ಕರಾವಳಿಯಾದ್ಯಂತ ಕೆಂಗಣ್ಣು ಖಾಯಿಲೆ ಹರಡುತ್ತಿದ್ದು ಜನ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು, ಕಣ್ಣಿನ ಆರೋಗ್ಯದ ಬಗ್ಗೆ ಎಚ್ಚೆತ್ತುಕೊಳ್ಳಬೇಕಾಗಿದೆ.ಕಣ್ಣಿನ ಸಮಸ್ಯೆಯು ಸಾಮಾನ್ಯವಾಗಿ ಬೇಸಿಗೆಯಲ್ಲಿ ಕಾಣಿಸಿಕೊಳ್ಳುತ್ತದೆ. ಆದರೆ ಈ ಬಾರಿ ಮಳೆಗಾಲ ಮುಗಿದು ಚಳಿಗಾಲದ ಆರಂಭದಲ್ಲೇ ಈ ಸಮಸ್ಯೆ ತೀವ್ರವಾಗಿದೆ. ತಜ್ಞರ ಪ್ರಕಾರ ಈ ಬೇಸಿಗೆಯಲ್ಲಿ ಈ ರೋಗವು ಹೆಚ್ಚು ಅಪಾಯಕಾರಿ ಎಂದು ಸಾಬೀತಾಗಿದೆ ಮತ್ತು ಈ ಕಾಯಿಲೆಗೆ ಕಾರಣವಾದ ಬ್ಯಾಕ್ಟೀರಿಯಾಗಳು ಮೊದಲಿಗಿಂತ ಹೆಚ್ಚು ತೀವ್ರವಾಗಿರಲಿದ್ದು, ಅಸ್ತಿತ್ವದಲ್ಲಿರುವ ಔಷಧಿಗಳ ಪರಿಣಾಮವು ಅವುಗಳ ಮೇಲೆ ಬೀರುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ. […]Read More
Tags :Kengannu
ಕರಾವಳಿಯಾದ್ಯಂತ ಕೆಂಗಣ್ಣು ಕಾಯಿಲೆ ಹರಡುತ್ತಿದ್ದು, ಜನ ಆತಂಕಕ್ಕೊಳಗಾಗಿದ್ದಾರೆ. ಮಕ್ಕಳಲ್ಲಿ ಸಮಸ್ಯೆ ಹೆಚ್ಚು ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯ ಇತರ ಭಾಗಗಳಲ್ಲಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಕಾಯಿಲೆ ಇದಾಗಿದ್ದು, ಮನೆ, ಶಾಲೆ, ಆಸ್ಪತ್ರೆ ,ಮಾರ್ಕೆಟ್ ಸೇರಿದಂತೆ ಸಾರ್ವಜನಿಕ ಸ್ಥಳಗಳಿಗೆ ತೆರಳುವ ಕಾಯಿಲೆ ಇದ್ದವರಿಂದ ಇತರರಿಗೂ ಹಬ್ಬುತ್ತಿದೆ. ಇನ್ನು ಮೆದುಳು ಜ್ವರ ಲಸಿಕೆಯ ಸರ್ವೇಗೆಂದು ಮನೆ ಮನೆ ಭೇಟಿ ನೀಡುವ ಆಶಾ ಕಾರ್ಯಕರ್ತೆಯರಲ್ಲಿಯೂ ಜ್ವರ ಕಾಣಿಸಿಕೊಳ್ಳುತ್ತಿದೆ. ತಿಂಗಳ ಚುಚ್ಚುಮದ್ದಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವ ಕೆಂಗಣ್ಣು ಕಾಯಿಲೆ […]Read More