ಬೆಳ್ತಂಗಡಿ ಸರಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ
ಬೆಳ್ತಂಗಡಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ- ಬೆಂಗಳೂರು ಇದರ ಬೆಳ್ತಂಗಡಿ ತಾಲೂಕು ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಬೆಳ್ತಂಗಡಿ ಮಾರಿಗುಡಿ ಬಳಿಯ ಏಕತಾ ಸೌದದಲ್ಲಿ ಜರುಗಿತು.
ಸಂಘದ 2023 ನೇ ಸಾಲಿನ ಸಾಧಕರ ಸನ್ಮಾನ ಹಾಗೂ ಸಂಘದ ನಿಕಟ ಪೂರ್ವ ಅಧ್ಯಕ್ಷ ಡಾ. ಜಯಕೀರ್ತಿ ಜೈನ್
ಕಾರ್ಯಕ್ರಮದ ಉದ್ಘಾಟನೆಯನ್ನು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಸ್ ಚಂದ್ರಶೇಖರ ನೆರವೇರಿಸಿದರು. ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಜಯರಾಜ್ ಜೈನ್ ವಹಿಸಿದ್ದರು. ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಾ ಕೇಸರಿ, ಪಸುಸಂಗೋಪನಾನಿಲಾಖೆಯ ಮುಖ್ಯ ಪಶು ವೈದ್ಯಾಧಿಕಾರಿ ಡಾ. ರವಿಕುಮಾರ್ ಎಂ., ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ
ಕೆ. ನೀಲಯ ಗೌಡ, ಕ.ರಾ.ಸ. ನೌ.ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಚಿದಾನಂದ ಎಸ್. ಹೂಗಾರ್, ಕಾರ್ಯದರ್ಶಿ ಗಂಗಾರಾಣಿ ನಾ. ಜೋಶಿ, ಕೋಶಾಧಿಕಾರಿ ಮೇರಿ ಎನ್. ಜೆ. ,ರಾಜ್ಯ ಪರಿಷತ್ ಸದಸ್ಯ ಆನಂದ ಡಿ, ಆಂತರಿಕ ಲೆಕ್ಕ ಪರಿಶೋಧಕ ರಘುಪತಿ ಕೆ. ರಾವ್, ಸಂಚಾಲಕ ಧರಣೇಂದ್ರ ಕೆ., ಪ್ರೌಢ ಶಾಲಾ ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ತಚ್ಚಮೆ, ಅಮಿತಾಾನಂದ ಹೆಗ್ಡೆ ಬಂಗಾಡಿ, ಎಡ್ವರ್ಡ್ ಡಿಸೋಜಾ, ನಿವೃತ್ತ ನೌಕರರ ಸಂಘದ ಅಧ್ಯಕ್ಷ ವಿಠ್ಠಲಶೆಟ್ಟಿ, ಸಂಘದ ಉಪಾಧ್ಯಕ್ಷರುಗಳಾದ ಸಿದ್ದೇಶ್ ನಾಯಕ್ , ಪರಮೇಶ್ ಟಿ, ಮಂಜ ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ರತ್ನಾವತಿ ಮತ್ತು ತಂಡ ಪ್ರಾರ್ಥನೆ ಹಾಡಿದರು. ಆನಂದ ಡಿ ಸ್ವಾಗತಿಸಿದರು. ಜಯರಾಜ್ ಜೈನ್ ಪ್ರಸ್ತಾವನೆಗೈದರು ವಿಠ್ಠಲ ಶೆಟ್ಟಿ ಅಭಿನಂದನಾ ಸಭೆ ನೆರವೇರಿಸಿದರು. ಸಂಘದ
ವರದಿಯನ್ನು ಗಂಗಾರಾಣಿ ನಾ. ಜೋಶಿ ವಾಚಿಸಿದರೆ,
ಲೆಕ್ಕಪತ್ರವನ್ನು ಮಂಡನೆ ಮೇರಿ ಎನ್. ಜೆ ಮಂಡಿಸಿದರು.