ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ತರಗತಿಯ ಉದ್ಘಾಟನಾ ಸಮಾರಂಭ
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಾಸ್ತ್ರೀಯ ಸಂಗೀತ ಹಾಗೂ ಭರತನಾಟ್ಯ ತರಗತಿಯ ಉದ್ಘಾಟನಾ ಸಮಾರಂಭ ನೆರವೇರಿತು.
ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ನಿನಾದ ಕ್ಲಾಸಿಕಲ್ ಮ್ಯೂಸಿಕ್ ಇದರ ಸಂಗೀತ ಗುರುಗಳಾದ ಶ್ರೀಮತಿ ಶ್ರೀದೇವಿ ಸಚಿನ್ ಇವರು ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿಸಿದರು.ಬಳಿಕ ಮಾತನಾಡಿದ ಅವರು ಸಂಗೀತ ಹಾಗು ನೃತ್ಯದಿಂದ ಮನಸ್ಸಿನ ಏಕಾಗ್ರತೆಯನ್ನು ಹೆಚ್ಚಿಸಲು ಸಹಕಾರಿ ಹೀಗಾಗಿ ಪಾಠದ ಜೊತೆಗೆ ಇಂತಹ ಚಟುವಟಿಕೆಗಳು ಅಗತ್ಯ ಎಂದು ನುಡಿದು ಶುಭ ಹಾರೈಸಿದರು.
ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಎಂ ವಿ ಮುಖ್ಯಶಿಕ್ಷಕಿ ವಿದ್ಯಾರ್ಥಿಗಳಿಗೆ ಈ ತರಗತಿಗಳ ಅಗತ್ಯ ಹಾಗೂ ಅದರಲ್ಲಿ ಸಾಧಿಸಬಹುದಾದ ಮಾರ್ಗಗಳನ್ನು ತಿಳಿಸಿ ಶುಭ ಹಾರೈಸಿದರು.ಕುಮಾರಿ ವೈದೇಹಿ ಭಟ್ ಕಾರ್ಯಕ್ರಮವನ್ನು ನಿರೂಪಿಸಿದರು.
ಕುಮಾರಿ ಮನ್ವಿತಾ ಟಿಎಂ ಅತಿಥಿಗಳ ಪರಿಚಯ ಮಾಡಿಸಿದರು. ಸಂಗೀತ ಶಿಕ್ಷಕಿಯಾದ ಶ್ರೀಮತಿ ಮನೋರಮತೊಳ್ಪಡಿತ್ತಾಯ ಸ್ವಾಗತಿಸಿ ,ವಿದುಷಿ ವಿದ್ಯಾ ಶೈಲೇಶ್ ಟೋಸರ್ರವರು ಕಾರ್ಯಕ್ರಮದ ಕೊನೆಯಲ್ಲಿ ವಂದನಾರ್ಪಣೆಗೈದರು.