• December 3, 2024

*ನವೆಂಬರ್ 10 ರಂದು ರೆಖ್ಯ ದಲ್ಲಿ ಮೊಳಗಲಿದೆ ಹಿಂದುತ್ವದ ಘರ್ಜನೆ: ಹಿಂದೂ ರಾಷ್ಟ ಜಾಗೃತಿ ಸಭೆಯ ಕುರಿತು ಪೂರ್ವಭಾವಿ ಸಭೆ

 *ನವೆಂಬರ್ 10  ರಂದು ರೆಖ್ಯ ದಲ್ಲಿ ಮೊಳಗಲಿದೆ  ಹಿಂದುತ್ವದ ಘರ್ಜನೆ: ಹಿಂದೂ ರಾಷ್ಟ ಜಾಗೃತಿ ಸಭೆಯ ಕುರಿತು ಪೂರ್ವಭಾವಿ ಸಭೆ

Oplus_131072

 

ಬೆಳ್ತಂಗಡಿ :ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಿನಾಂಕ *10 ನವೆಂಬರ್* ರಂದು ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ ರೆಖ್ಯ ದಲ್ಲಿ ನಡೆಯಲಿರುವ ಹಿಂದೂ ರಾಷ್ಟ ಜಾಗೃತಿ ಸಭೆಯ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಆನಂದ ಗೌಡ ರವರು ಮಾತಾನಾಡುತ್ತ ಇಂದು ಜಗತ್ತಿನಲ್ಲಿ 157 ಕ್ರೈಸ್ತ, 52 ಮುಸ್ಲಿಂ, 13 ಬೌದ್ಧ ಮತ್ತು 1 ಯಹೂದಿ ರಾಷ್ಟ್ರಗಳಿವೆ. ಆದರೆ ಹಿಂದೂಗಳಿಗೆ ಒಂದೇ ಒಂದು ರಾಷ್ಟ್ರವಿಲ್ಲ. ಜಾತ್ಯತೀತ ಭಾರತದ 9 ರಾಜ್ಯಗಳಲ್ಲಿ ಹಿಂದೂಗಳು ಅಲ್ಪಸಂಖ್ಯಾತರಾಗಿದ್ದಾರೆ. ಜಾತ್ಯತೀತ ಸರಕಾರವು ದೇವಾಲಯಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತವೆ ಮತ್ತು ಹಿಂದೂಗಳ ತೀರ್ಥಯಾತ್ರೆಗಳ ಮೇಲೆ ತೆರಿಗೆಯನ್ನು ಹೇರುತ್ತದೆ. ಮತಾಂತರ, ಲವ್ ಜಿಹಾದ್, ಉಗುಳು ಜಿಹಾದ್ ಮುಂತಾದ ಷಡ್ಯಂತ್ರಗಳು ಬಯಲಾಗುತ್ತಿವೆ. ಆದುದರಿಂದ ಇದಕ್ಕೆಲ್ಲ ಒಂದೇ ಪರಿಹಾರ ಭಾರತವನ್ನು ಸವಿಂಧಾನಬದ್ಧವಾಗಿ ಹಿಂದೂರಾಷ್ಟ್ರವೆಂದು ಘೋಷಣೆ ಮಾಡಬೇಕೆಂದು 13 ಅಕ್ಟೋಬರ್ 2024 ರಂದು ಶ್ರೀ ಗುಡ್ರಾಮಲ್ಲೇಶ್ವರ ಸಭಾಗ್ರಹದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.ಈ ಪೂರ್ವಭಾವಿ ಸಭೆಯಲ್ಲಿ ಶ್ರೀ ಜಯರಾಮ ನೆಲ್ಲಿತ್ತಾಯ ಧಾರ್ಮಿಕ ಮುಂದಾಲು ಹಾಗೂ ಶ್ರೀ ಶಿಶಿಲೇಶ್ವರ ದೇವಸ್ಥಾನದ ಅಭಿವೃದ್ಧಿಯ ನಿಕಟಪೂರ್ವ ಅಧ್ಯಕ್ಷರು ಮತ್ತು ಶ್ರೀ ದಾಮೋದರ ಗೌಡ ಕೊಲೆಚ್ಚಾವು ನಾಲೆಕ್ಕಿ ಗುತ್ತಿನ ಮನೆ, ಹಾಗೂ ಶಿಶಿಲ, ಶಿಬಾಜೆ, ಹತ್ಯಡ್ಕ, ರೆಖ್ಯಾ ಗ್ರಾಮದ ಹಿಂದುತ್ವನಿಷ್ಟರು, ಹಾಗೂ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು. ನವೆಂಬರ್ 10 ರಂದು ನಡೆಯಲಿರುವ ಹಿಂದೂ ರಾಷ್ಟ್ರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದೂ ಧರ್ಮ ಪ್ರೇಮಿಗಳು, ಬಂಧು ಭಗೀನಿಯರು ಭಾಗಿಯಾಗಬೇಕು ಮತ್ತು ಹೆಚ್ಚು ಸಂಖ್ಯೆ ಸೇರಿಸುವಲ್ಲಿ ನಾವೆಲ್ಲರೂ ಕೈ ಜೋಡಿಸಿ ಸಭೆಯನ್ನು ಯಶಸ್ವೀಗೊಳಿಸಿ ರಾಷ್ಟ್ರ ಹಾಗೂ ಧರ್ಮದ ಆ ಭಗವಂತನ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಎಂದು ಕರೆ ನೀಡಿದರು.ಸಮಿತಿಯ ಶ್ರೀ ಬಾಲಕೃಷ್ಣ ಗೌಡ, ಶ್ರೀ ಯಂ.ಹರೀಶ್ ,ಶ್ರೀ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರುಕೊನೆಯದಾಗಿ ಹಿಂದೂ ಜನಜಾಗೃತಿ ಸಮಿತಿ ಸೇವಕರಾದ ಶ್ರೀ ದಾಮೋದರ ಗೌಡ ಇವರು ಧನ್ಯವಾದ ನೀಡುವುದರೊಂದಿಗೆ ಪೂರ್ವಭಾವಿ ಸಭೆಯನ್ನು ಮುಕ್ತಾಯ ಮಾಡಲಾಯಿತು

Related post

Leave a Reply

Your email address will not be published. Required fields are marked *

error: Content is protected !!