ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ವಿನೋದ್ ಚಾರ್ಮಾಡಿ
ವಿನೋದ್ ಚಾರ್ಮಾಡಿಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮತ್ತು ಮಂಗಳೂರು ಮಹಾನಗರ ಪಾಲಿಕೆ ವತಿಯಿಂದ ನಡೆದ ತುಳು ನಾಟಕ ಪರ್ಬ 2022 ಕಾರ್ಯಕ್ರಮದಲ್ಲಿ ವಿನೋದ್ ಚಾರ್ಮಾಡಿ ಅವರ ನಾಟಕ ಕಲೆ ಸಾಹಿತ್ಯ ಕ್ಷೇತ್ರದಲ್ಲಿ ಅಮೋಘ ಸಾಧನೆಗೆ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದ್ದು , ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಇವರು ಸಂಗಮ ಕಲಾವಿದರು ಉಜಿರೆ .ಸಹ್ಯಾದ್ರಿ ಕ್ರಿಯೆಷನ್ ಬಯಲು ನೆರಿಯ, ಓಂ ಶಕ್ತಿ ಗೆ ಗೆಳೆಯರ ಬಳಗ ಲಾಯಿಲ. ಬೊಳ್ಳಿ ಬೊಲ್ಪು ಕಲಾತಂಡ ಪುತ್ತೂರು ಪಂಚಶ್ರೀ ಕಲಾವಿದರು ಚಾರ್ಮಾಡಿ ತಂಡಗಳೊಂದಿಗೆ ಅಭಿನಯವನ್ನು ಮಾಡಿದ್ದಾರೆ.
ತನ್ನ ಇಳಿ ವಯಸ್ಸಿನಲ್ಲೂ ಕಲಾವಿದನಾಗಿ ನೂರಾರು ನಾಟಕಗಳಲ್ಲಿ ಭಾಗವಹಿಸಿ, ತುಳು,ಕನ್ನಡ ಚಿತ್ರಗಳಲ್ಲಿ ಅಭಿನಯಿಸಿ, ವಿ4 ಕಾಮಿಡಿ ಪ್ರೀಮಿಯರ್ ಲೀಗ್, ಬಲೆ ತೆಲಿಪಾಲೆ, ಬಲೆ ಬುಲಿ ಪಾಲೆ, ಕಲರ್ಸ್ ಕನ್ನಡ ಕಾಮಿಡಿ ಕಂಪನಿ ಹಾಗೂ ಹಲವಾರು ಕಡೆಗಳಲ್ಲಿ ತನ್ನ ಕಲೆಯನ್ನು ಪ್ರದರ್ಶಿಸಿದ ಇವರಿಗೆ ಇದೀಗ ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.