• October 16, 2024

ಮಾಚಾರಿನಲ್ಲಿ ಜೂನ್ 2 ರಂದು ನಡೆದ ಮರಾಠಿ ನಾಯ್ಕ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಖಂಡನೀಯ: ಇಂತಹ ಘಟನೆಗಳು ಮುಂದುವರೆದರೆ ಬಿದಿಗಿಳಿದು ಪ್ರತಿಭಟನೆ ನಡೆಸುತ್ತೇವೆ: ಬೆಳ್ತಂಗಡಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಉಜಿರೆ ಬೆಳ್ತಂಗಡಿ

 ಮಾಚಾರಿನಲ್ಲಿ ಜೂನ್ 2 ರಂದು ನಡೆದ ಮರಾಠಿ ನಾಯ್ಕ ಸಮುದಾಯದ ಯುವಕನ ಮೇಲೆ ಹಲ್ಲೆ ನಡೆದ ಘಟನೆ ಖಂಡನೀಯ: ಇಂತಹ ಘಟನೆಗಳು ಮುಂದುವರೆದರೆ ಬಿದಿಗಿಳಿದು ಪ್ರತಿಭಟನೆ ನಡೆಸುತ್ತೇವೆ: ಬೆಳ್ತಂಗಡಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ಉಜಿರೆ ಬೆಳ್ತಂಗಡಿ

 

ಬೆಳ್ತಂಗಡಿ: ಉಜಿರೆ ಗ್ರಾಮದ ಮಾಚಾರು ಎಂಬಲ್ಲಿ ಜೂನ್ 2 ರಂದು ಮರಾಠಿ ನಾಯ್ಕ ಸಮುದಾಯದ ಅಶ್ವಥ್ ಎಂಬ ಯುವಕನ ಮೇಲೆ ನಡೆದ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ಖಂಡನೀಯ ಮರಾಠಿ ನಾಯ್ಕ ಸಮುದಾಯದ ಮೇಲೆ ಈ ರೀತಿಯ ಘಟನೆಗಳು ಮುಂದುವರೆದರೆ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಶೇಖರ್ ಲಾಯಿಲ ಅವರು ಹೆಳಿದರು.

ಅವರು ಶ್ರೀ ಗುರುನಾರಾಯಣ ಸಭಾಭವನದಲ್ಲಿ ಇಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಮಾಚಾರು ಪ್ರದೇಶದಲ್ಲಿ ಅಕ್ರಮ ಚಟುವಟಿಕೆಗಳಲ್ಲಿ ಹಲ್ಲೆ ನಡೆಸಿದ ಕರುಣಾಕರ ಗೌಡ ಭಾಗಿಯಾಗಿದ್ದ, ಹೆಣ್ಣು ಮಕ್ಕಳಿಗೆ ಕಿರುಕುಳ ನೀಡಿದ ಕರುಣಾಕರನನ್ನು ಪ್ರಶ್ನಿಸಿದಕ್ಕಾಗಿ ಯುವಕನ ಮೇಲೆ ಹಲ್ಲೆ ನಡೆಸಿದ್ದಾನೆ.ಈತನ ಮೇಲೆ ಬೆಳ್ತಂಗಡಿ ಪೊಲಿಸ್ ಠಾಣೆಯಲ್ಲಿ ಹಲವು ಕೇಸ್ಗಳು ದಾಖಲಾಗಿವೆ. ಅಶ್ವಥ್ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವಿಚಾರ ತಿಳೊದುಕೊಂಡ ಕರುಣಾಕರ ಗೌಡ ತನ್ನ ತಾಯಿಯನ್ನು ಉಜಿರೆ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಮಾನಬಂಗಕ್ಕೆ ಯತ್ನ ನಡೆದಿದೆ ಎಂದು ಅಶ್ವಥ್ ಮೇಲೆ ಸುಳ್ಳು ಕೇಸ್ ದಾಖಲಿಸಿರುವುದು ಖಂಡನೀಯ. ಆರೋಪಿ ಕರುಣಾಕರ ಗೌಡನ ಈ ಹಿಂದಿನ ಎಲ್ಲಾ ಕೇಸ್ ಗಳ ಆಧಾರದಲ್ಲಿ ಆತನನ್ನು ರೌಡಿಶೀಟರ್ ಪಟ್ಟಿಗೆ ಸೇರಿಸುವ ಮೂಲಕ ಆತನನ್ನು ಬೆಳ್ತಂಗಡಿ ತಾಲೂಕಿನಿಂದ ಗಡಿಪಾರು ಮಾಡಬೇಕು ಎಂದು ಒತ್ತಾಯಮಾಡಲಾಯಿತು

Related post

Leave a Reply

Your email address will not be published. Required fields are marked *

error: Content is protected !!