• October 30, 2024

ಯುಗಯುಗಗಳಿಂದ ಧರ್ಮಸಂಸ್ಥಾಪನೆ ಕಾರ್ಯದಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ ಗುರು-ಶಿಷ್ಯ ಪರಂಪರೆ !ಆಷಾಢ ಹುಣ್ಣಿಮೆ (21 ಜುಲೈ), ಇರುವ ಗುರುಪೂರ್ಣಿಮೆ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ಲೇಖನ

 ಯುಗಯುಗಗಳಿಂದ ಧರ್ಮಸಂಸ್ಥಾಪನೆ ಕಾರ್ಯದಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ ಗುರು-ಶಿಷ್ಯ ಪರಂಪರೆ !ಆಷಾಢ ಹುಣ್ಣಿಮೆ (21 ಜುಲೈ), ಇರುವ ಗುರುಪೂರ್ಣಿಮೆ ನಿಮಿತ್ತ ಹಿಂದೂ ಜನಜಾಗೃತಿ ಸಮಿತಿಯ ಲೇಖನ

 


ಮಾಯೆಯ ಭವಸಾಗರದಿಂದ ಶಿಷ್ಯ ಮತ್ತು ಭಕ್ತನನ್ನು ಹೊರತರುವ, ಅವನಿಂದ ಆವಶ್ಯಕವಿರುವ ಸಾಧನೆಯನ್ನು ಮಾಡಿಸಿಕೊಳ್ಳುವ ಮತ್ತು ಕಠಿಣ ಸಮಯದಲ್ಲಿ ಅವನಿಗೆ ಅತ್ಯಂತ ಹತ್ತಿರದಿಂದ ಹಾಗೂ ನಿರಪೇಕ್ಷ ಪ್ರೇಮದಿಂದ ಆಧಾರವನ್ನು ನೀಡಿ ಸಂಕಟಮುಕ್ತ ಮಾಡುವವರು ಗುರುಗಳೇ ಇದ್ದಾರೆ. ಇಂತಹ ಪರಮಪೂಜನೀಯ ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತ ಮಾಡುವ ದಿನವೆಂದರೆ ಗುರುಪೂರ್ಣಿಮೆ. ಪ್ರಸ್ತುತ ಲೇಖನದಲ್ಲಿ ನಾವು ಗುರುಪೂರ್ಣಿಮೆಯ ಮಹತ್ವ ಹಾಗೂ ಯುಗಯುಗಗಳಿಂದ ಧರ್ಮಸಂಸ್ಥಾಪನೆ ಕಾರ್ಯದಲ್ಲಿ ಮಹತ್ವಪೂರ್ಣ ಪಾತ್ರವಹಿಸಿದ ಗುರು-ಶಿಷ್ಯ ಪರಂಪರೆಯ ಮಹತ್ವ ನೋಡುವವರಿದ್ದೇವೆ.
ತಿಥಿ
ಗುರುಪೂರ್ಣಿಮೆ ಮಹೋತ್ಸವವನ್ನು ಎಲ್ಲೆಡೆ ಆಷಾಢ ಹುಣ್ಣಿಮೆಯಂದು ಆಚರಿಸಲಾಗುತ್ತದೆ. (ತಮಿಳುನಾಡಿನಲ್ಲಿ ವ್ಯಾಸಪೂಜೆಯನ್ನು ಜ್ಯೇಷ್ಠ ಪೂರ್ಣಿಮೆಯಂದು ಮಾಡುತ್ತಾರೆ.)
ಉದ್ದೇಶ
ಗುರು ಎಂದರೆ ಈಶ್ವರನ ಸಗುಣ ರೂಪ. ವರ್ಷಾದ್ಯಂತ ಪ್ರತಿಯೊಬ್ಬ ಗುರುಗಳು ತಮ್ಮ ಭಕ್ತರಿಗೆ ಅಧ್ಯಾತ್ಮದ ಬೋಧಾಮೃತವನ್ನು ನೀಡುತ್ತಿರುತ್ತಾರೆ. ಆ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತಪಡಿಸುವುದೇ ಗುರುಪೂರ್ಣಿಮೆ ಆಚರಿಸುವುದರ ಹಿಂದಿನ ಉದ್ದೇಶವಾಗಿದೆ.


ಮಹತ್ವ
೧. ಗುರುಪೂರ್ಣಿಮೆಯಂದು ಗುರುತತ್ತ್ವವು (ಈಶ್ವರೀ ತತ್ತ್ವವು) ಇತರ ದಿನಗಳ ತುಲನೆಯಲ್ಲಿ ೧ ಸಾವಿರ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಆದ್ದರಿಂದ ಗುರುಪೂರ್ಣಿಮೆಯ ನಿಮಿತ್ತ ಮೊದಲಿನಿಂದಲೂ ಮನಃಪೂರ್ವಕ ಮಾಡಿದ ಸೇವೆ ಮತ್ತು ತ್ಯಾಗ (ಸತ್‌ಗಾಗಿ ಮಾಡಿದ ಅರ್ಪಣೆ) ಇವುಗಳ ಲಾಭವು ಇತರ ದಿನಗಳ ತುಲನೆಯಲ್ಲಿ ವ್ಯಕ್ತಿಗೆ ೧ ಸಾವಿರ ಪಟ್ಟು ಹೆಚ್ಚಾಗುತ್ತದೆ; ಆದ್ದರಿಂದ ಗುರುಪೂರ್ಣಿಮೆಯು ಈಶ್ವರೀ ಕೃಪೆಯ ಒಂದು ಅಮೂಲ್ಯ ಪರ್ವಕಾಲವೇ ಆಗಿದೆ.
೨. ‘ಗುರು-ಶಿಷ್ಯ ಪರಂಪರೆ’ಯು ಹಿಂದೂಗಳ ಲಕ್ಷಾವಧಿ ವರ್ಷಗಳ ಚೈತನ್ಯಮಯ ಸಂಸ್ಕೃತಿಯಾಗಿದೆ. ಆದರೆ ಕಾಲದ ಪ್ರವಾಹದಲ್ಲಿ ರಜ-ತಮಪ್ರಧಾನ ಸಂಸ್ಕೃತಿಯ ಪ್ರಭಾವದಿಂದಾಗಿ ಮಹಾನ ಗುರು-ಶಿಷ್ಯ ಪರಂಪರೆಯನ್ನು ನಿರ್ಲಕ್ಷಿಸಲಾಗುತ್ತಿದೆ. ಗುರುಪೂರ್ಣಿಮೆಯ ನಿಮಿತ್ತದಿಂದ ಗುರುಪೂಜೆಯಾಗುತ್ತದೆ, ಹಾಗೆಯೇ ಗುರು-ಶಿಷ್ಯ ಪರಂಪರೆಯ ಶ್ರೇಷ್ಠತೆಯನ್ನು ಸಮಾಜಕ್ಕೆ ಹೇಳಲು ಸಾಧ್ಯವಾಗುತ್ತದೆ. ಸ್ವಲ್ಪದರಲ್ಲಿ ಹೇಳುವುದಾದರೆ ಗುರು-ಶಿಷ್ಯ ಪರಂಪರೆಯನ್ನು ಉಳಿಸಿಕೊಳ್ಳುವ ಸದಾವಕಾಶ ಲಭಿಸುತ್ತದೆ.

      ಈ ದಿವ್ಯ ಗುರು-ಶಿಷ್ಯ ಪರಂಪರೆಯು ಆಶ್ರಮಗಳನ್ನು ಮಾತ್ರ ಸ್ಥಾಪಿಸಿದ್ದಲ್ಲ, ಸಮಾಜದಲ್ಲಿ ಧರ್ಮ-ಅಧ್ಯಾತ್ಮ-ಭಕ್ತಿಯನ್ನು ಹರಡುವ ಮೂಲಕ, ರಾಷ್ಟ್ರ ಮತ್ತು ಧರ್ಮವನ್ನು ರಕ್ಷಿಸುವ ಅಂದರೆ ಧರ್ಮವನ್ನು ಸ್ಥಾಪಿಸುವ ಮೂಲಕ ಸಾಮಾಜಿಕ ಜೀವನವನ್ನು ಉನ್ನತಗೊಳಿಸುವ ಕಾರ್ಯ ಮಾಡಿದೆ. ಹಾಗೂ ರಾಷ್ಟ್ರ ಮತ್ತು ಧರ್ಮರಕ್ಷಣೆ ಅರ್ಥಾತ್ ಧರ್ಮಸಂಸ್ಥಾಪನೆಯ ಕಾರ್ಯವನ್ನು ಸಹ ಮಾಡಿದೆ. ಈ ಪರಂಪರೆಯಿಂದಾಗಿಯೇ ಅನೇಕ ವಿದೇಶಿ ಆಕ್ರಮಣಗಳ ನಡುವೆಯೂ ಹಿಂದೂ ಧರ್ಮ ಇಂದಿಗೂ ಉಳಿದಿದೆ. ಶ್ರೀ ಕೃಷ್ಣ-ಅರ್ಜುನ, ಆರ್ಯ ಚಾಣಕ್ಯ-ಚಂದ್ರಗುಪ್ತ ಮೌರ್ಯ, ಸಮರ್ಥ ರಾಮದಾಸ ಸ್ವಾಮಿ-ಛತ್ರಪತಿ ಶಿವಾಜಿ ಮಹಾರಾಜರೇ ಇದಕ್ಕೆ ಉದಾಹರಣೆ. ಈ ಎಲ್ಲ ರಾಜ ಮಹಾರಾಜರ ಕಾಲಾವಧಿಯಲ್ಲಿ ರಾಜ್ಯವು ಅವನತಿಯಲ್ಲಿರುವಾಗ ಅಥವಾ ಅಧರ್ಮವು ತಾಂಡವವಾಡುತ್ತಿರುವಾಗ ಗುರುಗಳು ಮಾರ್ಗದರ್ಶನವನ್ನು ಮಾಡಿ ಧರ್ಮದ ಪುರ್ನಸ್ಥಾಪನೆ ಮಾಡಿದ್ದಾರೆ.

ಇಂದು ಲವ್ ಜಿಹಾದ್, ಲ್ಯಾಂಡ್ ಜಿಹಾದ್, ಹಲಾಲ್ ಜಿಹಾದ್, ಮತಾಂತರ ಇನ್ನೂ ಅನೇಕ ಸಮಸ್ಯೆಗಳು ನಮ್ಮ ದೇಶವನ್ನು ಕಾಡುತ್ತಿವೆ. ಈ ಎಲ್ಲ ಸಮಸ್ಯೆಗಳು ಕೇವಲ ಹಿಂದೂ ರಾಷ್ಟ್ರದಲ್ಲಿ ನಿರ್ಮೂಲನೆಯಾಗಬಲ್ಲವು. ಹಿಂದೂ ರಾಷ್ಟ್ರ ಎಂದರೆ ಕೇವಲ ಹಿಂದೂಗಳಿರುವ ರಾಷ್ಟ್ರ ಎಂದರ್ಥವಲ್ಲ, ‘ಮೇರುತಂತ್ರ ಧರ್ಮಗ್ರಂಥದಲ್ಲಿ ‘ಹೀನಂ ದೂಷಯತಿ ಇತಿ ಹಿಂದುಃ | ಅಂದರೆ ‘ಹೀನ ಅಥವಾ ಕನಿಷ್ಠ ರಜ-ತಮ ಗುಣಗಳನ್ನು ‘ದೂಷಯತಿ, ಅಂದರೆ ನಾಶಪಡಿಸುವವನೇ ಹಿಂದೂ ಎಂದು ‘ಹಿಂದೂ ಶಬ್ದದ ಉತ್ಪತ್ತಿಯನ್ನು ಕೊಡಲಾಗಿದೆ. ಯಾರು ರಜ-ತಮಾತ್ಮಕ ಹೀನಗುಣಗಳನ್ನು ಮತ್ತು ಅದರಿಂದಾಗಿ ಘಟಿಸುವ ಕಾಯಾ, ವಾಚಾ ಮತ್ತು ಮಾನಸಿಕ ಸ್ತರದಲ್ಲಿನ ಹೀನ ಕರ್ಮಗಳನ್ನು ತಿರಸ್ಕರಿಸುತ್ತಾನೆಯೋ; ಅಂದರೆ ಸಾತ್ತ್ವಿಕ ಆಚರಣೆಯನ್ನು ಮಾಡುತ್ತಾನೆಯೋ ಅವನೇ ‘ಹಿಂದೂ. ಇಂತಹ ಸತ್ತ್ವಗುಣಿ ವ್ಯಕ್ತಿಯು ‘ನಾನು ಮತ್ತು ನನ್ನ ಎಂಬಂತಹ ಸಂಕುಚಿತ ವಿಚಾರಗಳನ್ನು ತ್ಯಜಿಸಿ ವಿಶ್ವಕಲ್ಯಾಣದ ಬಗ್ಗೆ ವಿಚಾರ ಮಾಡುತ್ತಾನೆ. ಅಂತಹ ಹಿಂದೂ ರಾಷ್ಟ್ರಕ್ಕೆ ಈಗ ಎಲ್ಲೆಡೆ ಕೂಗು ಕೇಳುತ್ತಿದೆ. ‘ಹಿಂದೂ ರಾಷ್ಟ್ರ’ ಈಗ ಚಳುವಳಿಯಾಗಿ ಮಾರ್ಪಟ್ಟಿದೆ. ನೂರಾರು ಹಿಂದೂ ಸಂಘಟನೆಗಳು, ಕಾರ್ಯಕರ್ತರು ಈ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಇದೊಂದು ರೀತಿಯಲ್ಲಿ ಯುಗ ಪರಿವರ್ತನೆಯ ಕಾಲವೇ ಆಗಿದೆ.

ವಿದ್ಯಾರಣ್ಯರು ದೊಡ್ಡ ಸಂತರು, ತತ್ತ್ವಜ್ಞಾನಿಗಳು, ಚಿಂತಕರು ಹಾಗೂ ವೇದಗಳ ಅಭ್ಯಾಸಕರಾಗಿದ್ದರು. ಅವರು ಮುಸಲ್ಮಾನರಿಂದ ಮತಾಂತರಗೊಂಡಿದ್ದ ಹರಿಹರ ಮತ್ತು ಬುಕ್ಕರನ್ನು ಶುದ್ಧೀಕರಿಸಿ ಹಿಂದೂ ಧರ್ಮಕ್ಕೆ ಸೇರಿಸಿಕೊಂಡರು. ಅವರಿಗೆ ರಾಜಧರ್ಮದ ಶಿಕ್ಷಣ ನೀಡಿದರು ಮತ್ತು ಅವರ ಮೂಲಕ ವಿಜಯನಗರ ಸಾಮ್ರಾಜ್ಯದ ಅಡಿಪಾಯವನ್ನು ಹಾಕಿದರು. ವಿದ್ಯಾರಣ್ಯರ ಮಾರ್ಗದರ್ಶನದಲ್ಲಿ ಹರಿಹರ ಮತ್ತು ಬುಕ್ಕರು ಆದರ್ಶ ಶಿಷ್ಯರಂತೆ ರಾಜ್ಯಭಾರ ನಡೆಸಿದರು. ಇದರಿಂದ ಗುರುತತ್ತ್ವವು ಯಾವಾಗಲೂ ಧರ್ಮವನ್ನು ರಕ್ಷಿಸಲು ತನ್ನ ಶಿಷ್ಯರಿಗೆ ಆಜ್ಞಾಪಿಸಿದೆ ಅಥವಾ ಅವರಿಂದ ಈ ಕಾರ್ಯವನ್ನು ಮಾಡಿಸಿಕೊಂಡಿದೆ ಎಂಬುದು ಗಮನಕ್ಕೆ ಬರುತ್ತದೆ. ಗುರು-ಶಿಷ್ಯ ಪರಂಪರೆಯು ಧರ್ಮಸಂಸ್ಥಾಪನೆಯ ಕಾರ್ಯವನ್ನು ಹೇಗೆ ಮಾಡಿತು ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಇಂದು, ಇದೇ ರೀತಿ ಧರ್ಮಸಂಸ್ಥಾಪನೆಯ ಕಾರ್ಯದ ಅವಶ್ಯಕತೆಯಿದೆ. ಹಾಗಾಗಿ ಈ ಧರ್ಮಸಂಸ್ಥಾಪನೆಯ ಕಾರ್ಯವನ್ನು ಕೇವಲ ಶಾರೀರಿಕ ಮತ್ತು ಬೌದ್ಧಿಕ ಸ್ತರದಲ್ಲಿ ಮಾಡಲು ಸಾಧ್ಯವಿಲ್ಲ. ಗುರುಗಳ ಮತ್ತು ಸಂತರ ಮಾರ್ಗದರ್ಶನ ಪಡೆದು ಕಾರ್ಯ ಮಾಡುವುದು ಅಪೇಕ್ಷಿತವಿದೆ. ಆದ್ದರಿಂದಲೇ ಹಿಂದೂ ಜನಜಾಗೃತಿ ಸಮಿತಿಯು ಗುರುಪೂರ್ಣಿಮೆಯ ದಿನ ಅಂದರೆ ಆಷಾಢ ಹುಣ್ಣಿಮೆ, 21 ಜುಲೈ 2024 ರಂದು ದೇಶದ ಮೂಲೆ ಮೂಲೆಗಳಲ್ಲೂ ಗುರುಪೂರ್ಣಿಮಾ ಮಹೋತ್ಸವಗಳ ಆಯೋಜನೆ ಮಾಡಿ ಹಿಂದೂಗಳನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದೆ. ಈ ಗುರುಪೂರ್ಣಿಮಾ ಮಹೋತ್ಸವದಲ್ಲಿ ಪಾಲ್ಗೊಂಡು ಗುರುಗಳ ಆಶೀರ್ವಾದ ಪಡೆಯೋಣ. ನಮ್ಮ ಜಿಲ್ಲೆಯಲ್ಲಿ ನಡೆಯಲಿರುವ ಗುರುಪೂರ್ಣಿಮಾ ಮಹೋತ್ಸವಗಳ ಮಾಹಿತಿ ಹೀಗಿದೆ..

Related post

Leave a Reply

Your email address will not be published. Required fields are marked *

error: Content is protected !!