• January 3, 2025

ಹಲಾಲ್ ವ್ಯಾಪಾರದ ಮೇಲೆ ಯೋಗೀಜೀಯ ಪ್ರಹಾರ’ ಈ ಕುರಿತು ಆಯೋಜಿಸಿದ್ದ ವಿಶೇಷ ಸಂವಾದ !

 ಹಲಾಲ್ ವ್ಯಾಪಾರದ ಮೇಲೆ ಯೋಗೀಜೀಯ ಪ್ರಹಾರ’ ಈ ಕುರಿತು ಆಯೋಜಿಸಿದ್ದ ವಿಶೇಷ ಸಂವಾದ !

 

ಉತ್ತರ ಪ್ರದೇಶದ ಮುಖ್ಯಮಂತ್ರಿ ಮಾನ್ಯ ಯೋಗಿ ಆದಿತ್ಯನಾಥ್ ಇವರು ಹಲಾಲ್ ಪ್ರಮಾಣೀಕೃತ ಉತ್ಪಾದನೆಗಳ ಮೇಲೆ ನಿಷೇಧ ಹೇರಿ ಭಾರತದ ಆರ್ಥಿಕ ವ್ಯವಸ್ಥೆಯ ಮೇಲಿನ ದಾಳಿ ತಡೆಯಲು ಮಹತ್ವಪೂರ್ಣ ನಿರ್ಣಯ ತೆಗೆದುಕೊಂಡಿದ್ದಾರೆ. ಮೊಘಲರ ಕಾಲದಲ್ಲಿದ್ದ ‘ಜಿಝಿಯಾ ಟ್ಯಾಕ್ಸ್’ನಂತೆ ಈಗ ‘ಹಲಾಲ್ ಸರ್ಟಿಫಿಕೇಷನ್’ ಖಾಸಗಿ ತೆರಿಗೆ ಇಸ್ಲಾಮಿ ಸಂಸ್ಥೆಗಳಿಂದ ಜಾರಿ ಮಾಡಲಾಗಿದೆ. ಇದಕ್ಕೆ ಭಾರತ ಸರಕಾರದ ಯಾವುದೇ ಮಾನ್ಯತೆ ಇಲ್ಲ. ಹಲಾಲ್ ಸರ್ಟಿಫಿಕೇಷನ್ ನಿಂದ ದೊರೆತ ಹಣ ವಿವಿಧ ಬಾಂಬ್ ಸ್ಪೋಟದಲ್ಲಿನ ಭಯೋತ್ಪಾದಕರನ್ನು ಬಿಡುಗಡೆಗೊಳಿಸಲು ಬಳಸಲಾಗುತ್ತದೆ.

ಹಿಂದೂ ವ್ಯಾಪಾರಿಗಳ ಮೇಲೆ ಕಡ್ಡಾಯವಾಗಿ ಹೇರಿರುವ ಹಲಾಲ್ ಸರ್ಟಿಫಿಕೇಶನ್ ಮೇಲೆ ನಿಷೇಧ ಹೇರಿದರೆ ಭಾರತಕ್ಕೆ ಸುರಕ್ಷೆಯಿರುತ್ತದೆ ಹಾಗೂ ಹಿಂದೂ ವ್ಯಾಪಾರಿಗಳ ಆರ್ಥಿಕ ಶೋಷಣೆಯೂ ನಿಲ್ಲುತ್ತದೆ. ‘ಹಲಾಲ್ ಸರ್ಟಿಫಿಕೇಷನ್’ ನಿಯಮದಲ್ಲಿ ಉತ್ಪಾದಕರು ಅವರ ಕಂಪನಿಯಲ್ಲಿ ಇಬ್ಬರು ಮೌಲ್ವಿಗಳನ್ನೂ ನೇಮಿಸಬೇಕೆಂದು ಕಡ್ಡಾಯಗೊಳಿಸಲಾಗಿತ್ತು, ಸದ್ಯ ಉತ್ತರ ಪ್ರದೇಶದಲ್ಲಿ ಈ ಹೇರಿಕೆಯ ವ್ಯವಹಾರ ನಿಲ್ಲಲಿದೆ. ಉತ್ತರಪ್ರದೇಶ ಸರಕಾರದ ಆದರ್ಶ ಪಡೆದು ಸಂಪೂರ್ಣ ದೇಶಾದ್ಯಂತ ಕಾನೂನಬಾಹಿರವಾಗಿ ನಡೆಯುತ್ತಿರುವ ಹಲಾಲ್ ಸರ್ಟಿಫಿಕೇಶನ್ ಮೇಲೆ ನಿಷೇಧ ಹೇರಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಇವರು ಆಗ್ರಹಿಸಿದ್ದಾರೆ.

ಅವರು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ‘ಹಲಾಲ್ ವ್ಯಾಪಾರದ ಮೇಲೆ ಯೋಗೀಜಿಯ ಪ್ರಹಾರ !’ ಈ ವಿಶೇಷ ಸಂವಾದದಲ್ಲಿ ಮಾತನಾಡುತ್ತಿದ್ದರು. ಶ್ರೀ. ಶಿಂದೆ ಇವರು ಈ ವಿಷಯದ ಕುರಿತು ಜಾಗೃತಿ ಮೂಡಿಸುವುದಕ್ಕಾಗಿ ‘ಹಲಾಲ್ ಜಿಹಾದ್ : ಭಾರತೀಯ ಆರ್ಥಿಕ ವ್ಯವಸ್ಥೆಯ ಮೇಲಿನ ದಾಳಿ ?’ಈ ಪುಸ್ತಕ ಬರೆದಿದ್ದಾರೆ. ಹಿಂದೂ ಸಮಾಜವು ಅದನ್ನು ಅವಶ್ಯವಾಗಿ ಓದಬೇಕೆಂದೂ ಅವರು ಈ ಸಮಯದಲ್ಲಿ ಕರೆ ನೀಡಿದರು.

ಶ್ರೀ. ರಮೇಶ ಶಿಂದೆ ಇವರು ಮುಂದೆ ಮಾತನಾಡಿ, ಭಾರತ ಸರಕಾರದ FSSAI ಮತ್ತು FDA ಯಂತಹ ಆಹಾರ ಪದಾರ್ಥಗಳ ಪ್ರಮಾಣೀಕೃತ ಮಾಡುವ ಸಂಸ್ಥೆಗಳಿರುವಾಗಲೂ ಹಲಾಲ್ ಪ್ರಮಾಣಪತ್ರ ಕಡ್ಡಾಯಗೊಳಿಸಿ ಹಿಂದೂ ವ್ಯಾಪಾರಿಗಳ ಶೋಷಣೆ ಮಾಡುತ್ತಿದ್ದಾರೆ. ಹಲಾಲ್ ಸರ್ಟಿಫಿಕೇಶನ್ ಹೊರಗಿನ ಇಸ್ಲಾಮಿಕ್ ದೇಶಗಳಿಗೆ ಆವಶ್ಯಕತೆ ಇದೆ. ಆದರೆ ಅದನ್ನು ಗೋಧಿ, ಅಕ್ಕಿ ಇದರಂತಹ ಧಾನ್ಯಗಳಿಗೂ ನೀಡಲಾಗುತ್ತಿದೆ, ಇದು ನಮಗೂ ತಿಳಿದಿರಲಿಲ್ಲ, ಹೀಗೆ ನಮ್ಮ ಧರ್ಮದಲ್ಲಿಯೂ ಬರೆದಿಲ್ಲ, ಎಂದು ಮುಸ್ಲಿಂ ಮಹಾಸಂಘದಿಂದ ಈಗ ಬಹಿರಂಗಪಡಿಸಲಾಗಿದೆ. ‘ಜಮೀಯತ್-ಉಲೇಮಾ-ಎ-ಹಿಂದ್’ನ ‘ಹಲಾಲ್ ಸರ್ಟಿಫಿಕೇಶನ್’ಗೆ ಶಿಯಾ ಮುಸಲ್ಮಾನ ಬಹುಸಂಖ್ಯಾತ ದೇಶದ ಮಾನ್ಯತೆ ಇಲ್ಲ. ಹಲಾಲ್ ಸರ್ಟಿಫಿಕೇಷನ್ ಡೇಟಿಂಗ್ ವೆಬ್ಸೈಟ್, ಲಿಪ್ ಸ್ಟಿಕ್ ನಂತಹ ವಸ್ತುಗಳ ಮೇಲೂ ಏಕೆ ಬಂದಿದೆ ಎಂಬುದು ಸಮಾಜದ ಎದುರು ಬಹಿರಂಗವಾಗಬೇಕು. ‘ಹಲಾಲ್ ಮಾಂಸ’ ಮಾರಾಟದ ಮೇಲೆ ಉತ್ತರ ಪ್ರದೇಶ ಸರಕಾರದಿಂದ ನಿಷೇಧ ಹೇರಿಲ್ಲ, ಬದಲಾಗಿ ಜೀವನೋಪಯೋಗಿ ಉತ್ಪಾದನೆಗಳ ಮೇಲೆ ಕಾನೂನು ಬಾಹಿರವಾಗಿ ಜಾರಿಗೊಳಿಸಲಾಗಿರುವ ಹಲಾಲ್ ಸರ್ಟಿಫಿಕೇಟ್ ಮೇಲೆ ನಿಷೇಧ ಹೇರಬೇಕು, ಈ ರೀತಿ ಹಲಾಲ್ ಪ್ರಮಾಣೀಕೃತ ಉತ್ಪಾದನೆಗಳ ಮೇಲೆ ಗ್ರಾಹಕರೂ ಬಹಿಷ್ಕಾರ ಹಾಕಬೇಕು ಎಂದು ಶಿಂದೆ ಇವರು ಕರೆ ನೀಡಿದರು.

Related post

Leave a Reply

Your email address will not be published. Required fields are marked *

error: Content is protected !!