ಉಜಿರೆ: ಗಣೇಶೋತ್ಸವ ಆಚರಣೆಯ ಪ್ರಯುಕ್ತ ಬೆಳ್ತಂಗಡಿ ತಾಲೂಕಿನ ಗಣೇಶ ಮಂಡಳಿಗಳ ಸಭೆ
ಉಜಿರೆ: ಮುಂಬರುವ ಗಣೇಶೋತ್ಸವವನ್ನು ಆಚರಿಸುವ ಕುರಿತು ಉಜಿರೆಯ ಶಾರದಾ ಮಂಟಪದಲ್ಲಿ ಆ.8 ರಂದು ಬೆಳ್ತಂಗಡಿ ತಾಲೂಕಿನ ಗಣೇಶ ಮಂಡಳಿಗಳ ಸಭೆ ಜರುಗಿತು.
ಈ ಸಂದರ್ಭದಲ್ಲಿ ಸನಾತನ ಸಂಸ್ಥೆಯ ಆನಂದ ಗೌಡ ಇವರು ಮಾತನಾಡಿ ಲೋಕಮಾನ್ಯ ತಿಲಕರು ಹಿಂದೂ ಸಂಘಟನೆ ಹಾಗೂ ಧರ್ಮ ಜಾಗೃತಿ ಉದ್ದೇಶದಿಂದ ಗಣೇಶೋತ್ಸವವನ್ನು ಆರಂಭ ಮಾಡಿದರು. ಸದ್ಯ ಸಾರ್ವಜನಿಕ ಗಣೇಶೋತ್ಸವವು ತಮ್ಮ ಮೂಲ ಉದ್ದೇಶವನ್ನು ಮರೆತಿದೆ. ಗಣೇಶೋತ್ಸವ ಸಂದರ್ಭದಲ್ಲಿ ಚಿತ್ರ ವಿಚಿತ್ರ ಮೂರ್ತಿ ಮಾಡುವುದರಿಂದ ಗಣಪತಿಯ ವಿಡಂಬನೆ ಯಾಗುತ್ತಿದೆ. ಅದಕ್ಕಾಗಿ ಶಾಸ್ತ್ರೀಯ ಗಣೇಶ ಮೂರ್ತಿ ಯ ಪೂಜೆ ಮಾಡಬೇಕು ಅಲ್ಲದೆ ಗಣೇಶೋತ್ಸವದಲ್ಲಿ ಕಾರ್ಯಕ್ರಮಗಳನ್ನು ನಮ್ಮ ರಾಷ್ಟ್ರ ಹಾಗೂ ಧರ್ಮದ ಹಿತದೃಷ್ಟಿಯಿಂದ ಆಯೋಜನೆ ಮಾಡುವುದು ಸೂಕ್ತವಾಗಿದೆ. ಮೆರವಣಿಗೆಯಲ್ಲಿ ಡಿಜೆ ಹಾಕುತ್ತಾ ಅಶ್ಲೀಲ ಹಾಗೂ ಅಸಭ್ಯವಾಗಿ ವರ್ತಿಸುವ ಬದಲು ಆದರ್ಶವಾಗಿ ಭಜನೆ, ನಾಮಜಪ ಮಾಡುತ್ತಾ ಸಾಗುವುದು ಸೂಕ್ತವಾಗಿದೆ ಎಂದು ಹೇಳಿದರು.
ನ್ಯಾಯವಾದಿ ಉದಯ್ ಕುಮಾರ್ ಬಂದಾರು ಇವರು ಮಾತನಾಡುತ್ತಾ ಗಣೇಶೋತ್ಸವ ಸಂದರ್ಭದಲ್ಲಿ ಯಾವ ರೀತಿಯಲ್ಲಿ ನಾವು ಕಾನೂನನ್ನು ಪಾಲಿಸಬೇಕು ಎಂಬುವುದರ ಬಗ್ಗೆ ಮಾಹಿತಿ ನೀಡಿದರು. ಮಣ್ಣಿನ ಮೂರ್ತಿಯನ್ನು ಮಾಡಿ ವಿಸರ್ಜನೆ ಮಾಡಿದರೆ ಅದು ನೀರಿನಲ್ಲಿ ಕರಗುತ್ತದೆ ಹಾಗೂ ಇದರಿಂದ ಯಾವುದೇ ರೀತಿಯಲ್ಲಿ ಪ್ರಕೃತಿಗೆ ಹಾನಿಯಾಗುವುದಿಲ್ಲ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬೆಳ್ತಂಗಡಿ ತಾಲೂಕು ವ್ಯಾಪ್ತಿಯ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳು ಹಾಗೂ ಧರ್ಮ ಪ್ರೇಮಿಗಳಾದ ವಸಂತ ಉಜಿರೆ, ಶಾಂತ ಉಜಿರೆ, ಮತ್ತು ಭರತರಾಜ್ ಮುಂತಾದವರು ಪಾಲ್ಗೊಂಡಿದ್ದರು.
ಕಾರ್ಯಕ್ರಮ ದಲ್ಲಿ ಶಶಿಧರ ಇವರು ನಿರೂಪಿಸಿ, ಭಗವಾನ್ ಶ್ರೀಕೃಷ್ಣನ ಶ್ಲೋಕದೊಂದಿಗೆ ಸಭೆ ಸಮಾಪನೆ ಗೊಂಡಿತು.