ವಿಟ್ಲ: ಕಲಾತಪಸ್ವಿ ಸಾಂಸ್ಕೃತಿಕ ತಂಡದ ನೂತನ ಹೆಜ್ಜೆ: ಏಪ್ರಿಲ್ 2 ರಂದು ಉದ್ಘಾಟನೆಗೊಳ್ಳಲಿದೆ ಕಲಾತಪಸ್ವಿ ಕೋಚಿಂಗ್ ಸೆಂಟರ್
ವಿಟ್ಲ: ಕಳೆದ ಕೆಲವು ತಿಂಗಳ ಹಿಂದಷ್ಟೇ ಆರಂಭವಾದ ಕಲಾತಪಸ್ವಿ ಸಾಂಸ್ಕೃತಿಕ ತಂಡ ಅನೇಕ ಕಲಾಭಿಮಾನಿಗಳ ಬೆಂಬಲದಿಂದ ಒಂದೊಂದೇ ಯಶಸ್ವಿ ಹೆಜ್ಜೆಗಳನ್ನು ಇಡುತ್ತಾ ಮುಂದೆ ಸಾಗುತ್ತಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಸೇವಾನಿಧಿ ವಿತರಣೆಯ ಮೂಲಕ ಅನೇಕ ಮನಸುಗಳನ್ನು ಗೆದ್ದಿರುವ ಕಲಾ ತಪಸ್ವಿ ಸಂಸ್ಕೃತಿಕ ತಂಡವು ಇನ್ನೊಂದು ಹೊಸ ಹೆಜ್ಜೆಯನ್ನು ಇಡಲು ಮುಂದಾಗಿದೆ. ಅದೇ “ಕಲಾತಪಸ್ವಿ ಕೋಚಿಂಗ್ ಸೆಂಟರ್ “.
ಇಲ್ಲಿ 1 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಹಾಗೂ ಪಿ.ಯು. ಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಕಲಿಕೆಗೆ ಬೇಕಾಗುವ ವಿಷಯಗಳನ್ನು ಕಳುಹಿಸಿಕೊಡಲಾಗುವುದು. ಕಲಾತಪಸ್ವಿ ಕೋಚಿಂಗ್ ಸೆಂಟರ್ ಎಪ್ರಿಲ್ 2 ರಂದು ಕಾರ್ಯಡಿ-ಕಂಬಳಬೆಟ್ಟು ಇಲ್ಲಿನ ಜನಪ್ರಸಿದ್ಧ ಕಟ್ಟಡದಲ್ಲಿ ಉದ್ಘಾಟನೆಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :ಜೈದೀಪ್ ಅಮೈ 7090615880