ಬೆಳಾಲು: ಬೆಳಾಲು ಗ್ರಾಮದ ಶಿವಪ್ರಿಯ ಉಪ್ಪಾರು ಮನೆ ನಿವಾಸಿ, ಕೊಡುಗೈ ದಾನಿ, ಪ್ರಗತಿಪರ ಕೃಷಿಕ, ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿಯ ಉಪಾಧ್ಯಕ್ಷರು, ದೇವಸ್ಥಾನ ದ ವ್ಯವಸ್ಥಾಪನಾ ಸಮಿತಿಯ ಉಪಾಧ್ಯಕ್ಷರಾದ ದಿನೇಶ್( 56 ವ) ಇವರು ಆ.26 ರಂದು ಅಸೌಖ್ಯದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.ಇವರು ಧಾರ್ಮಿಕ ಕ್ಷೇತ್ರದಲ್ಲಿ ದೇವಸ್ಥಾನದ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿಯೂ ನಿರಂತರವಾಗಿ ಮುಂದಿದ್ದರು. ಮಹಾದಾನಿಗಳು , ಅನ್ನದಾತರು ಹೌದು.ನಾರಾಯಣ ಗುರು ಸೇವಾ ಸಂಘ(ರಿ) ಬೆಳಾಲು ಇದರ ನಾರಾಯಣ ಗುರು ಮಂದಿರದ ಜೀರ್ಣೋದ್ಧಾರ […]Read More
Tags :Death
ಧರ್ಮಸ್ಥಳ: ಉಜಿರೆ ಖಾಸಗಿ ಶಾಲೆಯೊಂದರ ಮಾಜಿ ಶಾಲಾ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ. ಇವರು ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳ ಗ್ರಾಮದ ಮುಂಡೂರು ಪಾಡಿ ನಿವಾಸಿ ಶಿಕ್ಷಕಿ ಚೈತ್ರ ಅಡಿಗ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಆಕೆ ವಿವಾಹಿತರಾಗಿದ್ದು ಪತಿ ದೀಪಕ್ ಮತ್ತು ಎಳೆ ಪುತ್ರಿ ಒಬ್ಬರನ್ನ ಅಗಲಿದ್ದಾರೆ. ಚೈತ್ರ ಅವರು ಕೆಲ ಸಮಯ ಉಜಿರೆಯಲ್ಲಿ ಖಾಸಗಿ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದು ತದನಂತರ ಧರ್ಮಸ್ಥಳದ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿದ್ದರು. ಕುಟುಂಬದೊಂದಿಗೆ ಧರ್ಮಸ್ಥಳದಲ್ಲಿ ವಾಸವಿದ್ದರೂ […]Read More
ಸುರತ್ಕಲ್ :ಫಾಜಿಲ್ ಹತ್ಯೆಗೆ ಬಳಕೆಯಾಗಿದ್ದ ಕಾರನ್ನು ಪೊಲೀಸರು ಸ್ಥಳಾಂತರ ಮಾಡಿದ್ದಾರೆ, ಕಾರ್ಕಳ ತಾಲೂಕಿನ ಕಾಂಜರ ಕಟ್ಟೆ ಯ ಕಡಕುಂಜ ಎಂಬಲ್ಲಿ ಕಾರು ಪತ್ತೆ ಯಾಗಿತ್ತು ಹತ್ಯೆಗೆ ಬಳಕೆಮಾಡಿದ್ದ ಈ ಕಾರನ್ನು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ್ದರು. ಕಾರನ್ನು ಪತ್ತೆ ಹಚ್ಚಿದ ಸುರತ್ಕಲ್ ಪೊಲೀಸ್ ಇಂದು ಟೋಯಿಂಗ್ ವಾಹನದ ಮೂಲಕ ಸುರತ್ಕಲ್ ಪೊಲೀಸರು ಕಾರನ್ನು ಸ್ಥಳಾಂತರಿಸಿದ್ದಾರೆ.ಮುಂದಿನ ವಿಧಿ ವಿಜ್ಞಾನ ತಜ್ಞರನ್ನು ಸುರತ್ಕಲ್ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಿದ್ದುಮುಂದಿನ ತನಿಖೆಗಳ ಮೂಲಕ ಹೆಚ್ಚಿನ ಮಾಹಿತಿ ಬೆಳಕಿಗೆ ಬರಲಿದೆRead More
ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಬೆನ್ನಲ್ಲೆ ಮುಸ್ಲಿಂ ಯುವಕನನ್ನು ಮಾರಕಾಸ್ತ್ರದಿಂದ ಬರ್ಬರ ಹತ್ಯೆ ಮಾಡಿರುವ ಘಟನೆ ಜು.29 ರಂದು ಸಂಜೆ ನಡೆದಿದೆ. ಮಂಗಳೂರು ಹೊರವಲಯದ ಸುರತ್ಕಲ್ ಎಂಬಲ್ಲಿ ಮೊಬೈಲ್ ಶೋಪ್ ಮುಂಭಾಗದಲ್ಲಿ ಫಾಜಿಲ್ ಎಂಬಾತನ್ನ ಕೊಲೆ ಮಾಡಲಾಗಿದೆ. ಮಾರಕಾಸ್ತ್ರದ ಏಟಿಗೆ ಮೆಟ್ಟಿಲ ಮೇಲೆ ನೀರಿನಂತೆ ಹರಿದಿತ್ತು ರಕ್ತ ಆಸ್ಪತ್ರೆಗೆ ದಾಖಲಿಸಿದ್ರು ಉಳಿಯಲಿಲ್ಲ ಜೀವ. ಈ ಕೃತ್ಯ ನಡೆದಿರುವ ದೃಶ್ಯ ಸಿಸಿಟಿವಿಯಲ್ಲಿ ಬೆಳಕಿಗೆ ಬಂದಿದೆ.Read More
ಹಿರಿಯ ನಾಟಕಕಾರ, ನಿರ್ದೇಶಕ, ವಜ್ರನೇತ್ರ ಪತ್ರಿಕೆ ಸಂಪಾದಕ, ರತ್ನಾಕರ ರಾವ್ ಕಾವೂರುರವರು (81) ಇಂದು ಬೆಳಿಗ್ಗೆ ಸ್ವಗೃಹದಲ್ಲಿ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು. ಸಾಮಾಜಿಕ, ಪೌರಾಣಿಕ, ಆಧ್ಯಾತ್ಮಿಕ, ನವ್ಯ ಮತ್ತು ಐತಿಹಾಸಿಕ ಹೀಗೆ ಐದು ಬಗೆಯ ನಾಟಕ ರಚನೆಯಲ್ಲಿ ಅವರದ್ದು ಗಮನಾರ್ಹ ಸಾಧನೆಯಾಗಿತ್ತು. ವಜ್ರನೇತ್ರ ಎಂಬ ಕನ್ನಡ ಪತ್ರಿಕೆಯ ಮೂಲಕ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿ ಸರಕಾರದ ಗಮನ ಸೆಳೆಯುತ್ತಿದ್ದ ಅವರು ಸುಧೀರ್ಘ 60 ವರ್ಷಗಳ ಕಾಲ ಸರಸ್ವತಿಯ ಸೇವೆಗೈದಿದ್ದರು. ‘ನಾಟಕ ಕಲಾ ರತ್ನ’ ಬಿರುದಾಂಕಿತ ರತ್ನಾಕರ ರಾವ್ […]Read More
ಬೆಳ್ಳಾರೆ: ಬಿಜೆಪಿ ಯುವ ನಾಯಕ ಪ್ರವೀಣ್ ಮೇಲೆ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಕಾಸ್ರ್ರದಿಂದ ದಾಳಿ ನಡೆಸಿ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದಾರೆ. ಗಂಭೀರ ಗಾಯಗೊಂಡ ಪ್ರವೀಣ್ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಪ್ರಾಣಪಕ್ಷಿ ಹಾರಿಹೊಗಿದೆ. ಪುತ್ತೂರು ಖಾಸಗಿ ಆಸ್ಪತ್ರೆಗೆ ಮೃತದೇಹವನ್ನು ರವಾನಿಸಲಾಗಿದೆ. ಸಾಮಾಜಿಕ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ಪ್ರವೀಣ್ ಬೆಳ್ಳಾರೆಯಲ್ಲಿ ಕೋಳಿ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದರು. ಯಾರೋ ಕಿಡಿಗೇಡಿಗಳು ಬೈಕ್ ನಲ್ಲಿ ಬಂದು ಕೋಳಿ ಅಂಗಡಿಯ ಮುಂಭಾದಲ್ಲಿ ಈ ಕೃತ್ಯವನ್ನು ಎಸಗಿದ್ದಾರೆ. ಕೊಲೆಯಾದ ಬೆನ್ನಲ್ಲೆ ಪುತ್ತೂರಿನಲ್ಲಿ […]Read More
ಕಲ್ಮಂಜ: ಕಲ್ಮಂಜ ಗ್ರಾಮದ ಅಜಿತ್ ನಗರ ಎಂಬಲ್ಲಿ ದಿನೇ ದಿನೇ ಸಾಕು ನಾಯಿಗಳು ಸಾವನ್ನಪ್ಪುತ್ತಿದ್ದು, ಯಾರೋ ಕಿಡಿಗೇಡಿಗಳು ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಆಹಾರ ಹುಡುಕುತ್ತಾ ರಸ್ತೆಗೆ ಬರುವ ಸಾಕುನಾಯಿಗಳು , ಮನೆಗೆ ಬಾರದೆ ಸಾವನ್ನಪ್ಪುತ್ತಿರುವುದು ಅಲ್ಲಿಯ ಸ್ಥಳಿಯರಲ್ಲಿ ಸಂಶಯ ಮೂಡಿದ್ದು , ತನಿಖೆ ನಡೆಸುವಂತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಹತ್ತು ದಿನಗಳಿಂದ ನಡೆಯುತ್ತಿರುವ ಈ ಘಟನೆಯಲ್ಲಿ ಒಟ್ಟು 7 ಸಾಕು ನಾಯಿಗಳು ಜೀವ ಕಳೆದುಕೊಂಡಿದೆ. ಇನ್ನೂ ಇದೇ ರೀತಿಯಾಗಿ ಮುಂದುವರೆದರೆ ಇನ್ನೂ ಹಲವಾರು ಸಾಕು ನಾಯಿಗಳು […]Read More
ಇಂದಬೆಟ್ಟು: ನಾಲ್ಕು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂಬ ಆರೋಪದ ಮೇಲೆ ಓರ್ವನ ಮೇಲೆ ಹಲ್ಲೆ ಮಾಡಿದ್ದಾರೆ. ಇದನ್ನು ತಡೆಯಲು ಬಂದ ಸಂಬಂಧಿಕನೊಬ್ಬನ ಮೇಲೂ ಹಲ್ಲೆ ಮಾಡಿದ್ದು ಗಂಭೀರ ಗಾಯ ಗೊಂಡು ಆಸ್ಪತ್ರೆ ಗೆ ಸಾಗಿಸುವಾಗ ದಾರಿ ಮಧ್ಯೆ ಸಾವನ್ನಪ್ಪಿದ ಘಟನೆ ಇಂದಬೆಟ್ಟು ಗ್ರಾಮದ ಪರಾರಿ ಶಾಂತಿನಗರ ಎಂಬಲ್ಲಿ ಜು.22 ರಂದು ಸಂಜೆ ವೇಳೆ ನಡೆದಿದೆ. ಬೆಳ್ತಂಗಡಿ ತಾಲೂಕಿನ ಪರಾರಿ ಶಾಂತಿನಗರದಲ್ಲಿ ನಾರಾಯಣ ನಾಯ್ಕ ಎಂಬವರು ಬೀಡಿ ಕೊಟ್ಟು ವಾಪಾಸು ಬರುತ್ತಿರುವಾಗ ಶಾಂತಿನಗರ ಆಟದ […]Read More
ಹೈದರಾಬಾದ್: ಯೂಟ್ಯೂಬ್ ನಲ್ಲಿ ತನ್ನ ಚಾನೆಲ್ ಗೆ ವೀಕ್ಷಕರು ಕಡಿಮೆಯಾದರೂ ಎಂಬ ಒಂದೇ ಕಾರಣಕ್ಕೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ತೆಲಂಗಾಣ ರಾಜಧಾನಿ ಹೈದರಾಬಾದ್ ನಲ್ಲಿ ಈ ಘಟನೆ ನಡೆದಿದ್ದು 23 ವರ್ಷದ ವಿದ್ಯಾರ್ಥಿ ಒಬ್ಬ ತನ್ನ ಯ್ಯೂಟ್ಯೂಬ್ ಚಾನೆಲ್ ಗೆ ವೀಕ್ಷಕರು ಕಡಿಮೆಯಾದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹೈದರಾಬಾದ್ ಐಐಟಿಎಂನಲ್ಲಿ ವ್ಯಾಸಂಗ ಮಾಡುತ್ತಿದ್ದ ಗ್ವಾಲಿಯರ್ ಮೂಲದ ವಿದ್ಯಾರ್ಥಿ ಇಂದು ಬೆಳಿಗ್ಗೆ ವಸತಿ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಜಿಗಿದು ಆತ್ಮಹತ್ಯೆ […]Read More
ಬೈಂದೂರು: ಬೈಂದೂರು ತಾಲೂಕು ವ್ಯಾಪ್ತಿಯ ಶಿರೂರಿನಲ್ಲಿ ನಿಯಂತ್ರಣ ತಪ್ಪಿದ ಆಂಬುಲೆನ್ಸ್ ಟೋಲ್ ಗೇಟ್ ಕಂಬಕ್ಕೆ ಡಿಕ್ಕಿಯಾದ ಪ್ರಕರಣದಲ್ಲಿ ಮೂವರು ಚಿಕಿತ್ಸೆ ಫಲಿತ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮೂವರು ಗಂಭೀರ ಗಾಯಗೊಂಡಿದ್ದಾರೆ. ಮೃತಪಟ್ಟರು ಮಹಿಳೆ, ಇಬ್ಬರು ಪುರುಷರು ಸೇರಿದ್ದಾರೆ .ಆಂಬುಲೆನ್ಸ್ ನಲ್ಲಿ ಇದ್ದ ರೋಗಿ, ರೋಗಿ ಪತ್ನಿ ಮತ್ತು ಸಂಬಂಧಿ ಸಾವನ್ನಪ್ಪಿದ್ದಾರೆ. ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಟೋಲ್ ಗೇಟ್ ನಲ್ಲಿ ಈ ದುರಂತ ಇಂದು ಸಂಭವಿಸಿತ್ತು.Read More