• October 18, 2024

ಮುಂಡಾಜೆ ಶತಮಾನೋತ್ಸವ ಧ್ವಜಾರೋಹಣ: ಧ್ವಜ ಕಟ್ಟೆ ಉದ್ಘಾಟನೆ

 ಮುಂಡಾಜೆ ಶತಮಾನೋತ್ಸವ ಧ್ವಜಾರೋಹಣ: ಧ್ವಜ ಕಟ್ಟೆ ಉದ್ಘಾಟನೆ

 

ಮುಂಡಾಜೆ: ಶಾಲೆ ಊರ ದೇವಾಲಯಕ್ಕಿಂತ ದೊಡ್ಡದು.
ಸಣ್ಣ ಪ್ರಾಯದಿಂದ ಶಿಸ್ತು ನಮ್ರತೆ ದೇಶಭಕ್ತಿ ಕಲಿಸಿಕೊಡುವ ಕೇಂದ್ರ.ಸರಕಾರಿ ಶಾಲೆಯಲ್ಲಿ ಪುಸ್ತಕದ ಶಿಕ್ಷಣ ಮಾತ್ರವಲ್ಲ. ಇಲ್ಲಿ ಅನೇಕ ಅವಕಾಶಗಳಿದ್ದು, ಸರ್ವತೋಮುಖ ಶಿಕ್ಷಣ ದೊರೆಯುತ್ತದೆ ಎಂದು ನಿವೃತ್ತ ಮೇಜರ್ ಜನರಲ್, ರೋಟರಿ ದ್ವಿತೀಯ ರಾಜ್ಯಪಾಲ ಎಂ.ವಿ ಭಟ್ ಅವರು ಹೇಳಿದರು.

ಅವರು ಮುಂಡಾಜೆ ಸರಕಾರಿ ಉನ್ನತೀಕರಿಸಿದ ಶಾಲೆಯ ಶತಮಾನೋತ್ಸವದ ಧ್ವಜಾರೋಹಣ ಹಾಗೂ ನೂತನ ಧ್ವಜ ಕಟ್ಟೆ ಉದ್ಘಾಟಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳಲ್ಲಿ ದೃಢತೆ ಮತ್ತು ಶ್ರದ್ಧೆ ಬಹಳ ಮುಖ್ಯ. ದೇಶ ಪ್ರೇಮವನ್ನು ಆಂತರಾತ್ಮದಿ ಮೂಡಿಸಿಕೊಳ್ಳಬೇಕು ಎಂದರು.

ಅಧ್ಯಕ್ಷತೆಯನ್ನು ಶಾಲಾಭಿವೃದ್ದಿ ಸಮಿತಿ ಅಧ್ಯಕ್ಷ ಗಣೇಶ್ ಬಂಗೇರ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಮುಂಡಾಜೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ವಿನಯಚಂದ್ರ, ಗ್ರಾ.ಪಂ ಸದಸ್ಯರು ಹಾಗೂ ಶತಮಾನೋತ್ಸವ ಸಮಿತಿ ಕಾರ್ಯಾಧ್ಯಕ್ಷ ಅಗರಿ ರಾಮಣ್ಣ ಶೆಟ್ಟಿ, ಗ್ರಾ.ಪಂ ಉಪಾಧ್ಯಕ್ಷೆ ದಿಶಾ ಪಟವರ್ಧನ್, ಸಿಆರ್‌ಪಿ ಪ್ರಶಾಂತ್ ಪೂಜಾರಿ ಶುಭ ಕೋರಿದರು.

ಸಮಾರಂಭದಲ್ಲಿ ಕೃಷಿಕರಾದ ಅಡೂರು ವೆಂಕಟ್ರಾಯ, ಕ್ಷೇತ್ರ ಶಿಕ್ಷಣಾಧಿಕಾರಿ ವಿರೂಪಾಕ್ಷಪ್ಪ, ಶಿಕ್ಷಣ ಸಮನ್ವಯಾಧಿಕಾರಿ ಶಂಭು ಶಂಕರ್, ಗ್ರಾ.ಪಂ ಸದಸ್ಯರಾದ ಅಶ್ವಿನಿ, ವಿಮಲಾ, ಜಗದೀಶ್ ನಾಯ್ಕ್, ಸುಮಲತಾ, ಎಂ.ವಿಶ್ವನಾಥ ಶೆಟ್ಟಿ, ರವಿಚಂದ್ರ ನೇಕಾರ, ಪಿಡಿಒ ಗಳಾದ ಸುಮಾ ಎ.ಎಸ್ ಮತ್ತು ಗಾಯತ್ರಿ ಉಪಸ್ಥಿತರಿದ್ದರು.

ಶಾಲಾ ಮುಖ್ಯ ಶಿಕ್ಷಕಿ ಮಂಜುಳಾ ಸ್ವಾಗತಿಸಿದರು.
ಶಿಕ್ಷಕರಾದ ಸುನಂದ, ರೂಪ, ಶಿವ ನಾಯ್ಕ್, ಸೌಮ್ಯಾ ಇವರು ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದರು.

ಶಿಕ್ಷಕಿ ಸುಮಂಗಲಾ ಕಾರ್ಯಕ್ರಮ ನಿರೂಪಿಸಿದರು.
ಜಯಶ್ರೀ ಧನ್ಯವಾದವಿತ್ತರು.

Related post

Leave a Reply

Your email address will not be published. Required fields are marked *

error: Content is protected !!