ಹೊಂಡ ಬಿದ್ದ ಕೆಂಬರ್ಜೆ- ಹುಣ್ಸೆಕಟ್ಟೆಗೆ ತೆರಳುವ ರಸ್ತೆ: ಸ್ಥಳೀಯರಿಂದಲೇ ತಾತ್ಕಾಲಿಕ ಮುಕ್ತಿ: ನಗರ ಪ್ರದೇಶದ ರಸ್ತೆಗೆ ಪ್ರಾಶಸ್ತ್ಯ ನೀಡದಿರುವುದು ಖೇದಕರ
ಹುಣ್ಸೆಕಟ್ಟೆ – ಕೆಂಬರ್ಜೆ ತೆರಳುವ ರಸ್ತೆಯಲ್ಲಿದ್ದ ಗುಂಡಿಯನ್ನು ಊರವರೇ ಸೇರಿ ತಾತ್ಕಾಲಿಕವಾಗಿ ಕಲ್ಲುಗಳನ್ನು ಹಾಕಿಮುಚ್ಚಿ ಮುಕ್ತಿಯನ್ನು ನೀಡಿದ್ದಾರೆ
ಗ್ರಾಮಾಂತರ ಪ್ರದೇಶದ ರಸ್ತೆಗೂ ನಗರ ಪ್ರದೇಶದ ರಸ್ತೆಗೂ ಇತ್ತೀಚಿನ ದಿನಗಳಲ್ಲಿ ಪ್ರಾಶಸ್ತ್ಯ ನೀಡದಿರುವುದು ಕಂಡುಬರುತ್ತಿದೆ. ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎನ್ನುವ ರೀತಿಯಾಗಿದೆ.
ನಗರ ವ್ಯಾಪ್ತಿಯ ಜನರ ಮಾತು tax ಹೇರಳವಾಗಿದ್ದರು ನಗರ ಪ್ರದೇಶಗಳಿಗೆ ಸಂಪರ್ಕ ರಸ್ತೆ ಇಲ್ಲದಿರುವುದು ಕೇದಕರ ವಿಷಯವಾಗಿದೆ.
15 ವರ್ಷಗಳ ಹಿಂದಿನ ಆ ರಸ್ತೆಗಳು ಈಗಲೂ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಸಣ್ಣ ಪುಟ್ಟ ತೆರಳುವ ರಸ್ತೆಗಳಲ್ಲಿ ಇತ್ತೀಚೆಗೆ ಘನ ವಾಹನಗಳು ತೆರಳುತ್ತಿದೆ. ಆದರೆ ಇದೀಗ ವಾಹನದ ದಟ್ಟನೆ ಹೇರಳವಾಗಿರುವಾಗ ರಸ್ತೆಯ ಒಂದು ಭಾಗದಲ್ಲಿ ಹರಸಾಹಸ ಮಾಡಿಕೊಂಡು ಮುಂದುವರಿಯುವ ಪರಿಸ್ಥಿತಿ.
ರಸ್ತೆಯಂಚಿನಲ್ಲಿ ಏರಪೇರುಗಳಿದ್ದು ದ್ವಿಚಕ್ರವಾಹನಗಲನ್ನು ಕೆಳಗಿಳಿಸುವುದು ಕಷ್ಟಕರವಾಗಿದೆ.
ರಸ್ತೆಯ ಬದಿ ಮಣ್ಣು ಹಾಕದೆ ರಸ್ತೆಯ ಕೆಳಗೆ ಇಳಿಸುವುದೆ ಒಂದು ಸಾಹಸವಾಗಿದೆ.
ತಾತ್ಕಾಲಿಕವಾಗಿ ಮುಚ್ಚುವ ಗುಂಡಿಗಳು ಎಷ್ಟು ದಿನ ಶಾಶ್ವತ? 4 ದಿನ ಕಳೆದು ನೊಡಿದರೆ ರಸ್ತೆಯ ಸ್ಥಿತಿ ಮೊದಲಿನಂತಾಗಿರುತ್ತದೆ. ಗುಂಡಿಬಿದ್ದ ರಸ್ತೆಯಲ್ಲಿ ಮಲೆ ನೀರು ನಿಂತರೆ ರಾತ್ರಿ ವೇಳೆ ದ್ವಿಚಕ್ರವಾಹನಗಳು ಗುಂಡಿಗೆ ಬಿದ್ದು ಅಪಘಾತಗಳು ಸಂಭವಿಸುತ್ತದೆ. ಅಲ್ಲದೆ ಶಾಲಾ ಮಕ್ಕಳು ಓಡಾಡುವ ರಸ್ತೆ ಇದಾಗಿದ್ದು ಅಪಘಾತಗಳು ಸಂಭವಿಸುವ ಮುನ್ನವೇ ಹುಣ್ಸೆಕಟ್ಟೆ ಸ್ಥಳೀಯರು ಎಚ್ಚೆತ್ತು ತಾತ್ಕಾಲಿಕವಾಗಿ ಗುಂಡಿಗೆ ಮುಕ್ತಿಯನ್ನು ನೀಡಿದ್ದಾರೆ.