• November 22, 2024

ಶ್ರೀ ಧ.ಮಂ.ಆಂ.ಮಾ.ಶಾಲೆ ಧರ್ಮಸ್ಥಳದ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

 ಶ್ರೀ ಧ.ಮಂ.ಆಂ.ಮಾ.ಶಾಲೆ ಧರ್ಮಸ್ಥಳದ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

 


ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದ ವಿದ್ಯಾರ್ಥಿಗಳು ಗುರು ಪೂರ್ಣಿಮಾದ ಪ್ರಯುಕ್ತ ಶ್ರೇಷ್ಠ ಸಾಹಿತಿ ಶಿವರಾಮ ಶಿಶಿಲ ಇವರ ಮನೆಗೆ ಭೇಟಿಕೊಟ್ಟರು.ಅವರೊಂದಿಗೆ ಒಂದಷ್ಟು ಹೊತ್ತು ಹಾಡು ಹರಟೆಯೊಂದಿಗೆ ಅರ್ಥಪೂರ್ಣವಾದ ಗುರು ಪೂರ್ಣಿಮಾ ಆಚರಿಸಿದರು.

ಶಿವರಾಮ್ ಶಿಶಿಲಾ ಇವರು ನಾಡು ಕಂಡ ಶ್ರೇಷ್ಠ ಸಾಹಿತಿ. ಇವರು ವಿದ್ಯಾರ್ಥಿಗಳಿಗೆ ಹಾಡನ್ನು ಭಾವಪೂರ್ಣವಾಗಿ ಹಾಡುವುದು ಹೇಗೆ? ಕವಿತೆ ಬರೆಯುವ ರೀತಿ ಹೇಗೆ ಪ್ರಾಸಭದ್ಧವಾದ ಹಾಡು ಬರೆಯುವ ರೀತಿ ಕಥೆಗಳಿಗೆ ರೂಪ ಕೊಡುವ ರೀತಿ ಇತ್ಯಾದಿಗಳನ್ನು ತಮ್ಮ ಅನುಭವದ ಮುಖಾಂತರ ವಿವರಿಸಿದರು. ಜೊತೆಗೆ ಶಿಕ್ಷಕರಾಗಿ ತಮ್ಮ ಅನುಭವ, ಜೀವನದಲ್ಲಿ ಕಂಡುಕೊಂಡಂತಹ ಸತ್ಯಾ ಸತ್ಯತೆಗಳು , ತಮ್ಮ ಎಂಬತ್ತರಹರೆಯದಲ್ಲೂ ಮನಃ ಪಟಲದಲ್ಲಿ ತುಂಬಿಕೊಂಡ ನೆನಪಿನ ಬುತ್ತಿಯನ್ನು ವಿದ್ಯಾರ್ಥಿಗಳ ಎದುರು ತೆರೆದು ಹಂಚಿದರು. ಇಂತಹ ವಯಸ್ಸಿನಲ್ಲೂ ಅವರ ಅಗಾಧ ಜ್ಞಾನ, ಗಹನವಾದ ವಿಚಾರಗಳನ್ನು ಹಂಚಿಕೊಂಡಾಗ ವಿದ್ಯಾರ್ಥಿಗಳು ಮಂತ್ರಮುಗ್ಧರಾಗಿ ಆಲಿಸಿದರು.

ವಿದ್ಯಾರ್ಥಿಗಳು ತಾವು ಕುರಿತಂತಹ ಹಾಡು ಕಥೆ ಇತ್ಯಾದಿಗಳಿಂದ ಅವರ ಮನರಂಜಿಸಿದರು. ಹೂವು ಹಣ್ಣು ಹಂಪಲುಗಳನ್ನಿತ್ತು ಗುರುವಿಗೆ ನಮಸ್ಕರಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಶ್ರೀಮತಿ ಪರಿಮಳ ಎಂ.ವಿ, ವಕೀಲರಾದಂತಹ ಶ್ರೀಯುತ ಶಿವಕುಮಾರ್ ಎಸ್ಎಂ, ಶಾಲಾ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಹೆತ್ತವರು ಸಹ ಭಾಗವಹಿಸಿದ್ದರು.

Related post

Leave a Reply

Your email address will not be published. Required fields are marked *

error: Content is protected !!