ಶಿರ್ಲಾಲು: ಸರಕಾರಿ ಜಾಗದಲ್ಲಿ ವಾಹನ ಸಾಗಿಸಲು ಅಡ್ಡಿ: ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘದಿಂದ ಖಂಡನೆ
ಶಿರ್ಲಾಲು: ಸರಕಾರಿ ಜಾಗದಲ್ಲಿರುವ ರಸ್ತೆಯಿಂದ ವಾಹನವನ್ನು ಸಾಗಲು ಬಿಡದೆ ಬೇಲಿಯನ್ನು ಹಾಕಿ ಸಮಸ್ಯೆಯನ್ನು ನೀಡುತ್ತಿದ್ದಾರೆ ಎಂದು ಬೆಳ್ತಂಗಡಿ ತಾಲೂಕಿನ ಶಿರ್ಲಾಲು ಗ್ರಾಮದ ಶ್ರೀಧರ್ ನಾಯ್ಕ್ ಹೋಮರೊಟ್ಟು ದೂರನ್ನು ನೀಡಿದ್ದಾರೆ .
ಶಿರ್ಲಾಲು ಗ್ರಾಮದ ಶ್ರೀಧರ ನಾಯ್ಕ ಹೋಮರೊಟ್ಟು ಎಂಬವರ ಮನೆಗೆ ವಾಹನದಲ್ಲಿ ಹೋಗಬೇಕಾದರೆ ಸರಕಾರಿ ಜಾಗದಲ್ಲಿರುವ ರಸ್ತೆಯಿಂದ ಸಾಗಬೇಕು. ಆದರೆ ಆ ರಸ್ತೆಯಿಂದ ವಾಹನದಲ್ಲಿ ಸಾಗಿದರೆ ಆನಂದ ಸಾಲ್ಯಾನ್ ಎಂಬವರು ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ತೀರ ಅನಾರೋಗ್ಯ ಸಮಸ್ಯೆ ಕಂಡುಬಂದರೆ ಅಥವಾ ಮನೆಯಿಂದ ಪೇಟೆಗೆ ವಾಹನದಲ್ಲಿ ಸಾಗಲು ಅನುಮತಿಯನ್ನು ನೀಡದೆ ಬೆದರಿಕೆಯನ್ನು ನೀಡುತ್ತಿದ್ದಾರೆ ಎಂದು ಶ್ರೀಧರ್ ನಾಯ್ಕ್ ತಿಳಿಸಿದ್ದಾರೆ.
ಈ ಬಗ್ಗೆ ಅಧಿಕಾರಿಗಳಿಗೆ, ಪೊಲೀಸರಿಗೆ ಹಾಗೂ ಗ್ರಾ.ಪಂ ಗೆ ದೂರು ನೀಡಿದ್ದರೂ ಸಹ ಯಾವುದೆ ದೂರುಗಳಿಗೆ ಸ್ಪಂದಿಸುತ್ತಿಲ್ಲ.
ಇವುಗಳನ್ನೆಲ್ಲ ಮನಗಂಡ ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ(ರಿ) ಇದರ ಕಾರ್ಯಕರ್ತರು ಶ್ರೀಧರ್ ನಾಯ್ಕರ ಮನೆಗೆ ಭೇಟಿ ನೀಡಿ ಶ್ರೀಧರ್ ನಾಯ್ಕರ ಕಷ್ಟಗಳಿಗೆ ಸ್ಪಂದಿಸಿದ್ದಾರೆ.
ಆನಂದ ಸಾಲ್ಯಾನ್ ಅವರು ಅಡ್ಡಿಯುಂಟು ಮಾಡುತ್ತಿದ್ದ ರಸ್ತೆಯಿಂದಲೇ ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ(ರಿ) ಕಾರ್ಯಕರ್ತರು ವಾಹನದಲ್ಲೇ ಆಗಮಿಸಿ ಶ್ರೀಧರ್ ನಾಯ್ಕರವರ ಮನೆಯಲ್ಲಿದ್ದ ಭತ್ತವನ್ನು ಸಾಗಿಸುವಲ್ಲಿ ಸಹಕರಿಸಿ ಕಷ್ಟಗಳಿಗೆ ಸ್ಪಂದಿಸಿದ್ದಾರೆ.
ಇದರ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಮರಾಟಿ ಸಮಾಜ ಸೇವಾ ಸಂಘ(ರಿ) ಆಗ್ರಹಿಸುತ್ತದೆ.