ಚಾರ್ಮಾಡಿಯಲ್ಲಿಎಸ್ ಡಿಪಿಐ ಬೂತ್ ಜೋಡೋ ಕಾರ್ಯಕ್ರಮ
ಚಾರ್ಮಾಡಿ : ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (SDPI) ಬೆಳ್ತಂಗಡಿ ವಿಧಾನಸಭಾ ವ್ಯಾಪ್ತಿಯ ಚಾರ್ಮಾಡಿಯಲ್ಲಿ ಬೂತ್ ಜೋಡೋ ಅಭಿಯಾನದ ಅಂಗವಾಗಿ ಕಾರ್ಯಕರ್ತರ ಸಭೆ ಫೆ.18 ರಂದು ನಡೆಯಿತು.
ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷ ನವಾಝ್ ಕಟ್ಟೆ ಮಾತನಾಡಿ ಎಸ್‌ಡಿಪಿಐ ಎಂಬುದು ನೈಜ ಜಾತ್ಯತೀತ ಪಕ್ಷವಾಗಿದ್ದು ಎಲ್ಲರನ್ನೂ ಸಮಾನವಾಗಿ ಕಾಣುವ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಕಟಿಬದ್ಧವಾದ ಪಕ್ಷವಾಗಿದೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲರನ್ನು ಒಗ್ಗೂಡಿಸಿಕೊಂಡು ಎಸ್‌ಡಿಪಿಐ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿಯವರನ್ನು ಗೆಲ್ಲಿಸಲು ಕಾರ್ಯಕರ್ತರು ಶ್ರಮ ವಹಿಸಬೇಕೆಂದು ಕರೆ ನೀಡಿದರು.
ಕ್ಷೇತ್ರ ಸಮಿತಿ ಜೊತೆ ಕಾರ್ಯದರ್ಶಿ ಫಝಲ್ ರಹಮಾನ್ ಬೂತ್ ಜೋಡೊ ಕಾರ್ಯಕ್ರಮ, ಪಕ್ಷ ಸಂಘಟಣೆಯ ಕುರಿತು ಮಾಹಿತಿ ನೀಡಿದರು. ಗ್ರಾಮ ಸಮಿತಿ ಮತ್ತು ನೂತನ ಬೂತ್ ಸಮಿತಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
SDPI ಬೆಳ್ತಂಗಡಿ ವಿಧಾನ ಸಭಾ ಚುನಾವಣೆ ಅಭ್ಯರ್ಥಿ ಅಕ್ಬರ್ ಬೆಳ್ತಂಗಡಿ ಇವರಿಗೆ ಚಾರ್ಮಾಡಿ ಗ್ರಾಮ ಸಮಿತಿ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಚಾರ್ಮಾಡಿ ಗ್ರಾಮ ಸಮಿತಿ ಅಧ್ಯಕ್ಷ ಸಿನಾನ್ ಚಾರ್ಮಾಡಿ, ಎಸ್‌ಡಿಪಿಐ ಬೆಂಬಲಿತ ಚಾರ್ಮಾಡಿ ಪಂಚಾಯತ್ ಸದಸ್ಯ ಸಿದ್ಧಿಕ್ ಯು ಪಿ, ಕಬೀರ್ ಚಾರ್ಮಾಡಿ, ಶಂಸು ಡಿ ಕೆ ಮತ್ತು ಪಕ್ಷದ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು.