ಉಡುಪಿ: ಮಹಾ ಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘ (ನಿ.) ಉದ್ಘಾಟನೆ
ಉಡುಪಿ : ಇಲ್ಲಿಯ ಅಜ್ಜರ ಕಾಡು ಸಾಯಿ ಹರ್ಷ ಪೆರ್ಲ ಕಟ್ಟಡದಲ್ಲಿ ನೂತನವಾಗಿ ಆರಂಭಗೊಂಡ ಮಹಾ ಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘ (ನಿ.) ಉಡುಪಿ ಇದರ ಉದ್ಘಾಟನೆ ಫೆಬ್ರವರಿ 12ರಂದು ನಡೆಯಿತು.
ಅಖಿಲ ಭಾರತ ದೈವಾಧಕರ ಒಕ್ಕೂಟದ ಅಧ್ಯಕ್ಷರು ಹಾಗೂ ಮಹಾಗಣಪತಿ ಸೌಹಾರ್ದ ಸೇವಾ ಸಹಕಾರಿ ಸಂಘ ನಿಯಮಿತ ನಿರ್ದೇಶಕರಾದ ವಿನೋದ್ ಶೆಟ್ಟಿ ಅವರು ಗಣ್ಯರಿಗೆ ಸ್ವಾಗತ ಭಾಷಣ ಮೂಲಕ ಸ್ವಾಗತಿಸಿದರು ತದನಂತರ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಬಿ . ಜಯಕರ್ ಶೆಟ್ಟಿ ಇಂದ್ರಾಳಿ ಅಧ್ಯಕ್ಷರು ಉಡುಪಿ ಜಿಲ್ಲಾ ಸಹಕಾರ ಯೂನಿಯನ್ ನಿ, ಉಡುಪಿ ಜಿಲ್ಲೆ ನಿರ್ದೇಶಕರು ಕರ್ನಾಟಕ ರಾಜ್ಯ ಸರ್ಕಾರ ಮಹಾ ಮಂಡಲ ನಿ, ಬೆಂಗಳೂರು ನೆರವೇರಿಸಿದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಾಗಣಪತಿ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷರಾದ ಪ್ರಸಾದ್ ರೈ ವಹಿಸಿದ್ದರು.
ಈ ಸಂದರ್ಭದಲ್ಲಿ ಮೂಡು ಸಗ್ರಿ ಕ್ಷೇತ್ರದ ಧರ್ಮದರ್ಶಿಗಳಾದ ಭಾಸ್ಕರ್ ಪೂಜಾರಿ ಗುಂಡಿಬೈಲ್ ಹಾಗೂ ಕೊಡವೂರು ಯುವ ಬಂಟರ ಸಂಘದ ಅಧ್ಯಕ್ಷರು ಹಾಗೂ ಪರಿವರ್ ಸೊಸೈಟಿಯ ನಿರ್ದೇಶಕರಾದ ಶಿವಪ್ರಸಾದ್ ಶೆಟ್ಟಿ ಹಾಗೂ ಸಮಾಜಸೇವಕರು ಉದ್ಯಮಿ ರಾಜಕೀಯ ಮುಖಂಡರಾದ ಮಮತ ಶೆಟ್ಟಿ ಹಾಗೂ ಪುಟ್ಟಣ್ಣ ಅಡಿಗ ಶುಭ ಹಾರೈಸಿದರು.
ಕಾರ್ಯಕ್ರಮ ನಿರೂಪಣೆಯನ್ನು ನವ್ಯ ಪುತ್ತೂರು ಹಾಗೂ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಕಾರ್ಯಕ್ರಮವನ್ನು ಸಂಘದ ನಿರ್ದೇಶಕರಾದ ಪ್ರಕಾಶ್ ಸರ್ಜನ್ ನೆರವೇರಿಸಿದರು.