ಕಾಮಾಲೆ ರೋಗ ಉಲ್ಬಣಿಸಿ ನಾವೂರಿನ ಯುವಕ ಸಾವು
ಬೆಳ್ತಂಗಡಿ; ನಾವೂರು ಗ್ರಾಮದ ನಿರ್ದಿಂ ನಿವಾಸಿ ಅಬ್ದುಲ್ ಮುತ್ತಲಿಬ್ ಮತ್ತು ಝುಬೈದಾ ದಂಪತಿ ಪುತ್ರ
ಮುಹಮ್ಮದ್ ಹನೀಫ್ (22) ಎಂಬವರು ಫೆ.15 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಬೆಳ್ತಂಗಡಿಯ ಚಿನ್ನದ ಮಳಿಗೆಯಲ್ಲಿ ಮಾರ್ಕೆಟಿಂಗ್ ಫೀಲ್ಡ್ ವಿಭಾಗದಲ್ಲಿ ಕೆಲಸದಲ್ಲಿದ್ದ ಅವರಿಗೆ ಕೆಲದಿನಗಳಿಂದ ಅನಾರೋಗ್ಯ ಕಾಣಿಸಿಕೊಂಡಿದ್ದು, ಚಿಕಿತ್ಸೆ ಪಡೆದುಕೊಂಡಿದ್ದರು.
ಹೀಗಿರುವಂತೆಯೇ ಅವರಿಗೆ ರೋಗ ಉಲ್ಬಣಿಸಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಾದವರು ಅಲ್ಲಿ ಕೊನೆಯುಸಿರೆಳೆದಿದ್ದಾರೆ.
ಮುಹಮ್ಮದ್ ಹನೀಫ್ ಅವರು
ಎಸ್ಸೆಸ್ಸೆಫ್ ಸಂಘಟನೆಯ ಸಕ್ರೀಯ ಕಾರ್ಯಕರ್ತರಾಗಿದ್ದರು.
ಮೃತರು ತಂದೆ, ತಾಯಿ ಅಲ್ಲದೆ
ಸಹೋದರಿ ತಮ್ಶೀರಾ ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.