ಡಾಟ್ ಮಂಡಲ ಆರ್ಟ್ ಕಲೆಯನ್ನು ಕಲಿತು 35 ನಿಮಿಷಗಳಲ್ಲಿ 40 ಸೆಂ.ಮೀ ಅಗಲದ ಬೋರ್ಡ್ ನಲ್ಲಿ ಡಾಟ್ ಮಂಡಲ ಆರ್ಟ್ ರಚಿಸಿದ ಲಾಯಿಲದ ಸುರಕ್ಷಾ ಆಚಾರ್ಯ
ಲಾಯಿಲ ಗ್ರಾಮದ ಕನ್ನಾಜೆ ನಿವಾಸಿ ಚಂದ್ರಶೇಖರ ಆಚಾರ್ಯ ಮತ್ತು ಸರಸ್ವತಿ ಆಚಾರ್ಯ ಇವರ ಮಗಳು ಸುರಕ್ಷಾ ಆಚಾರ್ಯ ಚಿಕ್ಕಂದಿನಿಂದಲೂ ಎಲ್ಲಾ ಕಲೆಗಳಲ್ಲೂ ಆಸಕ್ತಿ ಹೊಂದಿದ್ದು ಎಲ್ಲಾ ಕಲೆಗಳಲ್ಲೂ ಸಾಧನೆ ಮಾಡಿ ಹಲವಾರು ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಇವರು ಅರುಣ್ ಕುಮಾರ್ ಧರ್ಮಸ್ಥಳ ಇವರಿಂದ 3 ವರ್ಷಗಳ ಕಾಲ ಯಕ್ಷಗಾನ ತರಬೇತಿಯನ್ನು ಪಡೆದು ಮಂಗಳೂರು, ಧಾರವಾಡ, ಕಾರ್ಕಳ, ಶ್ರವಣಬೆಳಗೊಳ, ಚಿಕ್ಕಮಗಳೂರು ಹೀಗೆ ಮುಂತಾದ ಕಡೆಗಳಲ್ಲಿ ಯಕ್ಷಗಾನ ಪ್ರದರ್ಶನವನ್ನು ಮಾಡಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ಪೆನ್ಸಿಲ್ ಆರ್ಟ್, ಲೀಫ್ ಆರ್ಟ್, ವಾಲ್ ಆರ್ಟ್, ಹೀಗೆ ನಾನಾ ವೈವಿಧ್ಯತೆಯ ಕಲೆಗಳನ್ನು ಕರಗತ ಮಾಡಿಕೊಂಡು ಡಾಟ್ ಮಂಡಲ ಆರ್ಟ್ ಎಂಬ ಕಲೆಯನ್ನು ಕಲಿತು ಕೇವಲ 35 ನಿಮಿಷಗಳಲ್ಲಿ 40 ಸೆಂ.ಮೀ ಅಗಲದ ಬೋರ್ಡ್ ನಲ್ಲಿ ರಚಿಸಿದ ಡಾಟ್ ಮಂಡಲ ಆರ್ಟ್ ಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ 2022 ಹಾಗೂ ವರ್ಲ್ಡ್ ರೆಕಾರ್ಡ್ಸ್ ಇಂಡಿಯಾ ಸಿಕ್ಕಿದೆ.
ಆಟವೆಂದು ಬಂದರೆ ಆಟಗಾತಿ, ಓಟ ಎಂದು ಬಂದರೆ ಓಟಗಾತಿ, ಹಾಡು ಎಂದು ಬಂದರೆ ಹಾಡುಗಾತಿ, ನೃತ್ಯವೆಂದು ಬಂದರೆ ನೃತ್ಯಗಾತಿ, ಕಲೆ ಎಂದು ಬಂದರೆ ಚಿತ್ರಗಾತಿ, ಒಟ್ಟಿನಲ್ಲಿ ಹೇಳುವುದಾರೆ ಸಕಲಕಲಾವಲ್ಲಭೆ.