ಬೆಳ್ತಂಗಡಿ: ಬಾವಿಗೆ ಬಿದ್ದ ಕೊಡ: ಹಗ್ಗದ ಸಹಾಯದಿಂದ ಮೇಲಕ್ಕೆತ್ತುವ ವೇಳೆ ಕೈಜಾರಿ ಬಾವಿಗೆ ಬಿದ್ದು ವ್ಯಕ್ತಿ ಸಾವು
ಬೆಳ್ತಂಗಡಿ: ಪ್ರವೀಣ್ ಎಂಬ ವ್ಯಕ್ತಿಯೋರ್ವರು ಹಗ್ಗದ ಸಹಾಯದಿಂದ ಬಾವಿಗೆ ಬಿದ್ದ ಕೊಡವನ್ನು ಮೇಲೆತ್ತಿ ಮೇಲಕ್ಕೆ ಬರುತ್ತಿದ್ದ ವೇಳೆ ಕೈ ಜಾರಿ ಬಾವಿಗೆ ಬಿದ್ದು ಮೃತಪಟ್ಟಿರುವ ಘಟನೆ ಬೆಳ್ತಂಗಡಿ ಯಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕಿನ ವಸಂತಿ ಎಂಬವರ ಬಾವಿಗೆ ಬಿದ್ದಿದ್ದ ಕೊಡವನ್ನು ಮೇಲಕ್ಕೆತ್ತಲು ಹಗ್ಗದ ಸಹಾಯದಿಂದ ಮೇಲಕ್ಕೆತ್ತುವ ವೇಳೆ ಕೈ ಜಾರಿ ಪುನಃ ಬಾವಿಗೆ ಬಿದ್ದಿದ್ದಾರೆ. ತಕ್ಷಣ ಅಗ್ನಿಶಾಮಕ ದಳದವರಿಗೆ ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿ ಮೇಲಕ್ಕೆತ್ತಿದ್ದಾರೆ, ಆದರೆ ಅಷ್ಟರಲ್ಲೇ ಪ್ರವೀಣ್ ಉಸಿರು ಚೆಲ್ಲಿದ್ದಾರೆ. ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.