• November 22, 2024

ದಕ್ಷಿಣ ಭಾರತದ ವಿಜ್ಞಾನ ಮೇಳ 2024 : ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ದ್ವಿತೀಯ ಬಹುಮಾನ

 ದಕ್ಷಿಣ ಭಾರತದ ವಿಜ್ಞಾನ ಮೇಳ 2024 : ಎಸ್.ಡಿ.ಎಂ. ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗೆ ದ್ವಿತೀಯ ಬಹುಮಾನ

 

ಉಜಿರೆ: ಜ.27 ರಿಂದ ಫೆ1ರ ವರೆಗೆ ಆಂಧ್ರಪ್ರದೇಶದ ವಿಜಯವಾಡದಲ್ಲಿ ನಡೆದ ದಕ್ಷಿಣ ಭಾರತದ ವಿಜ್ಞಾನ ಮೇಳ 2024ರಲ್ಲಿ ಶ್ರೀ ಧ. ಮಂ. ಆಂಗ್ಲ ಮಾಧ್ಯಮ (ರಾಜ್ಯ ಪಠ್ಯಕ್ರಮ) ಶಾಲೆಯ ಒಂಬತ್ತನೇ ತರಗತಿ ವಿದ್ಯಾರ್ಥಿ ಅಧಿಶ್ ಬಿ. ಸಿ ಭಾಗವಹಿಸಿ “ಮಲ್ಟಿ ಪರ್ಪಸ್ ಸ್ಮಾರ್ಟ ಬೋಟ್” ಎನ್ನುವ ವಿಜ್ಞಾನ ಮಾದರಿಯನ್ನು ಪ್ರದರ್ಶಿಸಿ ವೈಯುಕ್ತಿಕ ವಿಭಾಗದಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ.


ವಿದ್ಯಾರ್ಥಿಗೆ ವಿಜ್ಞಾನ ಶಿಕ್ಷಕಿಯಾದ ಶ್ರೀಮತಿ ಧನ್ಯವತಿ ಮಾರ್ಗದರ್ಶನ ನೀಡಿದ್ದರು. ಸ್ಪರ್ಧೆಯಲ್ಲಿ ದಕ್ಷಿಣ ಭಾರತದ 6 ರಾಜ್ಯಗಳಿಂದ ಒಟ್ಟು 210 ಮಾದರಿಗಳು ಭಾಗವಹಿಸಿದ್ದವು.
ವಿದ್ಯಾರ್ಥಿಗೆ ಶಾಲೆಯ ಆಡಳಿತ ಮಂಡಳಿಯವರು, ಮುಖ್ಯೋಪಾಧ್ಯಾಯಿನಿ ವಿದ್ಯಾಲಕ್ಷ್ಮೀ ಎನ್. ನಾಯಕ್ ಮತ್ತು ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

Related post

Leave a Reply

Your email address will not be published. Required fields are marked *

error: Content is protected !!