• June 15, 2024

ಉಜಿರೆ ಮರಾಟಿ ಸೇವಾ ಭವನದಲ್ಲಿ ಮಹಮ್ಮಾಯಿ ದೇವಿಯ ಸಾರ್ವಜನಿಕ ಗೋಂದಲ ಪೂಜೆ, ಧಾರ್ಮಿಕ ಕಾರ್ಯಕ್ರಮ

 ಉಜಿರೆ ಮರಾಟಿ ಸೇವಾ ಭವನದಲ್ಲಿ ಮಹಮ್ಮಾಯಿ ದೇವಿಯ ಸಾರ್ವಜನಿಕ ಗೋಂದಲ ಪೂಜೆ, ಧಾರ್ಮಿಕ ಕಾರ್ಯಕ್ರಮ

ಉಜಿರೆ: ಬೆಳ್ತಂಗಡಿ ತಾಲೂಕು ಮರಾಟಿ ಸಮಾಜ ಸೇವಾ ಸಂಘ(ರಿ) ಬೆಳ್ತಂಗಡಿ ಶ್ರೀ ಮಹಮ್ಮಾಯಿ ದೇವಿಯ ಸಾರ್ವಜನಿಕ ಗೋಂದಲ ಪೂಜೆಯು ಮಾ.26 ರಂದು ಮರಾಟಿ ಸೇವಾ ಭವನ ಉಜಿರೆ ಅನುಗ್ರಹ ಶಾಲಾ ಬಳಿ ಜರುಗಿತು.

ಈ ವೇಳೆ ನಡೆದ ಸಭಾ ಕಾರ್ಯಕ್ರಮದಲ್ಲಿ ಬ್ಯಾಂಕ್ ಆಫ್ ಬರೋಡ ಮ್ಯಾನೇಜರ್ ಶೀವಪ್ಪ ನಾಯ್ಕ ಸುರ್ಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.

ಮುಖ್ಯಾತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾಲಯದ ನಿಕಟಪೂರ್ವ ಕುಲಸಚಿವರು ಡಾ ಕೆ ಸುಂದರ್ ನಾಯ್ಕ್ , ಕಾಸರಗೋಡು ಹಿರಿಯ ಮಕ್ಕಳ ತಜ್ಞರು ಡಾ ಬಿ ನಾರಾಯಣ ನಾಯ್ಕ , ಅಪ್ಪಣ್ಣ ನಾಯ್ಕ ಬಾಳೆಗುಳಿ, ಬೆಳ್ತಂಗಡಿ ತಾಲೂಕು ಮರಾಟಿ ಸೇವಾ ಸಂಘದ ಅಧ್ಯಕ್ಷರು ಸಂತೋಷ್ ನಾಯ್ಕ ಉಪಸ್ಥಿತರಿದ್ದರು.

ಎಸ್ ಕೆ ಡಿ ಆರ್ ಡಿ ಪಿ ಧರ್ಮಸ್ಥಳದ ತಿಮ್ಮಯ್ಯ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿ , ಸ್ವಾಗತಿಸಿದರು. ಸದಾಶಿವ ನಾಯ್ಕ ಧನ್ಯವಾದ ಗೈದರು.

ಕಾರ್ಯಕ್ರಮದಲ್ಲಿ ಅಪ್ಪೆ ಮಹಮ್ಮಾಯಿ ತುಳು ಭಕ್ತಿಗೀತೆ ಆಲ್ಬಂ ಸಾಂಗ್ ಗಣ್ಯರ ಉಪಸ್ಥಿತಿಯಲ್ಲಿ ಬಿಡುಗಡೆಗೊಂಡಿತು.

ನಂತರ ಮಹಮ್ಮಾಯಿ ದೇವಿಗೆ ಪೂಜೆ ಪುನಸ್ಕಾರಗಳು ನಡೆದು, ಗುಮ್ಮಟೆ ನೃತ್ಯ ಜರುಗಿತು.

Related post

Leave a Reply

Your email address will not be published. Required fields are marked *

error: Content is protected !!