ಮೆಸ್ಕಂ – ಹುಣ್ಸೆಕಟ್ಟೆ ರಸ್ತೆಯಲ್ಲಿ ಹೊಂಡಗಳದ್ದೇ ಕಾರುಬಾರು: ಹೊಂಡಗಳಿಗೆ ತಾತ್ಕಾಲಿಕ ಮುಕ್ತಿ ನೀಡಿದ ಹುಣ್ಸೆಕಟ್ಟೆ ಸ್ಥಳೀಯ ಯುವಕರು: ಸುಗಮ ರಸ್ತೆ ನಿರ್ಮಾಣಕ್ಕೆ ದಿಟ್ಟ ಹೆಜ್ಜೆ ಇಟ್ಟ ಯುವಕರು
ಹುಣ್ಸೆಕಟ್ಟೆ: ಬೆಳ್ತಂಗಡಿ ಪೇಟೆಯಿಂದ ಮೆಸ್ಕಂ- ಹುಣ್ಸೆಕಟ್ಟೆಗೆ ಸಾಗುವ ರಸ್ತೆಗಳಲ್ಲಿ ಅಲ್ಲಲ್ಲಿ ಗುಂಡಿಗಳು ಬಿದ್ದು ಮಳೆ ನೀರು ನಿಂತು, ದ್ವಿಚಕ್ರ ವಾಹನಗಳು ಗುಂಡಿಯ ಅರಿವೇ ಇಲ್ಲದೆ ರಸ್ತೆಯೆಂದು ಸಾಗಿ ಅವಾಂತರಕ್ಕೆ ಸಿಲುಕಿದ ಘಟನೆಗಳು ನಡೆಯುತ್ತಲೇ ಇದೆ. ಆ ಗುಂಡಿಗಳಿಗೆ ತಾತ್ಕಾಲಿಕವಾಗಿ ಮುಕ್ತಿಯನ್ನು ನೀಡಿ ಸುಗಮ ಸಂಚಾರಕ್ಕೆ ಅನುವು ಮಾಡಲು ಮುಂದಾಗಿದ್ದು ಹುಣ್ಸೆಕಟ್ಟೆ ಶ್ರೀ ರಾಮ ಭಜನಾ ಮಂಡಳಿ(ರಿ) ಹುಣ್ಸೆಕಟ್ಟೆಯ ಯುವಕರು.
ನಮ್ಮ ರಸ್ತೆ ನಮ್ಮ ಹೆಮ್ಮೆ ಎಂಬ ಘೋಷಣೆಯ ಸೇವೆಯಡಿ ಸುಮಾರು 25 ಕ್ಕೂ ಹೆಚ್ಚಿನ ಯುವಕರೆಲ್ಲ ಒಟ್ಟು ಸೇರಿ ರಾತ್ರಿ ವೇಳೆ ರಸ್ತೆಯ ಗುಂಡಿಗಳಿಗೆ ಪರಿಹಾರ ನೀಡಿದ್ದಾರೆ.
ಮೆಸ್ಕಂ ನಿಂದ ಹುಣ್ಸೆಕಟ್ಟೆಗೆ ತೆರಳುವ ರಸ್ತೆಯಲ್ಲಿ ಇದೀಗ ಹಲವಾರು ದಟ್ಟನೆಯ ವಾಹನಗಳು ಸಾಗುತ್ತಿದ್ದು, ರಸ್ತೆಯಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು , ಪಾದಾಚಾರಿಗಳು ರಸ್ತೆ ದಾಟಲು ಹರಸಾಹಸ ಪಡುತ್ತಿದ್ದರು ಆದರೆ ಹುಣ್ಸೆಕಟ್ಟೆ ಯುವಕರು ತಾತ್ಕಾಲಿಕವಾಗಿ ಮಾಡಿರುವ ಸಹಕಾರದಿಂದ ಸುಗಮ ರಸ್ತೆ ನಿರ್ಮಾಣಕ್ಕೆ ಕಾರಣವಾಗಿದೆ.
ಬೆಳ್ತಂಗಡಿ ಯಿಂದ ಅದೆಷ್ಟೋ ವಾಹನಗಳು ಗೇರುಕಟ್ಟೆಗೆ ಹೊಗಬೇಕಾದರೆ ಹುಣ್ಸೆಕಟ್ಟೆಗೆ ತೆರಳುವ ರಸ್ತೆಯಿಂದ ಸಾಗುತ್ತಿದೆ ದಟ್ಟನೆಯ ವಾಹನಗಳು ಸಾಗುವುದು ಕಂಡು ಬರುತ್ತಿರುವಾಗ ಈ ರಸ್ತೆಯು ಇಂತಹ ಪರಿಸ್ಥಿತಿಯಲ್ಲಿ ದ್ದರೆ ಸಾಗುವುದಾದರು ಹೇಗೆ? ಮುಂದೊಂದು ದಿನ ಬಸ್ ಗಳೂ ಈ ರಸ್ತೆಯಿಂದ ಚಲಿಸಲು ಪ್ರಾರಂಬಿಸಿದರೆ ಪಾದಾಚಾರಿಗಳ ಹಾಗೂ ದ್ವಿಚಕ್ರ ವಾಹನಗಳ ಪರಿಸ್ಥಿತಿ ಏನಾಗಬಹುದು? ದಯಮಾಡಿ ಈ ರಸ್ತೆಗೆ ಸರಿಯಾದ ವ್ಯವಸ್ತೆಯನ್ನು ಆಯಾ ಇಲಾಖೆ ಕಲ್ಪಿಸಿಕೊಡಬೆಕಾಗಿದೆ ಇಲ್ಲವಾದರೆ ಇದೇ ರೀತಿಯಾದ ತಾತ್ಕಾಲಿಕ ಮುಕ್ತಿ ಎಷ್ಟು ದಿನ? ಅಧಿಕ tax ಬೀಳುವ ಈ ಪ್ರದೇಶದಲ್ಲಿ tax ಕಟ್ಟುತ್ತೆವೆ ಆದರೆ ನಮಗೆ ಸರಿಯಾದ ರಸ್ತೆಯಿಲ್ಲ ಎನ್ನುವ ಮಾತೆ ಇಲ್ಲಿಯ ಜನರದ್ದು.
ತಾತ್ಕಾಲಿಕವಾಗಿ ರಸ್ತೆಯ ಗುಂಡಿಗಳಿಗೆ ಮುಕ್ತಿಯನ್ನು ನೀಡಿದರೂ ಇದೀಗ ಮಳೆಗಾಲದಲ್ಲಿ ಮತ್ತೆ ಗುಂಡಿಗಳು ಕಾಣಿಸುತ್ತದೆ. ಶಾಲಾ ಮಕ್ಕಳು ತೆರಳುವ ಈ ರಸ್ತೆಯನ್ನು ಸಂಬಂಧಪಟ್ಟ ಇಲಾಖೆ ಸರಿಪಡಿಸಬೇಕೇ ಹೊರತು ಸ್ಥಳಿಯರಲ್ಲ ಆದರೆ ವಿಧಿಯಿಲ್ಲದೆ ನಮ್ಮ ರಸ್ತೆ ನಮ್ಮ ಹೆಮ್ಮೆ ಎಂದು ಹೇಳಿ ಹುಣ್ಸೆಕಟ್ಟೆ ಸ್ಥಳೀಯ ಯುವಕರೆ ಒಟ್ಟಾಗಿ ಮುಂದೆ ಹೆಜ್ಜೆ ಇಟ್ಟಿದ್ದಾರೆ. ಸಹಾಯ ಸಹಕಾರ ನೀಡುವುದರಲ್ಲಿ ಹುಣ್ಸೆಕಟ್ಟೆ ಯುವಕರ ಹೆಜ್ಜೆ ಸ್ವಲ್ಪ ಮುಂದೆಯೇ.ಯಾಕೆಂದರೆ ಊರಿನ ರಸ್ತೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಊರಿನ ಜನತೆ ಮುಂದು, ವಾಹನಗಳ ವ್ಯವಸ್ಥೆ, ರಸ್ತೆ ಸರಿಪಡಿಸುವ ವೇಳೆ ತಿಂಡಿ, ಕೂಲ್ ಡ್ರಿಂಕ್ಸ್, ನೀರು, ಡಸ್ಟ್ ಹೀಗೆ ಸಹಕಾರವನ್ನೂ ನೀಡಿದ್ದಾರೆ.
ಅತ್ಯಂತ ಉತ್ಸಾಹದಿಂದ ರಾತ್ರಿ ಇಡೀ ರಸ್ತೆಯನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಹುಣ್ಸೆಕಟ್ಟೆ ಸ್ಥಳೀಯ ಯುವಕರು