ನಾವೂರಿನ ಸೌಂದರ್ಯಕ್ಕೆ ಮುಕುಟಮಣಿಯಾದ “ಪ್ರಜಾ ಸೌಧ” ನೂತನ ಗ್ರಾ.ಪಂ ಕಟ್ಟಡ ಲೋಕಾರ್ಪಣೆ
ನಾವೂರು: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಂಗಳೂರು, ತಾಲೂಕು ಪಂಚಾಯತ್ ಬೆಳ್ತಂಗಡಿ, ಗ್ರಾಮ ಪಂಚಾಯತ್ ನಾವೂರು ಇದರ ನೂತನ ಕಟ್ಟಡ ಪ್ರಜಾ ಸೌಧ ಹಾಗೂ ವಿವಿಧ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಕಾರ್ಯಕ್ರಮವು ಮಾರ್ಚ್ 25 ರಂದು ಜರುಗಿತು.
ನಾವೂರಿನ ಸೌಂದರ್ಯಕ್ಕೆ ಮುಕುಟಮಣಿಯಾಗಿ ಪ್ರಜಾ ಸೌಧವೆಂಬ ನೂತನ ಗ್ರಾಮ ಪಂಚಾಯತಿನ ಕಟ್ಟಡವನ್ನು ಬೆಳ್ತಂಗಡಿ ಶಾಸರು ಹರೀಶ್ ಪೂಂಜ ಲೋಕಾರ್ಪಣೆಗೊಳಿಸಿದರು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಕೆ. ಪ್ರತಾಪಸಿಂಹ ನಾಯಕ್ ಕಿಯೋನಿಕ್ಸ್ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್, ಅಕ್ರಮ ಸಕ್ರಮ ಸಮಿತಿ ಸದಸ್ಯ ಜಯಂತ ಕೋಟ್ಯಾನ್, ನಾವೂರು ಆರೋಗ್ಯ ಕ್ಲಿನಿಕ್‌ನ ಡಾ. ಪ್ರದೀಪ್ ಭಾಗವಹಿಸಿದ್ದರು.
ಅಧ್ಯಕ್ಷತೆಯನ್ನು ನಾವೂರು ಗ್ರಾ.ಪಂ ಅಧ್ಯಕ್ಷ ಗಣೇಶ್ ಗೌಡ ವಹಿಸಿದ್ದರು.
ತಾ.ಪಂ ಕಾರ್ಯನಿರ್ವಹಣಾಧಿಕಾರಿ ಕುಸುಮಾಧರ್, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಪಂಚಾಯತ್‌ರಾಜ್ ಇಂಜಿನಿಯರಿಂಗ್ ಉಪವಿಭಾಗದ ಸ.ಕಾ. ಅಭಿಯಂತರ ನಿತಿನ್ ಕುಮಾರ್, ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಾವೂರಿನ ಅಧ್ಯಕ್ಷ ಹರೀಶ್ ಸಾಲ್ಯಾನ್ ಮೋರ್ತಾಜೆ, ನಾವೂರು ಮಸೀದಿಯ ಖತೀಬರಾದ ಹಮೀದ್ ಸಖಾಫಿ, ಇಂದಬೆಟ್ಟು ಚರ್ಚ್‌ನ ಧರ್ಮಗುರು ಫಾ. ಸ್ಟೀವನ್ ಡಿ ಸೋಜ, ನಾವೂರು ಬಾಲಯೇಸು ದೇವಾಲಯದ ಧರ್ಮಗುರು ಫಾ. ಜೋಜಿ ವಡಕೇವಿಟರ್, ನಾವೂರು ಗ್ರಾ.ಪಂ ಉಪಾಧ್ಯಕ್ಷ ಶ್ರೀಮತಿ ಸುನಂದ, ಜಿ.ಪಂ ಮಾಜಿ ಸದಸ್ಯೆ ಶ್ರೀಮತಿ ಸೌಮ್ಯಲತಾ ಜಯಂತ ಗೌಡ, ತಾ.ಪಂ ಮಾಜಿ ಉಪಾಧ್ಯಕ್ಷೆ ಶ್ರೀಮತಿ ವೇದಾವತಿ, ನಾವೂರು ಗ್ರಾ.ಪಂ ಮಾಜಿ ಅಧ್ಯಕ್ಷ ಶ್ರೀಮತಿ ಲಲಿತಾ ಬಂಗಾಡಿ ಅರಮನೆಯ ಯಶೋಧರ ಬಲ್ಲಾಳ್ ಭಾಗವಹಿಸಿದ್ದರು. ಸದಸ್ಯರಾದ ಬಾಲಕೃಷ್ಣ, ಎಂ.ಕೆ ಹಸೈನಾರ್, ಶ್ರೀಮತಿ ಶಾಂತಿ, ಶ್ರೀಮತಿ ಪ್ರಿಯಾ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಕೆ. ವೆಂಕಟಕೃಷ್ಣ ರಾಜ, ಕಾರ್ಯದರ್ಶಿ ನಿರ್ಮಲ್ ಕುಮಾರ್, ಸಿಬ್ಬಂದಿಗಳಾದ ರಶ್ಮಿ, ಪ್ರಪುಲ್ಲ, ವನಜ, ನಾರಾಯಣ, ಶರೀಫ್, ಸೇಸಪ್ಪ ನಾಯ್ಕ ಉಪಸ್ಥಿತರಿದ್ದರು.
ನಾವೂರು, ಹೊಡಿಕ್ಕಾರು, ಅಲೆಕ್ಕಿ ಅಂಗನವಾಡಿ ಮಕ್ಕಳು ಹಾಗೂ ಕಿರಿಯ ಪ್ರಾಥಮಿಕ ಶಾಲೆ ಸುಳ್ಯೋಡಿ, ಪ್ರಾಥಮಿಕ ಮತ್ತು ಪ್ರೌಢಶಾಲೆ ನಾವೂರು ಮಕ್ಕಳಿಂದ ಮತ್ತು ತೃಪ್ತಿ ಸಂಜೀವಿನಿ ಒಕ್ಕೂಟದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.