ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್:ಇನ್ನು ಮುಂದೆ ಜನರು ವಿದ್ಯುತ್ ಎಚ್ಚರಿಕೆಯಿಂದ ಬಳಸಬೇಕು
ಒಂದು ಕಡೆ ಬೆಲೆ ಏರಿಕೆ ಜಾಸ್ತಿಯಾಗುತ್ತಿದ್ದಂತೆ ಸರ್ಕಾರ ಈಗ ಹೊಸ ರೂಲ್ಸ್ ಜಾರಿಗೆ ತರುತ್ತಿದೆ.
ಗೃಹಜ್ಯೋತಿ ಯೋಜನೆಗೆ ಹೊಸ ರೂಲ್ಸ್:
ಗೃಹಜ್ಯೋತಿ ಯೋಜನೆಯ ಮೂಲಕ ಪ್ರತೀ ಮನೆಗೆ ಉಚಿತ ವಿದ್ಯುತ್
ನೀಡಲಾಗುತ್ತದೆ. ಒಂದು ತಿಂಗಳಿಗೆ 200 ಯೂನಿಟ್ ಉಚಿತ ವಿದ್ಯುತ್ ಎಂದು ಹೇಳಿದರು ಸಹ ಪ್ರತಿ ಮನೆಗು ಅವರು ಪ್ರತಿ ತಿಂಗಳು ಎಷ್ಟು ವಿದ್ಯುತ್ ಬಳಸುತ್ತಿದ್ದರು ಎನ್ನುವುದರ ಮೇಲೆ ಲೆಕ್ಕ ಹಾಕಿ ಇಷ್ಟು ವಿದ್ಯುತ್ ಬಳಸಬಹುದು ಹೆಚ್ಚುವರಿಯಾಗಿ 10% ಯೂನಿಟ್ ನಷ್ಟು ವಿದ್ಯುತ್ ಬಳಸಬಹುದು ಎಂದು ಹೇಳಲಾಯಿತು. ಇಷ್ಟು ದಿನ ಜನರು ಹೆಚ್ಚಾಗಿ ವಿದ್ಯುತ್ ಬಳಕೆ ಮಾಡಿದರೆ ಅದರ ಹಣವನ್ನು ಪಾವತಿ ಮಾಡಬೇಕು ಎಂದು ಸರ್ಕಾರ ತಿಳಿಸಿತು.
ಆದರೆ ಇದೀಗ ಸರ್ಕಾರಕ್ಕೆ ಆಗುತ್ತಿರುವ ಹೊಣೆಯ ಕಾರಣ ಹೊಸ ನಿರ್ಧಾರ ಒಂದನ್ನು ತೆಗೆದುಕೊಳ್ಳಲಾಗಿದೆ. ಅದೇನು ಎಂದರೆ ಇನ್ಮುಂದೆ ಗೃಹಜ್ಯೋತಿ ಯೋಜನೆ ಬಳಸುವವರು ಅವರ ಮನೆಗೆ ಇರುವ ಲಿಮಿಟ್ ಗಿಂತ ಹೆಚ್ಚು ವಿದ್ಯುತ್ ಬಳಕೆ ಮಾಡಿದರೆ ಅವರಿಗೆ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಸಂಪೂರ್ಣ ಈ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇದು ಸರ್ಕಾರದ ಹೊಸ ರೂಲ್ಸ್ ಆಗಿದ್ದು ಜನರು ಇನ್ನುಮುಂದೆ ಎಚ್ಚರಿಕೆ ಇಂದ ವಿದ್ಯುತ್ ಬಳಕೆ ಮಾಡಬೇಕಾಗಿದೆ.