ಬೆಳ್ತಂಗಡಿಯಲ್ಲಿ ಚುನಾವಣಾ ಪ್ರಚಾರದಲ್ಲಿ ವಿಭಿನ್ನವಾದ ಬದಲಾವಣೆ ತರಲಿರುವ ಸರ್ವೋದಯ ಕರ್ನಾಟಕ ಪಕ್ಷ: ಸುದ್ದಿಗೋಷ್ಠಿಯಲ್ಲಿ ಅಭ್ಯರ್ಥಿ ಆದಿತ್ಯ ಕೊಳ್ಳಾಜೆ
ಬೆಳ್ತಂಗಡಿ: ಸರ್ವೋದಯ ಕರ್ನಾಟಕ ಪಕ್ಷವು ತಮ್ಮ ಚುನಾವಣಾ ಪ್ರಚಾರದಲ್ಲಿ ವಿಭಿನ್ನವಾದ ಕಲಸಮಾಡುವ ಮೂಲಕ ಬೆಳ್ತಂಗಡಿ ಯಲ್ಲಿ ಕೆಲವು ಬದಲಾವಣೆಗಳನ್ನು ತರಲಿದೆ. ಅಭ್ಯರ್ಥಿ ಆದಿತ್ಯ ಕೊಲ್ಲಾಜೆ ಪ್ರತೀ ಗ್ರಾಮಕ್ಕೆ ಭೇಟಿ ನೀಡಿ ಕಷ್ಟಗಳಿಗೆ ಸ್ಪಂದಿಸಿ ಮತ್ತು ಸಾಮಾನ್ಯ ಜನರ ಸಮಸ್ಯೆಗೆ ಧ್ವನಿ ಎತುವ ಮೂಲಕ ತಳಮಟ್ಟದಲ್ಲಿ ಪಕ್ಷ ಭಿನ್ನತೆಯನ್ನು ತರುತ್ತಿದೆ ಎಂದು ರೈತ ಸಂಘದ ಜಿಲ್ಲಾಧ್ಯಕ್ಷ ಓಸ್ವಾಲ್ಡ್ ಫೆರ್ನಾಂಡೀಸ್ ಹೇಳಿದರು.
ಅವರು ಬೆಳ್ತಂಗಡಿ ಗುರುನಾರಾಯಣ ಸಭಾಭವನದಲ್ಲಿ ಏ.21 ರಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ತಮ್ಮ ತಂಡ 25 ಗ್ರಾಮಗಳಿಗೆ ಭೇಟಿ ನೀಡಿದ್ದೇವೆ. ಬೆಳ್ತಂಗಡಿಯ ಎಲ್ಲಾ ಗ್ರಾಮಗಳನ್ನು ತಲುಪುವ ದೃಷ್ಟಿಯೊಂದಿಗೆ ಮುಂದಿನ ವಾರದಿಂದ ಪ್ರಚಾರ ಪ್ರಾರಂಭಿಸಲಾಗುವುದು ಎಂದು ಸರ್ವೋದಯ ಕರ್ನಾಟಕ ಪಕ್ಷದ ಅಭ್ಯರ್ಥಿ ಆದಿತ್ಯ ನಾರಾಯಣ ಕೊಳ್ಳಾಜೆ ತಿಳಿಸಿದರು.
ಇದರೊಂದಿಗೆ ವಿಭಿನ್ನ ಯೋಜನೆಗಳನ್ನು ನೀಡಿದ್ದು, ಬೆಳ್ತಂಗಡಿ ಯ ಎಲ್ಲಾ ಗ್ರಾಮಗಳ ಗ್ರಾಮಸ್ಥರಿಂದ ಸಹಾಯ ಕೇಳಿದ್ದು,ಮುಂದಿನ ವಾರದಿಂದ ನಿತ್ಯ ಅವರ ಗ್ರಾಮಗಳಲ್ಲಿ ಪ್ರಚಾರ ನಡೆಯಲಿದ್ದು, ರೈತ ಸಂಘದ ಮುಖಂಡರು ಹಾಗೂ ಕಾರ್ಯಕರ್ತರು ಮನೆಮನೆಯಲ್ಲಿ ಪ್ರಚಾರ ನೀಡಿ ಸಂಜೆ ಸಭೆ ಕರೆಯಲಾಗುತ್ತದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಮಣ್ಣ ವಿಟ್ಲ, ಅವಿನಾಶ್ ಕುಮಾರ್, ಉಮೇಶ್ ಪೂಜಾರಿ, ಚಿದಾನಂದ, ಲೋಕಯ್ಯ, ರೈತ ಸಂಘದ ಮಹಿಳಾ ಸಂಚಾಲಕರಾದ ಶಶಿಕಲಾ, ಹರಿನಾಕ್ಷಿ ಮೊದಲಾದವರು ಉಪಸ್ಥಿತರಿದ್ದರು