• October 18, 2024

ಫ್ರೀ ಬಸ್ ಎಫೆಕ್ಟ್: ಬುರ್ಖಾ ಒಳಗಿರುವುದು ಅವಳಲ್ಲ, ಅವನು, ಜನ ಶಾಕ್!

 ಫ್ರೀ ಬಸ್ ಎಫೆಕ್ಟ್: ಬುರ್ಖಾ ಒಳಗಿರುವುದು ಅವಳಲ್ಲ, ಅವನು, ಜನ ಶಾಕ್!

 

ಧಾರವಾಡ, ಜುಲೈ 06: ಶಕ್ತಿ ಯೋಜನೆ ಅಡಿಯಲ್ಲಿ ಮಹಿಳೆಯರಿಗೆ ಉಚಿತ ಬಸ್‌ ಪ್ರಯಾಣ ಆರಂಭವಾದ ದಿನದಿಂದ ಸಾಮಾಜಿಕ ಜಾಲತಾಣದಲ್ಲಿ ಮೂರ್ನಾಲ್ಕು ಜನ ಯುವಕರು ಸೀರೆಯುಟ್ಟು ಬಸ್‌ಗಾಗಿ ಕಾಯುವ ದೃಶ್ಯ ವೈರಲ್‌ ಆಗಿತ್ತು. ಈ ವಿಡಿಯೋ ಮನೋರಂಜನೆಗಾಗಿ ಮಾಡಲಾಗಿತ್ತಾದರೂ, ಧಾರವಾಡದಲ್ಲಿ ಇಂತಹದ್ದೇ ಹಾಸ್ಯಾಸ್ಪದ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ.

ಥೇಟ್ ಮಹಿಳೆಯರಂತೆ ಬುರ್ಖಾ ವೇಷ ಹಾಕಿಕೊಂಡ ಪುರುಷನೋರ್ವ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದ ಘಟನೆ ಕುಂದಗೋಳ ತಾಲೂಕಿನ ಸಂಶಿ ಬಸ್ ನಿಲ್ದಾಣದಲ್ಲಿ ಇಂದು(ಜುಲೈ 06) ಬೆಳಗ್ಗೆ ನಡೆದಿದೆ.

ಇಂದು ಬೆಳಿಗ್ಗೆ ಸಂಶಿ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಕೂಳಿತಿದ್ದ ಬಸ್‌ ಪ್ರಯಾಣಿಕರು ಹಾಗೂ ಗ್ರಾಮಸ್ಥರು ವ್ಯಕ್ತಿ ಬಗ್ಗೆ ಸಂಶಯ ವ್ಯಕ್ತವಾಗಿ ಒತ್ತಾಯದಿಂದ ಬುರ್ಖಾ ತೆಗಸಿದಾಗ ಸತ್ಯಾಂಶ ತಿಳಿದು ಬಂದಿದೆ. ಸಾರ್ವಜನಿಕರು ವ್ಯಕ್ಯಿಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆ ಬುರ್ಖಾ ಧರಿಸಿದ್ದ ವ್ಯಕ್ತಿಯೇ ನಾನು ಭಿಕ್ಷಾಟನೆಗೆ ಬಂದಿದ್ದೇನೆ. ನನ್ನ ಹೆಸರು ವೀರಭದ್ರಯ್ಯ ನಿಂಗಯ್ಯ ಮಠಪತಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕು ಘೋಡಗೋರಿ ನಮ್ಮೂರು ಎಂದು ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.

ಥೇಟ್ ಮಹಿಳೆಯರಂತೆ ಬುರ್ಖಾ ಚಪ್ಪಲಿ ಧರಿಸಿದ್ದ ಈ ವೇಷಧಾರಿ ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಅಡಿಯಲ್ಲಿ ಬಸ್‌ನಲ್ಲಿ ಉಚಿತ ಪ್ರಯಾಣಿಸಲು ಬುರ್ಖಾ ಧರಿಸಿಕೊಂಡು ಬಂದಿರಬಹುದು ಎಂದು ಜನ ಮಾತನಾಡುತ್ತಿದ್ದು, ವ್ಯಕ್ತಿ ಬಳಿ ಮುಸ್ಲಿಂ ಮಹಿಳೆಯರ ಆಧಾರ್ ಕಾರ್ಡ್ ಝೆರಾಕ್ಸ್‌ ಇರುವುದು ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

Related post

Leave a Reply

Your email address will not be published. Required fields are marked *

error: Content is protected !!