ಶ್ರೀ ಧ.ಮ.ಆ.ಮಾ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಶಿಕ್ಷಕರಿಗೆ ಉಚಿತ ರಕ್ತದೊತ್ತಡ ಪರೀಕ್ಷೆ
ಧರ್ಮಸ್ಥಳ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ ಧರ್ಮಸ್ಥಳದಲ್ಲಿ ಶಾಲಾ ಶಿಕ್ಷಕರಿಗೆ ಉಚಿತ ರಕ್ತದೊತ್ತಡ ಪರೀಕ್ಷೆ ಹಾಗು ರಕ್ತದಲ್ಲಿನ ಮಧುಮೇಹ ಪರೀಕ್ಷೆ
ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆ, ಧರ್ಮಸ್ಥಳದಲ್ಲಿ ಯುವ ಭಾರತೀಯ ರೆಡ್ ಕ್ರಾಸ್ ಇದರ ವತಿಯಿಂದ ಶಾಲಾ ಶಿಕ್ಷಕರಿಗೆ ಹಾಗೂ ಶಿಕ್ಷಕೇತರ ಸಿಬ್ಬಂದಿಗಳಿಗೆ ಉಚಿತ ರಕ್ತದೊತ್ತಡ ಪರೀಕ್ಷೆ ಹಾಗೂ ರಕ್ತದಲ್ಲಿನ ಮಧುಮೇಹ ಪರೀಕ್ಷೆಯನ್ನು ಮಾಡಲಾಯಿತು.
ಯುವ ಭಾರತೀಯ ರೆಡ್ ಕ್ರಾಸ್ ಸಂಘದ ಸದಸ್ಯರುಗಳು ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳಾ ಎಂವಿ ಇವರ ಮಾರ್ಗದರ್ಶನದಲ್ಲಿ ರಕ್ತದೊತ್ತಡ ಪರೀಕ್ಷೆ ಮಾಡುವುದು ಹೇಗೆ ಅದಕ್ಕೆ ಬೇಕಾಗುವ ಸಾಮಗ್ರಿಗಳು ಏನು ಸಾಮಾನ್ಯ ರಕ್ತದೊತ್ತಡ ಕಡಿಮೆ ರಕ್ತದೊತ್ತಡ ಹಾಗೂ ಅಧಿಕ ರಕ್ತದೊತ್ತಡದ ನಡುವಿನ ವ್ಯತ್ಯಾಸವೇನು?, ನಾಡಿ ಮಿಡಿತ ಅದರ ವ್ಯತ್ಯಯ ಇತ್ಯಾದಿಗಳನ್ನು ತಿಳಿದರು.ಇನ್ನು ರಕ್ತದಲ್ಲಿನ ಮಧುಮೇಹ ಪರೀಕ್ಷೆಗೆ ಬೇಕಾಗುವ ವಸ್ತುಗಳು ಹೇಗೆ ಪರೀಕ್ಷಿಸುವುದು, ಸಾಮಾನ್ಯ ,ಕಡಿಮೆ ಮತ್ತು ಹೆಚ್ಚು ಕಂಡು ಹಿಡಿಯುವ ಕ್ರಮ ಅದಕ್ಕಾಗಿ ಕೈಗೊಳ್ಳುವ ಕ್ರಮಗಳನ್ನು ತಿಳಿದರು.
ಜೊತೆಗೆ ತಾವೂ ಸಹ ಪ್ರಾಯೋಗಿಕವಾಗಿ ಮಾಡಿದ್ದಾರೆ. ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆ ಧರ್ಮಸ್ಥಳದ ಮಾಜಿ ಉದ್ಯೋಗಿ ಶ್ರೀ ಅಚ್ಚುತ ಇವರು ಇದರ ಮೊದಲ ಫಲಾನುಭವಿಗಳು. ಶಾಲೆಯ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ.