ್ತೇಸರರು ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆ ಇವರು ಉದ್ಘಾಟಿಸಲಿದ್ದಾರೆ.
ಟಿ.ಎ.ಪಿ. ಶೆಣೈ, ವಿಶ್ವಹಿಂದೂ ಪರಿಷದ್ ಪ್ರಾಂತ ಉಪಾಧ್ಯಕ್ಷರು, ಕರ್ನಾಟಕ ದಕ್ಷಿಣ ಪ್ರಾಂತ ದಿಕ್ಕೂಚಿ ಭಾಷಣ ಮಾಡಲಿದ್ದು, ಅತಿಥಿಗಳಾಗಿ
ಕೆ. ಮೋಹನ್ ಕುಮಾರ್, ಉದ್ಯಮಿಗಳು, ಶ್ರೀಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ, ಉಜಿರೆ, ಡಾ| ಭಾರತಿ ಬಿ.ಕೆ., ಮುಖ್ಯಸ್ಥರು, ಬೆನಕ ಹೆಲ್ತ್ ಸೆಂಟರ್ ಉಜಿರೆ, ನವೀನ್ ನೆರಿಯ, ಕಾರ್ಯದರ್ಶಿಗಳು, ವಿಶ್ವಹಿಂದೂ ಪರಿಷದ್, ಪುತ್ತೂರು ಜಿಲ್ಲೆ , ಸುಮಂತ್ ಕುಮಾರ್ ಜೈನ್, ಆಡಳಿತ ನಿರ್ದೇಶಕರು, ಎಕ್ಸೆಲ್ ಕಾಲೇಜು, ಗುರುವಾಯನಕೆರೆ, ನಾರಾಯಣ ಗೌಡ ಕೊಳಂಬೆ, ‘ಪಂಚಶ್ರೀ’ ಸೋಮಂತಡ್ಕ, ಭಾಗಿಯಾಗಲಿದ್ದು ಈ ಕಾರ್ಯಕ್ರಮಕ್ಕೆ ಭಾಗಿಯಾಗುವಂತೆ ದಿನೇಶ್ ಚಾರ್ಮಾಡಿ ಮೋಹನ್ ಬೆಳ್ತಂಗಡಿ ಅಧ್ಯಕ್ಷರು/ಕಾರ್ಯದರ್ಶಿ ಹಾಗೂ ಸರ್ವಸದಸ್ಯರು ವಿಶ್ವಹಿಂದೂ ಪರಿಷದ್, ಬೆಳ್ತಂಗಡಿ ಪ್ರಖಂಡ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮದಲ್ಲಿ ಶೋಭಾಯಾತ್ರೆಯು ಬೆಳಿಗ್ಗೆ ಗಂಟೆ 9-30ಕ್ಕೆ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣ, ಉಜಿರೆಯಲ್ಲಿ ಪ್ರಾರಂಭಗೊಳ್ಳಲಿದ್ದು ಮೋಹನ್ ರಾವ್ ಕಲ್ಮಂಜ, ವಿಶ್ವಹಿಂದೂ ಪರಿಷದ್ ಹಿರಿಯ ಕಾರ್ಯಕರ್ತರು ಚಾಲನೆ ನೀಡಲಿದ್ದು, ಗೌರವ ಉಪಸ್ಥಿತಿಯಲ್ಲಿ ಶೇಷಗಿರಿ ಶೆಣೈ, ಸಂಘದ ಹಿರಿಯರು,
ಪ್ರೊ. ಸತೀಶ್ಚಂದ್ರ ಸುರ್ಯಗುತ್ತು, ಕಾರ್ಯದರ್ಶಿಗಳು, ಎಸ್.ಡಿ.ಎಂ.ಬಿ. ಸೊಳ್ಳಾಟ, ಉಜಿರೆ, ಗಣೇಶ್ ಭಟ್ ಕಾಂತಾಜಿ, ಮಾನ್ಯ ಸಂಘ ಚಾಲಕರು ಆರ್.ಎಸ್.ಎಸ್., ಬೆಳ್ತಂಗಡಿ ತಾಲೂಕು, ಪೂರಣ್ ವರ್ಮ, C.E.O., ಐ.ಟಿ ಎಸ್.ಡಿ.ಎಂ.ಇ. ಸೊಸೈಟಿ (ರಿ.), ಉಜಿರೆ, ದಯಾಕರ್, ಪಂಚಶ್ರೀ, ಉದ್ಯಮಿಗಳು, ಉಜಿರೆ ಉಪಸ್ಥಿತಿಯಲ್ಲಿರುವರು
ವಿಶೇಷ ಆಕರ್ಷಣೆಯಾಗಿ ಕೃಷ್ಣವೇಷ,
60 ಭಜನಾ ತಂಡಗಳಿಂದ ಕುಣಿತ ಭಜನೆ, ಚೆಂಡೆ ವಾದ್ಯ ಕೀಲು ಕುದುರೆ,
60 ಬೈಕ್ ಗಳ ರ್ಯಾಲಿ, ವಿಶ್ವಹಿಂದೂ ಪರಿಷದ್ ಸಾಧನೆಯ 60 ಸವಿನೆನಪುಗಳ ಪ್ರದರ್ಶನ,ಗಣ್ಯ ಅತಿಥಿಗಳೊಂದಿಗೆ ವೈಭವದ ಶೋಭಾಯಾತ್ರೆ ಅದ್ದೂರಿಯಾಗಿ ಜರುಗಲಿದೆ ಎಂದು ತಿಳಿಸಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಶರಣ್ ಪಂಪ್ ವೆಲ್ ವಿಶ್ವ ಹಿಂದೂ ಪರಿಷತ್ ಪ್ರಾಂತ ಸಹಾ ಕಾರ್ಯದರ್ಶಿ,
ದಿನೇಶ್ ಚಾರ್ಮಾಡಿ ಅಧ್ಯಕ್ಷರು ವಿ.ಪ,
ನವೀನ್ ನೆರಿಯ ಕಾರ್ಯದರ್ಶಿ ವಿಹಿಂಪ ಪುತ್ತೂರು ಜಿಲ್ಲೆ ,
ಡಾ ಎಂ ಎಂ ದಯಾಕರ್ ಅಧ್ಯಕ್ಷರು ವಿಹಿಂಪ ಷಷ್ಠಿ ಪೂರ್ತಿ ಉತ್ಸವ ಸಮಿತಿ ,
ಸಂಪತ್ ಬೀ ಸುವರ್ಣ ಸಂಚಾಲಕರು ವಿಹಿಂಪ ಷಷ್ಠಿ ಪೂರ್ತಿ ಉತ್ಸವ ಸಮಿತಿ,
ಮೋಹನ್ ಬೆಳ್ತಂಗಡಿ ಕಾರ್ಯದರ್ಶಿ ವಿಹಿಂಪ ಉಪಸ್ಥಿತರಿದ್ದರು.