ಮುಂಡಾಜೆ: ಬೈಕ್ ಸ್ಕಿಡ್: ನೆರಿಯ ಗ್ರಾಮದ ಪಾದೆಗುಡ್ಡೆ ನಿವಾಸಿ ಪ್ರದೀಪ್ ಸಾವು
ಮುಂಡಾಜೆ: ಮುಂಡಾಜೆ ಗ್ರಾಮದ ದುರ್ಗಾಪರಮೇಶ್ವರಿ ದೇವಸ್ಥಾನದ ಪಕ್ಕದ ತಿರುವು ರಸ್ತೆಯಲ್ಲಿ ಬೈಕ್ ಸ್ಕಿಡ್ ಆಗಿ ಸವಾರ ಮೃತಪಟ್ಟ ಘಟನೆ ನ.23 ರಂದು ನಡೆದಿದೆ.
ಅಪಘಾತವಾದ ರಸ್ತೆಯು ಅಪಾಯಕಾರಿ ವಲಯವಾಗಿದ್ದು ಈ ಹಿಂದೆಯೂ ಇದೇ ರಸ್ತೆಯಲ್ಲಿ ಹಲವಾರು ಭಾರಿ ಅಪಘಾತಗಳು ಸಂಭವಿಸಿದೆ.
ಮೃತಪಟ್ಟ ಬೈಕ್ ಸವಾರ ನೆರಿಯ ಗ್ರಾಮದ ಪಾದೆಗುಡ್ಡೆ ನಿವಾಸಿ ಪ್ರದೀಪ್( 22)
ಅಪಘಾತವಾದ ತಕ್ಷಣ ಸ್ಥಳೀಯರು ಅವರನ್ನು ಉಜಿರೆ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆ ತರವ ವೇಳೆ ದಾರಿ ಮಧ್ಯೆ ಉಸಿರು ಚೆಲ್ಲಿದ್ದಾರೆ.