ಆರಿಕೋಡಿ: ಆರು ವರ್ಷಗಳಿಂದ ಸಂತಾನ ಭಾಗ್ಯ ಕಳೆದುಕೊಂಡ ದಂಪತಿಗಳ ಬಾಳಲ್ಲಿ ಮುದ್ದಾದ ಗಂಡು ಮಗುವಿನ ಜನನ: ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಮಹಿಮೆ
ಆರಿಕೋಡಿ: ಭಕ್ತರನ್ನು ಪೊರೆಯುವ, ಕಷ್ಟ ಎಂದು ನಂಬಿ ಬರುವ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ದೇವಿಯ ಮಹಿಮೆ ಅತ್ಯದ್ಬುತ.
ಅಭಯದ ನುಡಿ, ಗಂಧ ಪ್ರಸಾದವೇ ವರದಾನವಾಗುವ ಈ ದೇವಾಲಯದಲ್ಲಿ ಮಕ್ಕಳ ಭಾಗ್ಯವನ್ನು ಒದಗಿಸಿಕೊಡುವಂತೆ ದೇವಿಯಲ್ಲಿ ಪ್ರಾರ್ಥಿಸಿದಾಗ ಅಭಯದ ನುಡಿಯ ಮೂಲಕ ಸಮಸ್ಯೆಗೆ ಪರಿಹಾರವನ್ನು ಕಂಡುಕೊಂಡಿದ್ದಾರೆ ಈ ದಂಪತಿಗಳು.
ಬಂಟ್ವಾಳ ತಾಲೂಕಿನ ಕೇಶಿವಾಲಯ ಪರಿಸರದ ಉಮೇಶ್ ಮತ್ತು ಪ್ರಿಯಾಂಕ ದಂಪತಿಗಳು ಆರು ವರ್ಷಗಳಿಂದ ಮಕ್ಕಳ ಭಾಗ್ಯವನ್ನು ಕಳೆದುಕೊಂಡು ಬೇಸತ್ತ ಈ ದಂಪತಿಗಳು ಶ್ರೀ ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಗಂಡು ಮಗುವಿಗೆ ಜನ್ಮವನ್ನಿತ್ತಿದ್ದಾರೆ.
ಹಲವಾರು ಕಡೆಗಳಲ್ಲಿ ಹರಕೆಯನ್ನು ಸಲ್ಲಿಸಿದರು ಬಗೆಹರಿಯದ ಸಮಸ್ಯೆ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಬಗೆಯ ಹರಿದಿದೆ. ಕತ್ತಲೆಯನ್ನು ದೂರಮಾಡಿದ. ಶ್ರೀ ಚಾಮುಂಡೇಶ್ವರಿ ತಾಯಿಗೆ ವಿಶೇಷ ಪೂಜೆಯನ್ನೂ ಸಲ್ಲಿಸಿದ್ದಾರೆ.