ಆರಿಕೋಡಿ: ಮಕ್ಕಳ ಭಾಗ್ಯವೇ ಇಲ್ಲದ ದಂಪತಿಗಳಿಗೆ ಮುದ್ದಾದ ಮಗುವನ್ನು ಕರುಣಿಸಿದ ಆರಿಕೋಡಿ ಶ್ರೀ ಚಾಮುಮಡೇಶ್ವರಿ ದೇವಿ
ಆರಿಕೋಡಿ: ಕಾರ್ಣಿಕವನ್ನು ಮೆರೆಯುವ ಆರಿಕೋಡಿ ಶ್ರೀ ಚಾಮುಂಡೇಶ್ವರಿ ತಾಯಿಯ ಪವಾಡ ಮತ್ತೆ ಮತ್ತೆ ಸಾಬೀತಾಗುತ್ತಿದೆ. ನಂಬಿ ಬಂದ ಭಕ್ತರನ್ನು ಪೊರೆಯುವ ಶ್ರೀ ಚಾಮುಂಡೇಶ್ವರಿಯ ಕಾರ್ಣಿಕ ಭಕ್ತರನ್ನು ಸನ್ನಿದಾನಕ್ಕೆ ಬರುವಂತೆ ಮಾಡುತ್ತಿದೆ. ಸಾವಿರಾರು ಭಕ್ತರನ್ನು ಪೊರೆಯುವ ಈ ಕ್ಷೇತ್ರಕ್ಕೆ ಭಕ್ತರು ತನ್ನ ಇಷ್ಟಾರ್ಥಗಳನ್ನು ಈಡೇರುವಂತೆ ಪ್ರಾರ್ಥಿಸುತ್ತಾರೆ. ಅದರಂತೆ ಸಕಲ ಕಷ್ಟಗಳನ್ನು ದೂರ ಮಾಡಿ ಇಷ್ಟಾರ್ಥಗಳು ಈಡೇರಿಸುವ ಈ ತಾಯಿಯ ಪವಾಡ ಸೋಜುಗವೇ ಸರಿ
ಕಡಬ ತಾಲೂಕಿನ ಬಿಳಿ ನೆಲೆ ಗ್ರಾಮದ ತೋಟದ ಮೂಲೆ ಮನೆಯ ಹರೀಶ್ ಮತ್ತು ರಾಜೇಶ್ವರಿ ಎಂಬುವವರು ಕೆಲವು ವರ್ಷಗಳ ಹಿಂದೆ ಮದುವೆಯಾದರು. ಅವರ ದಾಂಪತ್ಯ ಜೀವನದಲ್ಲಿ ಮಕ್ಕಳ ಭಾಗ್ಯ ಕೂಡಿ ಬರಲಿಲ್ಲ. ಹಲವಾರು ದೈವ ದೇವರಿಗೆ ಹರಕೆ ಕೊಟ್ಟರು ಪ್ರಯೋಜನ ಸಿಗಲಿಲ್ಲ. ಆ ಸಂದರ್ಭದಲ್ಲಿ ಪ್ರಸಿದ್ಧ ಕ್ಷೇತ್ರವಾದ ಶ್ರೀ ಚಾಮುಂಡೇಶ್ವರಿ ಕ್ಷೇತ್ರ ಆರಿಕೋಡಿಗೆ ಆಗಮಿಸಿ ಶ್ರೀ ಚಾಮುಂಡೇಶ್ವರಿ ದೇವಿಯ ಅಭಯದ ನುಡಿಯಲ್ಲಿ ವಿಚಾರಣೆ ಮಾಡಿದರು. ಆ ಸಂದರ್ಭದಲ್ಲಿ ದಾಂಪತ್ಯದಲ್ಲಿದ್ದ ಸಮಸ್ಯೆಯನ್ನು ಪರಿಹಾರ ಮಾಡಿ, ನಿಮ್ಮ ದಾಂಪತ್ಯದಲ್ಲಿ ಒಂದು ವರ್ಷದ ಒಳಗಡೆ ಮಗು ಜನನವಾಗುತ್ತದೆ ಎಂದು ಅಭಯ ಕೊಟ್ಟಳು. ಕೊಟ್ಟ ಮಾತಿನ ಪ್ರಕಾರವಾಗಿ ಅವರ ದಾಂಪತ್ಯದಲ್ಲಿ ಮಗುವಿನ ಜನನವಾಯಿತು. ಅವರ ಕತ್ತಲೆಯ ಬದುಕನ್ನು ಬೆಳಕು ಮಾಡಿದ ಶ್ರೀದೇವಿ ಚಾಮುಂಡೇಶ್ವರಿಗೆ ವಿಶೇಷವಾಗಿ ಪೂಜೆಯನ್ನು ಸಮರ್ಪಣೆ ಮಾಡಿದರು.