ಧರ್ಮಸ್ಥಳ: ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ಭಕ್ತಾಧಿಗಳಿಗೆ ಸೂಚನೆ: ನದಿಯಲ್ಲಿ ಸ್ನಾನ ಮಾಡುವ ವೇಳೆ ಶ್ಯಾಂಪೂ, ಸೋಪು ಬಳಸುವಂತಿಲ್ಲ
ಧರ್ಮಸ್ಥಳ: ಲಕ್ಷಾಂತರ ಭಕ್ತರು ಆಗಮಿಸುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಇದೀಗ ಭಕ್ತರಿಗೆ ವಿಶೇಷ ಸೂಚನೆಯನ್ನು ಹೊರಡಿಸಲಾಗಿದೆ.
ಶ್ರೀ ಕ್ಷೇತ್ರ ಧರ್ಮಸ್ಥಳ ಕ್ಕೆ ಆಗಮಿಸುವ ಭಕ್ತಾಧಿಗಳು ನೇತ್ರಾವತಿ ನದಿಯಲ್ಲಿ ಮಿಂದೆದ್ದು ಶ್ರೀ ಮಂಜುನಾಥನ ದರ್ಶನ ಪಡೆಯುತ್ತಾರೆ. ಆದರೆ ಇದೀಗ ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ಭಕ್ತಾಧಿಗಳಿಗೆ ವಿಶೇಷ ಸೂಚನೆಯನ್ನು ಹೊರಡಿಸಲಾಗಿದೆ. ಭಕ್ತಾಧಿಗಳು ನೇತ್ರಾವತಿ ನದಿಯಲ್ಲಿ ಸ್ನಾನ ಮಾಡುವ ವೇಳೆ ಶ್ಯಾಂಪೂ, ಅಥವಾ ಸೋಪು ಇನ್ನಿತರ ವಸ್ತುಗಳನ್ನು ಬಳಸದಂತೆ ನಿಷೇಧ ಹೇರಲಾಗಿದೆ. ಅಲ್ಲದೆ ಧರ್ಮಸ್ಥಳ ಗ್ರಾ.ಪಂ, ನೇತ್ರಾವತಿ ಸ್ನಾನಘಟ್ಟ, ನೇತ್ರಾನಗರ ಸುತ್ತಮುತ್ತ ಅಂಗಡಿಗಳಲ್ಲಿ ಶ್ಯಾಂಪೂ ಅಥವಾ ಸೋಪು ಮಾರದಂತೆ ಅಧಿಕೃತ ಸೂಚನೆಯನ್ನು ನೀಡಲಾಗಿದೆ.