• July 27, 2024

ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ 83 ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ’ ಸಂಪನ್ನ

 ಹಿಂದೂ ಜನಜಾಗೃತಿ ಸಮಿತಿಯಿಂದ ದೇಶಾದ್ಯಂತ 83 ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವ’ ಸಂಪನ್ನ


ದಕ್ಷಿಣ ಕನ್ನಡ: ಹೇಗೆ ರಾತ್ರಿ ಕಳೆದ ನಂತರ ಸೂರ್ಯೋದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೋ ಹಾಗೆಯೇ ಕಾಲಮಹಿಮೆಗನುಸಾರ ಆಗಲಿರುವ ಧರ್ಮಾಧಿಷ್ಠಿತ ಹಿಂದೂ ರಾಷ್ಟçದ ಸ್ಥಾಪನೆಯನ್ನೂ ಯಾರೂ ತಡೆಯಲು ಸಾಧ್ಯವಿಲ್ಲ.ಹಿಂದೂ ರಾಷ್ಟç ಬಂದೇ ಬರಲಿದೆ’ ಇದು ಕಲ್ಲಿನ ಮೇಲೆ ಕೊರೆದ ವಾಕ್ಯವಾಗಿದೆ. ಅನೇಕ ಸಂತರು ಸಹ ಇದರ ಬಗ್ಗೆ ಹೇಳಿದ್ದು ಕಾಲವೂ ಅದೇ ದಿಕ್ಕಿನಲ್ಲಿ ನಡೆಯುತ್ತಿದೆ. ಆದ್ದರಿಂದ ಈ ಕಾಲದಲ್ಲಿ ನಾವು ಒಂದು ವೇಳೆ ಹಿಂದೂ ರಾಷ್ಟçದ ಸ್ಥಾಪನೆಗಾಗಿ ಕಾರ್ಯವನ್ನು ಮಾಡಿದರೆ, ಕಾಲಕ್ಕನುಗುಣವಾಗಿ ಧರ್ಮಕಾರ್ಯವಾಗಿ ಆ ಮಾಧ್ಯಮದಿಂದ ನಮ್ಮ ಸಾಧನೆಯಾಗಲಿದೆ. ಆದ್ದರಿಂದ ಈ ವರ್ಷದ ಗುರುಪೂರ್ಣಿಮೆಯ ಶುಭ ಸಂದರ್ಭದಲ್ಲಿ ಹಿಂದೂರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡುವ ದೃಢ ನಿಶ್ಚಯ ಮಾಡಿ ಎಂದು ಸನಾತನ ಸಂಸ್ಥೆಯ ಸೌ. ಅಶ್ವಿನಿ ನಾಯಕ್ ಇವರು ಈ ಸಂದರ್ಭದಲ್ಲಿ ಕರೆ ನೀಡಿದರು.

ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಅವರು ಮಾತನಾಡಿದರು. ಜುಲೈ 3 ರಂದು ಶ್ರೀ ಕೃಷ್ಣಾನುಗ್ರಹ ಸಭಾಭವನ, ಜನಾರ್ದನ ಸ್ವಾಮಿ ದೇವಸ್ಥಾನ, ಉಜಿರೆಯಲ್ಲಿ ಭಾವಪೂರ್ಣ ವಾತಾವರಣದಲ್ಲಿ ಗುರುಪೂರ್ಣಿಮಾ ಮಹೋತ್ಸವವು ಜರುಗಿತು.

ದೇಶಾದ್ಯಂತ 83 ಕಡೆಗಳಲ್ಲಿ ಮತ್ತು ಕರ್ನಾಟಕದಲ್ಲಿ ಹುಬ್ಬಳ್ಳಿ, ವಿಜಯಪುರ, ಶಿವಮೊಗ್ಗ, ಮಂಗಳೂರು, ಉಡುಪಿ, ಬೆಂಗಳೂರು ಸೇರಿದಂತೆ 24 ಕಡೆಗಳಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ `ಗುರುಪೂರ್ಣಿಮಾ ಮಹೋತ್ಸವ’ ವನ್ನು ಭಾವಪೂರ್ಣ ವಾತಾವರಣದಲ್ಲಿ ಆಚರಿಸಲಾಯಿತು.

ಹಿಂದೂಗಳ ಸಾವಿರ ಪ್ರಶ್ನೆಗಳಿಗೆ ಒಂದೇ ಉತ್ತರ – ಹಿಂದೂಗಳಿಗೆ ಧರ್ಮಶಿಕ್ಷಣ ನೀಡುವುದು ! – ಶ್ರೀ. ಜಯಪ್ರಸಾದ್ ಕಡಮಾಜೆ, ಆಡಳಿತ ಮಂಡಳಿಯ ಸದಸ್ಯರು, ವಿವೇಕಾನಂದ ವಿದ್ಯಾವರ್ಧಕ ಸಂಘ, ಇಂದ್ರಪ್ರಸ್ಥ ವಿದ್ಯಾಲಯ ಉಪ್ಪಿನಂಗಡಿ
ಶ್ರೀ. ಜಯಪ್ರಸಾದ್ ಕಡಮಾಜೆಯವರು ತಮ್ಮ ವಿಚಾರಗಳನ್ನು ವ್ಯಕ್ತ ಪಡಿಸುತ್ತಾ ಅಸಾಧ್ಯವಾದಂತಹ ಹಾಗೂ ಅತ್ಯಂತ ಕಠಿಣವಾದಂತಹ ತಪಶ್ಚರ್ಯಗಳನ್ನು ಮಾಡಿ ನಮ್ಮ ಋಷಿಮುನಿಗಳು ಮೊದಲೇ ಎಲ್ಲವನ್ನೂ ಸಾಧಿಸಿದರು. ಆದರೆ ನಾವು ಇನ್ನೂ ಕೂಡ ಪರದಾಡುತ್ತಿದ್ದೇವೆ. ಇದಕ್ಕೆ ಮೂಲ ಕಾರಣ ಏನೆಂದರೆ ಹಿಂದೂಗಳಿಗೆ ಧರ್ಮಶಿಕ್ಷಣದ ಕೊರತೆಯಾಗಿದೆ. ಎಲ್ಲಿಯವರೆಗೆ ಧಾರ್ಮಿಕ ಕೇಂದ್ರಗಳನ್ನು ಧಾರ್ಮಿಕ ಶಿಕ್ಷಣದ ಕೆಂದ್ರಗಳಾಗಿ ಪರಿವರ್ತಿಸುವುದಿಲ್ಲವೋ ಅಲ್ಲಿಯ ವರೆಗೆ ನಮಗೆ ನಮ್ಮ ಧರ್ಮದ ಬಗ್ಗೆ ಹಲವಾರು ಪ್ರಶ್ನೆಗಳು ಮೂಡುತ್ತಲೇ ಇರುತ್ತವೆ. ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವು ಒಂದೇಯಾಗಿದೆ – ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡುವುದು ಎಂದು ಸಭೆಯನ್ನು ಉದ್ದೇಶಿಸುತ್ತಾ ಮಾತನಾಡಿದರು

ಮಹೋತ್ಸವದ ಪ್ರಾರಂಭದಲ್ಲಿ ಶ್ರೀ ವ್ಯಾಸಪೂಜೆ ಮತ್ತು ಪ.ಪೂ. ಭಕ್ತರಾಜ ಮಹಾರಾಜರ ಪ್ರತಿಮಾ ಪೂಜೆಯನ್ನು ಮಾಡಲಾಯಿತು. ಈ ಕಾರ್ಯಕ್ರಮದಲ್ಲಿ ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರರಾದ ಶ್ರೀ. ಶರತ್‌ಕೃಷ್ಣ ಪಡ್ವೇಟ್ನಾಯ , ವಿಶ್ವ ಹಿಂದೂ ಪರಿಷತ್ತಿನ ಶ್ರೀ. ತಿಮ್ಮಪ್ಪ ಗೌಡ ಬೆಳಾಲು ಮುಂತಾದ ಗಣ್ಯರು ಮತ್ತು ಜಿಜ್ಞಾಸುಗಳು ಉಪಸ್ಥಿತರಿದ್ದರು.

Related post

Leave a Reply

Your email address will not be published. Required fields are marked *

error: Content is protected !!